ಉಕ್ರೇನ್ ನ ಮೈಕೊಲೈವ್ ಮೇಲೆ ರಷ್ಯಾ ದಾಳಿ: 12ಕ್ಕೆ ಏರಿಕೆಯಾದ ಮೃತರ ಸಂಖ್ಯೆ
ಕೀವ್: ದಕ್ಷಿಣ ಉಕ್ರೇನ್‌ನ ಮೈಕೊಲೈವ್ ಸರ್ಕಾರಿ ಪ್ರಧಾನ ಕಚೇರಿ ಕಟ್ಟಡದ ಮೇಲೆ ರಷ್ಯಾ ಪಡೆಗಳು ನಡೆಸಿದ್ದ ಕ್ಷಿಪಣಿ ದಾಳಿಯಲ್ಲಿ ಮೃತರ ಸಂಖ್ಯೆ 12ಕ್ಕೆ ಏರಿಕೆಯಾಗಿದ್ದು, 33 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ರಷ್ಯಾ ಪಡೆಗಳು 9 ಮಹಡಿ ಕಟ್ಟಡದ ಮೇಲೆ ಮಂಗಳವಾರ ಬೆಳಗ್ಗೆ ದಾಳಿ ನಡೆಸಿತ್ತು. ಇದರಿಂದ ಕಟ್ಟಡವು ಸಂಪೂರ್ಣವಾಗಿ ಧ್ವಂಸಗೊಂಡಿದ್ದು, 12 ಮಂದಿಯ ಮೃತದೇಹಗಳನ್ನು ಹೊರ ತೆಗೆಯಲಾಗಿದೆ ಎಂದು ಅವರು ಹೇಳಿದ್ದಾರೆ.
ದಾಳಿಯನ್ನು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಖಂಡಿಸಿದ್ದಾರೆ. ಮೈಕೊಲೈವ್ ಜನರಿಂದ ರಷ್ಯಾಕ್ಕೆ ಯಾವುದೇ ಬೆದರಿಕೆ ಇಲ್ಲ. ಕಾರಣವಿಲ್ಲದೆ ಉಕ್ರೇನ್ ಜನರ ಮೇಲೆ ರಷ್ಯಾ ಪಡೆಗಳು ದಾಳಿ ನಡೆಸುತ್ತಿವೆ ಎಂದು ಅವರು ಆರೋಪಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/FZkISFWKknBDvdYkMVFArW
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
SSLC ಪರೀಕ್ಷೆ: ಹಿಜಾಬ್ ಧರಿಸಲು ಅವಕಾಶ ನೀಡಿದ್ದಕ್ಕೆ 7 ಸಿಬ್ಬಂದಿ ಅಮಾನತು
ಮೈ ಮುಟ್ಟಿದ ವಕೀಲನಿಗೆ ಚೇರ್‌ನಿಂದ ಹಲ್ಲೆಗೆ ಮುಂದಾದ ವಕೀಲೆ
ಯುವತಿ ಮೇಲೆ ಗ್ಯಾಂಗ್ ರೇಪ್: ದೆಹಲಿ ಮೂಲದ ನಾಲ್ವರು ಆರೋಪಿಗಳ ಬಂಧನ
ಅಸ್ಪೃಶ್ಯತೆ ಆಚರಿಸುವವರಿಗೆ ಚಾಟಿ ಬೀಸಲು ಸಿದ್ಧವಾಗ್ತಿದೆ ರಾಜ್ಯ ಬಿಜೆಪಿ ಸರ್ಕಾರ!