ಉಡುಪಿ: ಹತ್ಯೆಗೀಡಾದವರ ಅಂತಿಮ ದರ್ಶನಕ್ಕೆ ಹರಿದು ಬಂದ ಜನಸಾಗರ: ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
ಉಡುಪಿ: ನೇಜಾರು ತೃಪ್ತಿ ಲೇಔಟ್‌ನಲ್ಲಿ ಕೊಲೆಗೀಡಾದ ನಾಲ್ವರ ಅಂತಿಮ ದರ್ಶನಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಜನ ಹರಿದು ಬಂದರು. ಈ ವೇಳೆ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟುವಂತಿತ್ತು.
ನಾಲ್ಕು ಮೃತದೇಹಗಳ ಮರಣೋತ್ತರ ಪರೀಕ್ಷೆ ಪ್ರಕ್ರಿಯೆ ಇಂದು ಬೆಳಗಿನ ಜಾವ ನಾಲ್ಕು ಗಂಟೆಗೆ ಸುಮಾರಿಗೆ ಮಣಿಪಾಲ ಕೆಎಂಸಿ ಶವಗಾರದಲ್ಲಿ ನೆರವೇರಿಸಲಾಯಿತು. ಬಳಿಕ ನಾಲ್ವರ ಪ್ರಾರ್ಥಿವ ಶರೀರವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಯಿತು.
ನೂರು ಮುಹಮ್ಮದ್ ಸೌದಿ ಅರೆಬಿಯಾದಿಂದ ಇಂದು ಬೆಳಗ್ಗೆ 6ಗಂಟೆ ಸುಮಾರಿಗೆ ಉಡುಪಿಗೆ ಆಗಮಿಸಿದರು. ನಂತರ ನಾಲ್ಕು ಪ್ರಾರ್ಥಿವ ಶರೀರಗಳನ್ನು ಉಡುಪಿ ಮಸೀದಿಯಿಂದ ನೇಜಾರು ತೃಪ್ತಿ ಲೇಔಟ್‌ನಲ್ಲಿರುವ ಮನೆಗೆ ಕೊಂಡೊಯ್ಯಲಾಯಿತು. ಅಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.
ಸಾವಿರಾರು ಸಂಖ್ಯೆಯಲ್ಲಿ ವಿವಿಧ ಧರ್ಮಿಯರು ಆಗಮಿಸಿ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ಬಹುತೇಕ ಮಂದಿ ಮಕ್ಕಳ ಈ ಸಾವು ಕಂಡು ಮಮ್ಮಲ ಮರುಗಿದರು. ಮಹಿಳೆಯರು ಮಕ್ಕಳು ಕಣ್ಣೀರಿಟ್ಟರು. ಅನೇಕ ಸಾರ್ವಜನಿಕರ ಕಣ್ಣುಗಳು ತೇವಗೊಂಡವು. ಬಳಿಕ ಮಧ್ಯಾಹ್ನ ಕೋಡಿಬೆಂಗ್ರೆ ಮಸೀದಿಯಲ್ಲಿ ಅಂತ್ಯಕ್ರಿಯೆ ನೆರವೇರಿಸ ಲಾಯಿತು. ಈ ಸಂದರ್ಭದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿದ್ದರು.
ಇದನ್ನೂ ಓದಿ:
ಇದನ್ನೂ ಓದಿ:
ಉಡುಪಿಯಲ್ಲಿ ನಾಲ್ಕು ಹತ್ಯೆಯಾದರೂ ತುಟಿತೆರೆಯದ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್!: ತೀವ್ರ ಆಕ್ರೋಶ