ಉಗುಳಿದ್ದನ್ನು ನೆಕ್ಕುವಂತೆ ದಲಿತ ವ್ಯಕ್ತಿಗಳ ಮೇಲೆ ದೌರ್ಜನ್ಯ: ಓರ್ವ ಅರೆಸ್ಟ್
ಔರಂಗಾಬಾದ್: ಚುನಾವಣೆಯಲ್ಲಿ ಸೋತ ಸಿಟ್ಟಿನಲ್ಲಿ ವ್ಯಕ್ತಿಯೋರ್ವ ದಲಿತ ಸಮುದಾಯಕ್ಕೆ ಸೇರಿದ ಇಬ್ಬರು ವ್ಯಕ್ತಿಗಳಿಗೆ ಥಳಿಸಿ, ನೆಲಕ್ಕೆ ಉಗಿಸಿ ಅದನ್ನೇ ನೆಕ್ಕಲು ಬಲವಂತಪಡಿಸಿದ ಘಟನೆ ಬಿಹಾರದ ಔರಂಗಾಬಾದ್ ಜಿಲ್ಲೆಯಲ್ಲಿ ನಡೆದಿದೆ.
ತನ್ನ ಸೋಲಿಗೆ ದಲಿತ ಸಮುದಾಯವೇ ಕಾರಣ ಎನ್ನುವ ಸಿಟ್ಟಿನಲ್ಲಿ ವ್ಯಕ್ತಿ ಈ ರೀತಿ ಮಾಡಿದ್ದಾನೆ ಎಂದು ಹೇಳಲಾಗಿದೆ. ಬಲವಂತ್ ಎಂಬಾತ ಚುನಾವಣೆಗೆ ಸ್ಪರ್ಧಿಸಿದ್ದು, ತನಗೆ ಮತಹಾಕುವಂತೆ ಹಣ ಹಂಚಿಕೆ ಮಾಡಿದ್ದ ಎನ್ನಲಾಗಿದೆ. ಆದರೆ, ಚುನಾವಣೆಯಲ್ಲಿ ಸೋತು ಹೋದ ಕಾರಣ ಆಕ್ರೋಶಗೊಂಡ ಆತ, ಹಣ ಪಡೆದು ಮತ ಹಾಕಿಲ್ಲ ಎಂದು ಆರೋಪಿಸಿ ದೌರ್ಜನ್ಯ ನಡೆಸಿದ್ದಾನೆ ಎಂದು ಹೇಳಲಾಗಿದೆ.
ಬಲವಂತ್ ನಡೆಸಿರುವ ಕೃತ್ಯದ ವಿಡಿಯೋ ವೈರಲ್ ಆದ ಬೆನ್ನಲ್ಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾಂತೇಶ್ ಕುಮಾರ್ ಮಿಶ್ರಾ ನಿರ್ದೇಶನದ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಈ ಅಧಿವೇಶನದಲ್ಲಿಯೇ ಮತಾಂತರ ನಿಷೇಧ ಕಾಯ್ದೆ ಪಾಸ್: ಮಾಜಿ ಸಿಎಂ ಯಡಿಯೂರಪ್ಪ
ಭಾರತದ ಹರ್ನಾಜ್ ಕೌರ್ ಸಂಧುಗೆ ಮಿಸ್ ಯುನಿವರ್ಸ್ ಕಿರೀಟ
ಡಾ.ಅಂಬೇಡ್ಕರರ ಕಣ್ಣೀರು ಒರೆಸುವ ಕೈಗಳು ಯಾರವು?
ಸ್ನೇಹಿತನ ಚಿನ್ನದಂಗಡಿಯಲ್ಲಿ ಕಳವು ನಡೆಸಲು ಸುಪಾರಿ ನೀಡಿದ ಇನ್ನೊಂದು ಚಿನ್ನದಂಗಡಿ ಮಾಲಿಕ!
ರಾಜ್ ಕುಮಾರ ಸಿನಿಮಾ ನೋಡ್ಲೇ ಬೇಕು ಮಾಮಾ ಅಂದಿದ್ರು ಪುನೀತ್ | ಸಿದ್ದರಾಮಯ್ಯ