ರಷ್ಯಾದೊಂದಿಗೆ 30 ದಿನಗಳ ಕದನ ವಿರಾಮಕ್ಕೆ ಅಮೆರಿಕದ ಪ್ರಸ್ತಾಪಕ್ಕೆ ಉಕ್ರೇನ್ ಒಪ್ಪಿಗೆ

ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ಪ್ರಸ್ತಾಪಕ್ಕೆ ಒಪ್ಪಿದ ಉಕ್ರೇನ್ ಅನ್ನು ಸ್ವಾಗತಿಸಿದ್ದಾರೆ. ಸೌದಿ ಅರೇಬಿಯಾದ ಜೆದ್ದಾದಲ್ಲಿ ನಡೆದ ಶಾಂತಿ ಮಾತುಕತೆಯ ನಂತರ ಕದನ ವಿರಾಮಕ್ಕೆ ಒಪ್ಪಿಕೊಂಡಿದ್ದಾರೆ ಮತ್ತು ರಷ್ಯಾ ಕೂಡ ಇದಕ್ಕೆ ಒಪ್ಪುತ್ತದೆ ಎಂಬ ಭರವಸೆಯನ್ನು ಮತ್ತಷ್ಟು ದೃಢಪಡಿಸಿದ್ದಾರೆ.
ಈ ಭಯಾನಕ ಯುದ್ಧದಲ್ಲಿ ರಷ್ಯಾ ಮತ್ತು ಉಕ್ರೇನ್ ಎರಡೂ ದೇಶಗಳ ಸೈನಿಕರು ಕೊಲ್ಲಲ್ಪಡುತ್ತಿದ್ದಾರೆ ಎಂದು ಹೇಳಿದ ಟ್ರಂಪ್, ಕದನ ವಿರಾಮವನ್ನು ತಲುಪುವುದು ಬಹಳ ಮುಖ್ಯ ಎಂದು ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, “ಉಕ್ರೇನ್ ಕದನ ವಿರಾಮಕ್ಕೆ ಒಪ್ಪಿಕೊಂಡಿದೆ. ಈಗ ನಾವು ರಷ್ಯಾಕ್ಕೆ ಹೋಗಬೇಕಾಗಿದೆ ಮತ್ತು ಅಧ್ಯಕ್ಷ ಪುಟಿನ್ ಅದಕ್ಕೂ ಒಪ್ಪುತ್ತಾರೆ ಎಂದು ಆಶಿಸುತ್ತೇವೆ. ಜನರನ್ನು ಕೊಲ್ಲಲಾಗುತ್ತಿದೆ. ನಗರಗಳಾದ್ಯಂತ ಸ್ಫೋಟ ಆಗುತ್ತಿದ್ದಂತೆ ನಗರಗಳಲ್ಲಿ ಜನರು ಕೊಲ್ಲಲ್ಪಡುತ್ತಿದ್ದಾರೆ, ಮತ್ತು ನಾವು ಆ ಯುದ್ಧವನ್ನು ಕೊನೆಗೊಳಿಸಲು ಬಯಸುತ್ತೇವೆ” ಎಂದಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj