ಶಿವಮೊಗ್ಗದಲ್ಲಿ ಉಗ್ರ ಸಂಘಟನೆ ಜೊತೆ ನಂಟಿನ ಆರೋಪದಲ್ಲಿ ಬಂಧಿತನಾಗಿದ್ದ ಆರೋಪಿಯ ತಂದೆ ಸಾವು!
ಶಿವಮೊಗ್ಗದಲ್ಲಿ ಉಗ್ರ ಸಂಘಟನೆ ಜೊತೆ ನಂಟಿನ ಆರೋಪದಲ್ಲಿ ಇತ್ತೀಚಿಗೆ ಬಂಧಿತನಾದ ಶಿವಮೊಗ್ಗ ಜಿಲ್ಲೆಯ ಮಾಝ್ ಮುನೀರ್ ಅಹಮ್ಮದ್ ಯಾನೆ ಮುನೀರ್ ನ ತಂದೆ ಮುನೀರ್ ಸಾಬ್ಜಾನ್ ಇಂದು ಮಂಗಳೂರು ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಮೃತರು ಪತ್ನಿ, ಇಬ್ಬರು ಪುತ್ರರು ಮತ್ತು ಓರ್ವ ಪುತ್ರಿಯನ್ನು ಅಗಲಿದ್ದಾರೆ. 2020ರ ನವೆಂಬರ್‌ನಲ್ಲಿ ಬೆಳಕಿಗೆ ಬಂದ ಮಂಗಳೂರು ನಗರದ ಗೋಡೆ ಬರಹ ಪ್ರಕರಣದಲ್ಲಿ ಮಾಝ್ ಮುನೀರ್ ಆರೋಪಿಯಾಗಿದ್ದ.
ಈ ಬಗ್ಗೆ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಲ್ಲದೇ ಕದ್ರಿ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ. ಕೆಲವು ತಿಂಗಳ ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ.
ಈತ ನಗರದ ಅಪಾರ್ಟ್‌ಮೆಂಟ್ ವೊಂದರಲ್ಲಿ ತಂದೆ-ತಾಯಿಯ ಜೊತೆ ನೆಲೆಸಿದ್ದ. ಮಾಝ್ ಕೆಲವು ದಿನಗಳಿಂದ ನಾಪತ್ತೆಯಾಗಿದ್ದ. ಈ ಬಗ್ಗೆ ಈತನ ತಂದೆ ಮುನೀರ್ ಸಾಬ್ಜಾನ್ ಕದ್ರಿ ಪೊಲೀಸರಿಗೆ ಅಂಚೆ ಮೂಲಕ ನಾಪತ್ತೆ ದೂರು ನೀಡಿದ್ದರು. ಅಲ್ಲದೇ ಹೈಕೋರ್ಟ್‌ನಲ್ಲೂ ಹೆಬಿಯಸ್ ಕಾರ್ಪಸ್ ಅರ್ಜಿ ಹಾಕಿದ್ದರು.
ನಿಷೇಧಿತ ಉಗ್ರ ಸಂಘಟನೆಯ ಜೊತೆ ಸಂಪರ್ಕ ಹೊಂದಿದ್ದ ಆರೋಪದ ಮೇರೆಗೆ ಸೆಪ್ಟೆಂಬರ್ 20ರಂದು ವಿಶೇಷ ಪೊಲೀಸ್ ತಂಡವು ಮಾಝ್ ನನ್ನು ಬಂಧಿಸಿತ್ತು. ಆ ಬಳಿಕ ಮಾಝ್ ನ ತಂದೆ ಮುನೀರ್ ಸಾಬ್ಜಾನ್ ನ ಆರೋಗ್ಯ ಹದಗೆಟ್ಟಿತ್ತು. ಹೀಗಾಗಿ ಇಂದು ಮಂಗಳೂರು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಸಂಜೆ ವೇಳೆ ಚಿಕಿತ್ಸೆ ಫಲಕಾರಿಯಾಗದೇ ಮುನೀರ್ ಸಾಬ್ಜಾನ್ ನಿಧನರಾಗಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka