ಉದ್ಯೋಗ ಹುಡುಕಿಕೊಂಡು ಹೋದವ ಮಾಡಬಾರದ ಕೆಲಸ ಮಾಡಿದ | ಇದೀಗ ಆತನ ಸ್ಥಿತಿ ಏನಾಗಿದೆ ಗೊತ್ತಾ? - Mahanayaka

ಉದ್ಯೋಗ ಹುಡುಕಿಕೊಂಡು ಹೋದವ ಮಾಡಬಾರದ ಕೆಲಸ ಮಾಡಿದ | ಇದೀಗ ಆತನ ಸ್ಥಿತಿ ಏನಾಗಿದೆ ಗೊತ್ತಾ?

14/03/2021

ನವದೆಹಲಿ:  ಮದುವೆಯಾಗಿ ಎರಡು ಮಕ್ಕಳಿದ್ದ ಮುಕೇಶ್ ಪವಾನ್ ಎಂಬ ವ್ಯಕ್ತಿ ತನ್ನ ಊರಾದ ಬಿಹಾರದ ದರ್ಭಂಗದಲ್ಲಿ ವಾಸವಿದ್ದ. ಉದ್ಯೋಗ ನಿಮಿತ್ತ ನವದೆಹಲಿಗೆ ತೆರಳಿದ್ದ ಆತ ಮಾಡಬಾರದ ಕೆಲಸ ಮಾಡಿ ಇದೀಗ ಜೈಲು ಕಂಬಿ ಎಣಿಸುತ್ತಿದ್ದಾನೆ.

ಮುಕೇಶ್ ಪವಾನ್  ನವದೆಹಲಿಯಲ್ಲಿ ಬಾಡಿಗೆ ಕಾರೊಂದನ್ನು ಓಡಿಸುತ್ತಿದ್ದ. ಈ ನಡುವೆ ಆತನಿಗೆ 20 ವರ್ಷ ವಯಸ್ಸಿನ ರೇಷ್ಮಾ ಎಂಬಾಕೆಯ ಪರಿಚಯವಾಗಿದ್ದು,  ಆಕೆಯೊಂದಿಗೆ ಲೀವ್ ಇನ್ ರಿಲೇಷನ್ ಶಿಪ್ ಬೆಳೆಸಿದ ಮುಖೇಶ್ ಸುಭಾಷ್ ಪ್ಲೇಸ್ ಪ್ರದೇಶದಲ್ಲಿ ವಾಸಿಸುತ್ತಿದ್ದ.

ಶುಕ್ರವಾರ ರಾತ್ರಿ ವೇಳೆ ರೇಷ್ಮಾ ಹಾಗೂ ಮುಕೇಶ್ ಪವಾನ್  ನಡುವೆ ಜಗಳ ಆರಂಭವಾಗಿದ್ದು, ಜಗಳ ವಿಪರೀತಕ್ಕೆ ತಿರುಗಿ ಮುಕೇಶ್, ರೇಷ್ಮಾಳನ್ನು  ತಾನು ವಾಸಿಸುತ್ತಿದ್ದ ಕಟ್ಟಡದಿಂದ ಎತ್ತಿ ಎಸೆದಿದ್ದಾನೆ. ನೆಲಕ್ಕೆ ಬಿದ್ದ ರೇಷ್ಮಾ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ. ರೇಷ್ಮಾಳ ಮೃತದೇಹವನ್ನು ಸುಟ್ಟು ಹಾಕಲು ಮುಕೇಶ್ ಯತ್ನಿಸಿದ್ದ. ಆದರೆ ಅಷ್ಟರಲ್ಲಾಗಲೇ ಸ್ಥಳೀಯರಿಗೆ ವಿಚಾರ ತಿಳಿದು ಬಂದಿದೆ. ಹೀಗಾಗಿ ಆತ ಸ್ಥಳದಿಂದ ಪರಾರಿಯಾಗಿದ್ದಾನೆ.

ಇತ್ತ ತನ್ನ ಪತಿ ತಮ್ಮ ಕುಟುಂಬಕ್ಕಾಗಿ ದುಡಿಯುತ್ತಿದ್ದಾನೆ ಎಂದು ಅಂದುಕೊಂಡಿದ್ದ ಪತ್ನಿ ಹಾಗೂ ಮಕ್ಕಳಿಗೆ ಮುಕೇಶ್ ನ ಅಸಲಿ ಮುಖ ಈಗ ತಿಳಿದು ಬಂದಿದೆ.

ಇತ್ತೀಚಿನ ಸುದ್ದಿ