ಗೋವಾ ಸಿಎಂ ಮಾಂಸಾಹಾರ ಸೇವಿಸಿ ಕೃಷ್ಣ ಮಠ ಭೇಟಿ ಆರೋಪ: ಊಟ ಮಾಡುವಾಗ ನಾನೂ ಜೊತೆಗಿದ್ದೆ ಎಂದ ಉಡುಪಿ ಶಾಸಕ ರಘುಪತಿ ಭಟ್ - Mahanayaka
6:07 PM Wednesday 11 - December 2024

ಗೋವಾ ಸಿಎಂ ಮಾಂಸಾಹಾರ ಸೇವಿಸಿ ಕೃಷ್ಣ ಮಠ ಭೇಟಿ ಆರೋಪ: ಊಟ ಮಾಡುವಾಗ ನಾನೂ ಜೊತೆಗಿದ್ದೆ ಎಂದ ಉಡುಪಿ ಶಾಸಕ ರಘುಪತಿ ಭಟ್

pramod savanth
11/10/2022

ಉಡುಪಿ: ಗೋವಾ ಸಿಎಂ ಪ್ರಮೋದ್ ಸಾವಂತ್ ಮಾಂಸಹಾರ ಸೇವಿಸಿ ಕೃಷ್ಣ ಮಠ ಭೇಟಿ ಆರೋಪಕ್ಕೆ ಸಂಬಂಧಿಸಿದಂತೆ ಉಡುಪಿ ಶಾಸಕ ರಘುಪತಿ ಭಟ್ ಪ್ರತಿಕ್ರಿಯಿಸಿದ್ದು, ಮಧ್ಯಾಹ್ನ  ಊಟ ಮಾಡುವಾಗ ನಾನೂ ಜೊತೆಗಿದ್ದೆ ಎಂದಿದ್ದಾರೆ.

ಗೋವಾ ಸಿಎಂ ಸಾವಂತ್ ಊಟಕ್ಕೆ ಯಾವುದೇ ಮಾಂಸಹಾರ ಸೇವಿಸಿಲ್ಲ. ಸಿಎಂ ಜೊತೆಗೆ ಬಂದಿದ್ದ ಸಿಬ್ಬಂದಿಗಳಿಗೆ ಮಾಂಸಾಹಾರ ಊಟದ ವ್ಯವಸ್ಥೆ ಇತ್ತು. ಸಿಎಂ ಸಾವಂತ್ ಸಸ್ಯಾಹಾರ ಸೇವಿಸಿ ಮಠಕ್ಕೆ ಹೋಗಿದ್ದಾರೆ. ಆರೋಪಿಸುವವರ ಬಳಿ ಏನು ಸಾಕ್ಷ್ಯ ಇದೆ ನನಗೆ ಗೊತ್ತಿಲ್ಲ ಎಂದು ರಘುಪತಿ ಭಟ್ ಹೇಳಿದರು.

ಹೋಟೆಲಿನ ಮೆನು ನೋಡಿ ಹೇಳಿದ್ದಾರಾ, ಗೊತ್ತಿಲ್ಲ. ಸಿಎಂ ಜೊತೆ 40 – 50 ಅಧಿಕಾರಿಗಳು ಬಂದಿದ್ದರು. ಆರೋಪಿಸುವವರು ಹೋಟೆಲಿನ ಆರ್ಡರ್ ಮೆನು ನೋಡಿ ಹೇಳಿರಬಹುದು. ಅಧಿಕಾರಿ, ಸಿಬಂದಿಗಳಿಗೆ ಮೀನನ್ನು ಆರ್ಡರ್ ಮಾಡಿದ್ದಾರೆ. ಆದರೆ, ಚುನಾವಣೆ ಹತ್ತಿರ ಬಂದಿರೋದ್ರಿಂದ ಈ ಆರೋಪ ಬಂದಿದೆ ಎಂದು ಅವರು ಹೇಳಿದರು.

ಸಿದ್ದರಾಮಯ್ಯ ನಾನ್ ವೆಜ್ ತಿಂದು ದೇವಸ್ಥಾನಕ್ಕೆ ಹೋಗಿದ್ದಾರೆ. ಆ ವಿಡಿಯೋ ಪೋಟೊ ಸಮೇತ ಸಾಕ್ಷಿ ಇಟ್ಟು ಬಿಜೆಪಿ ಮಾತನಾಡಿದೆ. ಸಿದ್ದರಾಮಯ್ಯ ನಾನು ತಪ್ಪಿ ಹೋದೆ, ನೆನಪಿಲ್ಲ ಎಂದಿದ್ದರೇ ದೊಡ್ಡ ಸುದ್ದಿಯಾಗುತ್ತಿರಲಿಲ್ಲ. ನಾನು ದನದ ಮಾಂಸ ತಿಂದು ಹೋಗುತ್ತೇನೆ ಏನಾಗುತ್ತದೆ ಎಂದು ದರ್ಪದಿಂದ ಮಾತನಾಡಿದ್ದರು. ಕಾಂಗ್ರೆಸ್ ನವರು ಪೋಟೋ, ವಿಡಿಯೋ ನೀಡಿ ಮಾತನಾಡಲಿ ಎಂದು ರಘುಪತಿ ಭಟ್ ಹೇಳಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ