ಉಡುಪಿ ಕೊಚ್ಚಿನ್ ಶಿಪ್ ಯಾರ್ಡ್ ನಲ್ಲಿ ಜಾಬ್ ಆಫರ್ - Mahanayaka
2:10 PM Thursday 26 - December 2024

ಉಡುಪಿ ಕೊಚ್ಚಿನ್ ಶಿಪ್ ಯಾರ್ಡ್ ನಲ್ಲಿ ಜಾಬ್ ಆಫರ್

udupi cochin shipyard recruitment
10/11/2024

Udupi Kocchin Shipyard Recruitment 2024 : ಉಡುಪಿ ಕೊಚ್ಚಿನ್ ಶಿಪ್ ಯಾರ್ಡ್ ನಲ್ಲಿ ಗ್ರಾಜುವೇಟ್ ಹಾಗೂ ಟೆಕ್ನೀಷಿಯನ್ ಅಪ್ಪ್ರೆಂಟಿಸ್ ಷಿಪ್ ನೇಮಕಾತಿಗಾಗಿ ಅರ್ಜಿ ಕರೆಯಲಾಗಿದೆ.

ಯಾವ ಯಾವ ವಿಭಾಗದಲ್ಲಿ ಅಪ್ಪ್ರೆಂಟಿಸ್ ಷಿಪ್ ಮಾಡಬಹುದು?

*   ಉಡುಪಿ ಕೊಚ್ಚಿನ್ ಶಿಪ್ ಯಾರ್ಡ್ ಎಲೆಕ್ಟ್ರಿಕಲ್ ಮತ್ತು ಮೆಕಾನಿಕಲ್ ವಿಭಾಗದಲ್ಲಿ ಗ್ರಾಜುವೇಟ್ ಅಪ್ಪ್ರೆಂಟಿಸ್ ಷಿಪ್  ಗಾಗಿ ಅರ್ಜಿ ಆಹ್ವಾನಿಸಲಾಗಿದೆ.

*   ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್ ಮತ್ತು ಮೆಕಾನಿಕಲ್ ವಿಭಾಗದಲ್ಲಿ ಟೆಕ್ನೀಷಿಯನ್ ಅಪ್ಪ್ರೆಂಟಿಸ್ ಷಿಪ್ ಗಾಗಿ ಅರ್ಜಿ ಆಹ್ವಾನಿಸಲಾಗಿದೆ.

ಯಾವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು?

*   ಸಂಬಂಧಪಟ್ಟ ವಿಭಾಗದಲ್ಲಿ ಡಿಪ್ಲೋಮಾ ಮುಗಿಸಿದವರು ಟೆಕ್ನಿಷಿಯನ್ ಅಪ್ಪ್ರೆಂಟಿಸ್ ಷಿಪ್ ಗೆ ಅರ್ಜಿ ಸಲ್ಲಿಸಬಹುದು.

*   ಸಂಬಂಧಪಟ್ಟ ವಿಭಾಗದಲ್ಲಿ ಪದವಿ ಮುಗಿಸಿದವರು  ಗ್ರಾಜುವೇಟ್ ಅಪ್ಪ್ರೆಂಟಿಸ್ ಷಿಪ್ ಗೆ ಅರ್ಜಿ ಸಲ್ಲಿಸಬಹುದು.

ತರಬೇತಿ ಜೊತೆಗೆ ಮಾಸಿಕ ವೇತನ :

ಆಯ್ಕೆಯಾಗುವಂತಹ ಅಭ್ಯರ್ಥಿಗಳಿಗೆ ಮಾಸಿಕ ಸ್ಟೈಪೆಂಡ್ ಅನ್ನು ಈ ನೀಡಲಾಗುವುದು. ಟೆಕ್ನಿಷಿಯನ್ ಅಪ್ಪ್ರೆಂಟಿಸ್ ಷಿಪ್ ಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 10,200ರೂ. ಹಾಗೂ ಗ್ರಾಜುವೇಟ್ ಅಪ್ಪ್ರೆಂಟಿಸ್ ಷಿಪ್ ಗೆ ಆಯ್ಕೆಯಾದವರಿಗೆ 12,000ರೂ. ನೀಡಲಾಗುವುದು.

ವಯೋಮಿತಿ ಅರ್ಹತೆಗಳು:  ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು 18 ವರ್ಷ ಮೇಲ್ಪಟ್ಟಿರಬೇಕು.

ಅರ್ಜಿ ಸಲ್ಲಿಸುವ ಮಾಹಿತಿ :

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನವೆಂಬರ್ 18ನೇ ತಾರೀಖಿನ ಒಳಗಾಗಿ ಈ ಕೆಳಗಿನ ಜಾಲತಾಣಕ್ಕೆ ಭೇಟಿ ನೀಡಿ ನೋಂದಾಯಿಸಿಕೊಳ್ಳಿ.

ಜಾಲತಾಣ: https://nats.education.gov.in


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ