ಭಾರತದ ಕೊಳಕು ಭಾಷೆ "ಕನ್ನಡ" ಎಂದ ಗೂಗಲ್ | ಕನ್ನಡಿಗರಿಂದ ಆಕ್ರೋಶ - Mahanayaka
9:09 PM Wednesday 11 - December 2024

ಭಾರತದ ಕೊಳಕು ಭಾಷೆ “ಕನ್ನಡ” ಎಂದ ಗೂಗಲ್ | ಕನ್ನಡಿಗರಿಂದ ಆಕ್ರೋಶ

google
03/06/2021

ಬೆಂಗಳೂರು:  ದೈತ್ಯ ಸರ್ಚ್ ಇಂಜಿನ್ ಗೂಗಲ್ ನಲ್ಲಿ ಪ್ರಮಾದವೊಂದು ನಡೆದು ಹೋಗಿದ್ದು,  “ಭಾರತದ ಅತೀ ಕೊಳಕು ಭಾಷೆ ಯಾವುದು” ಎಂದು ಗೂಗಲ್ ನಲ್ಲಿ ಸರ್ಚ್ ಮಾಡಿದರೆ, ಕನ್ನಡ ಎಂದು ತೋರಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಕನ್ನಡಿಗರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗೂಗಲ್ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು. ಕನ್ನಡ ಭಾಷೆಯ ಬಗ್ಗೆ ಗೂಗಲ್ ನಲ್ಲಿ ಬರುತ್ತಿರುವ ತಪ್ಪನ್ನು ಸರಿಪಡಿಸಿಕೊಳ್ಳಬೇಕು ಎನ್ನುವ ಒತ್ತಾಯಗಳು ಕೇಳಿ ಬಂದಿದೆ. ಇನ್ನೂ, ಗೂಗಲ್ ನಲ್ಲಿ ಇಂತಹ ಪ್ರಮಾದಗಳನ್ನು ಸರಿಪಡಿಸಲು ರಿಪೋರ್ಟ್ ಆಯ್ಕೆಗಳಿವೆ. ಈ ರಿಪೋರ್ಟ್ ನ್ನು ಮಾಡಿದರೆ, ಅಂತಹ ಆಕ್ಷೇಪಾರ್ಹ ಸಂಗತಿಗಳನ್ನು ಗೂಗಲ್ ತೆಗೆದು ಹಾಕುತ್ತದೆ.

ಇನ್ನೂ ಈ ವಿಚಾರವಾಗಿ ಕನ್ನಡ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಅವರ ನೇತೃತ್ವದಲ್ಲಿ ಗೂಗಲ್ ಗೆ ನೋಟಿಸ್ ಕೂಡ ನೀಡಲಾಗಿದೆ ಎಂದು ತಿಳಿದು ಬಂದಿದೆ. ಇದೊಂದು ವ್ಯವಸ್ಥಿತ ಸಂಚು ಎಂದು ನಾಗಾಭರಣ ಅವರು ಹೇಳಿದ್ದಾರೆ ಎಂದು ವರದಿಯಾಗಿದೆ.

ಇತ್ತೀಚಿನ ಸುದ್ದಿ