ಉಕ್ರೇನ್ ಒಳಗಡೆ ನಮಗೆ ಸರ್ಕಾರ ಯಾವುದೇ ರಕ್ಷಣೆ ನೀಡಲಿಲ್ಲ | ಕೇಂದ್ರ ಸರ್ಕಾರದ ನಡೆಯ ಬಗ್ಗೆ ವಿದ್ಯಾರ್ಥಿಗಳಿಂದ ಬೇಸರ
ಉಕ್ರೇನ್-ರಷ್ಯಾ ಯುದ್ಧದ ಹಿನ್ನೆಲೆಯಲ್ಲಿ ಖಾರ್ಕಿವ್ ಬಿಡುವಂತೆ ಭಾರತದ ವಿದ್ಯಾರ್ಥಿಗಳಿಗೆ ಸೂಚನೆ ನೀಡಲಾಗಿದೆ. ಆದರೆ, ಉಕ್ರೇನ್ ನ ಒಳಗೆ ಭಾರತೀಯ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಯಾವುದೇ ರಕ್ಷಣೆ ಸಿಗುತ್ತಿಲ್ಲ ಎನ್ನುವ ಆರೋಪಗಳನ್ನು ವಿದ್ಯಾರ್ಥಿಗಳು ಮಾಡುತ್ತಿದ್ದಾರೆ.
ಕೇಂದ್ರ ಸರ್ಕಾರ ಹಾಗೂ ಇಂಡಿಯನ್ ಎಂಬಸಿ ವಿರುದ್ಧ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದು, ನಮಗೆ ಸಹಾಯ ಬೇಕಾಗಿದ್ದದ್ದು, ಉಕ್ರೇನ್ ಒಳಗೆಯೇ ಹೊರತು ಹೊರಗೆ ಅಲ್ಲ. ನಾವೇ ಪ್ರಾಣದ ಹಂಗು ತೊರೆದು ಉಕ್ರೇನ್ ಗಡಿ ದಾಡಿದ್ದೇವೆ. ಬಾರ್ಡರ್ ಒಳಗೆ ಅಪಾಯಕಾರಿ ಸನ್ನಿವೇಶವಿದೆ. ಅಲ್ಲಿ ನಮಗೆ ನೆರವು ಬೇಕು. ಆದರೆ, ಬಾರ್ಡರ್ ಹೊರಗಿನಿಂದ ನಮ್ಮನ್ನು ಕರೆದುಕೊಂಡು ಬರಲು ಮಾತ್ರವೇ ಸರ್ಕಾರ ವ್ಯವಸ್ಥೆ ಮಾಡಿದೆ. ಉಕ್ರೇನ್ ಒಳಗೆ ಸಾಕಷ್ಟು ಸಂಖ್ಯೆಯಲ್ಲಿ ಭಾರತೀಯ ವಿದ್ಯಾರ್ಥಿಗಳು ಸಿಲುಕಿದ್ದಾರೆ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾವು ಉಕ್ರೇನ್ ನಿಂದ ಬರುತ್ತಿದ್ದ ಸಂದರ್ಭದಲ್ಲಿ ನಮ್ಮ ಎದುರೇ ಮಿಸೈಲ್ ಗಳು ಸ್ಫೋಟವಾಗುತ್ತಿತ್ತು. ಉಕ್ರೇನ್ ನಿಂದ ಗಡಿ ಪ್ರದೇಶಕ್ಕೆ ಭಾರತೀಯರನ್ನು ಕರೆತರುವ ಕೆಲಸವನ್ನು ಭಾರತ ಸರ್ಕಾರ ಮಾಡಬೇಕಿದೆ. ಕಿವ್ ಮತ್ತು ಖಾರ್ಕಿವ್ ನಗರಗಳಲ್ಲಿ ಭಾರತೀಯ ವಿದ್ಯಾರ್ಥಿಗಳ ಪರಿಸ್ಥಿತಿ ಘೋರವಾಗಿದೆ. ತುರ್ತಾಗಿ ವಿದ್ಯಾರ್ಥಿಗಳನ್ನು ಉಕ್ರೇನ್ ಒಳಗಿನಿಂದ ಹೊರಗೆ ತರುವ ಕೆಲಸ ಸರ್ಕಾರ ಮಾಡಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.
ವಿದ್ಯಾರ್ಥಿಗಳ ಮೊಬೈಲ್ ಸ್ವಿಚ್ ಆಫ್!
ಖಾರ್ಕಿವ್ ಬಿಡುವಂತೆ ಭಾರತೀಯ ವಿದ್ಯಾರ್ಥಿಗಳಿಗೆ ಏಕಾಏಕಿ ಸೂಚನೆ ಕೊಡಲಾಗಿದೆ. ಅವರಿಗೆ ಉಕ್ರೇನ್ ನಿಂದ ಹೊರಗೆ ಬರಲು ಯಾವುದೇ ವ್ಯವಸ್ಥೆಗಳು ಕೂಡ ಇಲ್ಲವಾಗಿದೆ. ಈ ಮಧ್ಯೆ, ಖಾರ್ಕಿವ್ ನಲ್ಲಿ ಸಿಲುಕಿರುವ ಕೆಲ ಕರ್ನಾಟಕ ವಿದ್ಯಾರ್ಥಿಗಳ ಮೊಬೈಲ್ ಸ್ವಿಚ್ ಆಫ್ ಆಗಿದೆ ಎಂದು ಹೇಳಲಾಗುತ್ತಿದ್ದು, ಪೋಷಕರಲ್ಲಿ ಆತಂಕ ಮನೆ ಮಾಡಿದೆ. ಉಕ್ರೇನ್ ನಲ್ಲಿ ಸಿಲುಕಿರುವ 694 ಕರ್ನಾಟಕದ ವಿದ್ಯಾರ್ಥಿಗಳ ಪೈಕಿ ಕೇವಲ 86 ಜನ ವಿದ್ಯಾರ್ಥಿಗಳು ಮಾತ್ರವೇ ಭಾರತಕ್ಕೆ ವಾಪಸ್ ಆಗಿದ್ದಾರೆ. ಉಕ್ರೇನ್ ನಲ್ಲಿರುವ ಕೆಲ ವಿದ್ಯಾರ್ಥಿಗಳ ಮೊಬೈಲ್ ಸ್ವಿಚ್ ಆಫ್ ಆಗಿದ್ದು ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಹೇಳಲಾಗಿದೆ. 694 ಜನ ವಿದ್ಯಾರ್ಥಿಗಳ ಕುಟುಂಬಸ್ಥರಿಂದ ಸರ್ಕಾರ ಮಾಹಿತಿ ಪಡೆಯುತ್ತಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಭಾರತೀಯರನ್ನು ಕರೆತರುವ ಕಾರ್ಯಚರಣೆಗೂ ‘ಗಂಗಾ’ ಹೆಸರಿಟ್ಟು ಪ್ರಧಾನಿ ಮೋದಿ ರಾಜಕೀಯ: ಸಿದ್ದರಾಮಯ್ಯ ಆಕ್ರೋಶ
ಉಕ್ರೇನ್ ನಿಂದ ಸ್ಥಳಾಂತರ: ವಿಶ್ವಮಟ್ಟದಲ್ಲಿ ಭಾರತದ ಶಕ್ತಿ ಹೆಚ್ಚಳವಾಗಿರುವ ಸೂಚನೆ: ಪ್ರಧಾನಿ ಮೋದಿ
ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಗೆ ಇದೆ ಹಲವು ಗುಪ್ತ ಕಾಯಿಲೆಗಳು!
ಅಣುಬಾಂಬ್ ಪ್ರಯೋಗಕ್ಕೆ ಸಿದ್ಧವಾಗ್ತಿದೆಯಾ ರಷ್ಯಾ? | ತನ್ನ ಕುಟುಂಬವನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಿದ ಪುಟಿನ್