ಉಡುವಿನ ಮೇಲೆ ಲೈಂಗಿಕ ಕಿರುಕುಳ: ನಾಲ್ವರು ಆರೋಪಿಗಳ ಬಂಧನ
ಮಹಾರಾಷ್ಟ್ರ: ಉಡುವಿನ ಮೇಲೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದ್ದು, ಮಹಾರಾಷ್ಟ್ರದ ಸಹ್ಯಾದ್ರಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಈ ಘಟನೆ ನಡೆದಿದೆ.
ಬೇಟೆಗಾರರು ಹುಲಿ ಅಭಯಾರಣ್ಯಕ್ಕೆ ನುಗ್ಗಿ ಉಡು ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ. ಸಂದೀಪ್ ತುಕ್ರಾಮ್, ಪವಾರ್ ಮಂಕೇಶ್, ಜನಾರ್ದನ್ ಕಾಂಟೆಕರ್ ಮತ್ತು ಅಕ್ಷಯ್ ಸುನಿಲ್ ಬಂಧಿತ ಆರೋಪಿಗಳಾಗಿದ್ದಾರೆ.
ಸಂಶಯಾಸ್ಪದವಾಗಿ ಕಾಡಿನಲ್ಲಿ ಅಲೆದಾಡುತ್ತಿರುವುದನ್ನು ಸಿಸಿಟಿವಿಯಲ್ಲಿ ಕಂಡ ಅರಣ್ಯಾಧಿಕಾರಿಗಳು ಇವರನ್ನು ವಿಚಾರಣೆಗೆ ಒಳಪಡಿಸಿದಾಗ ನಂತರ ಇವರ ಮೊಬೈಲ್‌ಗಳನ್ನು ಪರಿಶೀಲಿಸಿದಾಗ ಅದರಲ್ಲಿ ಲೈಂಗಿಕ ದೌರ್ಜನ್ಯದ ದೃಶ್ಯಗಳನ್ನು ಚಿತ್ರೀಕರಿಸಲಾಗಿರುವುದು ಪತ್ತೆಯಾಗಿದೆ. ಹೀಗಾಗಿ ಕೃತ್ಯ ಬಯಲಿಗೆ ಬಂದಿದೆ.
ಈ ಜೀವಿಯು ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ರ ಅಡಿಯಲ್ಲಿ ಸಂರಕ್ಷಿತ ಜಾತಿಯಾಗಿದೆ. ಘಟನೆ ಸಂಬಂಧ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1duNIQRfXnJcfQKWPzNqD
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಅಂಬೇಡ್ಕರ್ ಜಯಂತಿ ಪ್ರಯುಕ್ತ ಕನ್ನಡ ಸ್ಟೇಟಸ್ ಗಳು
ಹುಟ್ಟೂರಿಗೆ ತಲುಪಿದ ಹಿಂದೂ ಗುತ್ತಿಗೆದಾರ ಸಂತೋಷ್ ಪಾಟೀಲ್ ಪಾರ್ಥಿವ ಶರೀರ
ಅಂಬೇಡ್ಕರ್ ಜಯಂತಿ ಶುಭಾಶಯ ಕೋರಿದ ಪ್ರಧಾನಿ, ಸಿಎಂ, ಮಾಜಿ ಸಿಎಂಗಳು
ನಿಂಬೆ ಹಣ್ಣಿನ ಬೆಲೆ ದಿಡೀರ್ ಏರಿಕೆ :100 ಕೆ.ಜಿಗೂ ಅಧಿಕ ನಿಂಬೆಹಣ್ಣು ಕಳವು
ಈಶ್ವರಪ್ಪನವರ ಬೆವರಿಳಿಸಿದ ಫೋನ್ ಕರೆ: ಗಾಬರಿಯಿಂದ ಬೆಂಗಳೂರಿಗೆ ತೆರಳಿದ ಈಶ್ವರಪ್ಪ