ಉಕ್ರೇನ್ ವಿಮಾನ ಹೈಜಾಕ್ ಆಗಿಲ್ಲ | ಇರಾನ್ ನೀಡಿದ ಸ್ಪಷ್ಟನೆ ಏನು ಗೊತ್ತಾ?
ಮಾಸ್ಕೋ: ಕಾಬುಲ್ ಏರ್ಪೋರ್ಟ್ ನಿಂದ ಉಕ್ರೇನ್ ವಿಮಾನ ಹೈಜಾಕ್ ಆಗಿದೆ ಎನ್ನುವ ಸುದ್ದಿ ಸದ್ಯ ಹರಡಿದ್ದು, ಆದರೆ, ಉಕ್ರೇನ್ ವಿಮಾನ ಹೈಜಾಕ್ ಆಗಿಲ್ಲ ಎಂದು ಇರಾನ್ ಸ್ಪಷ್ಟಪಡಿಸಿದೆ. ಅಂತಾರಾಷ್ಟ್ರೀಯ ಸುದ್ದಿಸಂಸ್ಥೆಯೊಂದರ ವರದಿಯನ್ನಾಧರಿಸಿ ಎಎನ್ ಐ ಸುದ್ದಿ ಸಂಸ್ಥೆಯು ಈ ಬಗ್ಗೆ ವರದಿ ಮಾಡಿತ್ತು. ಆದರೆ, ಇದೀಗ ಇರಾನ್ ಈ ಹೇಳಿಕೆ ನೀಡಿದೆ ಎಂದು ವರದಿಯಾಗಿದೆ.
ವಿಮಾನದಲ್ಲಿ ಇಂಧನ ಖಾಲಿಯಾದ ಕಾರಣ, ಇರಾನ್ ನಲ್ಲಿ ಲ್ಯಾಂಡ್ ಮಾಡಲಾಗಿದ್ದು, ಬಳಿಕ ಉಕ್ರೇನ್ ವಿಮಾನ ನಿನ್ನೆ ರಾತ್ರಿ 9:50ಕ್ಕೆ ಕೀವ್ ಏರ್ ಪೋರ್ಟ್ ಗೆ ತಲುಪಿದೆ ಎಂದು ಇರಾನ್ ಸ್ಪಷ್ಟಪಡಿಸಿದೆ. ಅಫ್ಘಾನಿಸ್ತಾನದಿಂದ ಜನರನ್ನು ಸ್ಥಳಾಂತರಗೊಳಿಸಲು ಬಂದಿದ್ದ ಉಕ್ರೇನ್ ವಿಮಾನವನ್ನು ಸಶಸ್ತ್ರ ಅಪಹರಣಕಾರರು ಅಪಹರಿಸಿದ್ದಾರೆ ಎಂದು ವರದಿಯಾಗಿತ್ತು.
ಉಕ್ರೇನ್ ನ ವಿಮಾನ ನಿನ್ನೆ 22:00 ಸಮಯಕ್ಕೆ ಇಂಧನ ತುಂಬುವುದಕ್ಕಾಗಿ ಮಶ್ಹಾದ್ ಗೆ ಬಂದಿಳಿಯಿತು. ಬಳಿಕ ತಕ್ಷಣವೇ ಕೀವ್ ಗೆ ಹೊರಟಿದೆ. ವಿಮಾನವನ್ನು ಹೈಜಾಕ್ ಮಾಡಲಾಗಿದೆ ಎನ್ನುವ ವಾದವನ್ನು ನಾವು ನಿರಾಕರಿಸುತ್ತೇವೆ ಎಂದು ಇರಾನ್ ವಿಮಾನ ಸಂಸ್ಥೆ ತಿಳಿಸಿದೆ.
ಇನ್ನಷ್ಟು ಸುದ್ದಿಗಳು…
ಬಾರ್ ಮುಂದೆ ವೀರವನಿತೆಯರ ಪಡೆ ಕಂಡು ಬೆಚ್ಚಿಬಿದ್ದ ಕುಡುಕರು | ಮುಂದೆ ನಡೆದದ್ದೇನು ಗೊತ್ತಾ?
ಸೊಸೆಯನ್ನು ಕೆಂಡದ ಮೇಲೆ ನಡೆಸಿದ ಅತ್ತೆ! | ಅತ್ತೆಯ ಅಮಾನವೀಯ ಕೃತ್ಯಕ್ಕೆ ಸೊಸೆ ಹೇಳಿದ್ದೇನು ಗೊತ್ತೇ?
ಸಹೋದರಿಯ ಸ್ನೇಹಿತೆಯ ಮೇಲೆ ಅತ್ಯಾಚಾರ ನಡೆಸಿದ ಕಾಮುಕ!
ತಾಲಿಬಾನ್ ನ 10ಕ್ಕೂ ಅಧಿಕ ಉಗ್ರರಿಗೆ ಚಟ್ಟಕಟ್ಟಿದ ಅಫ್ಘಾನ್ ನ ಪಂಜ್ ಶೇರ್ ಚಳುವಳಿಗಾರರು
ಕ್ರಿಮಿನಲ್ ಹಿನ್ನೆಲೆಯ ಜನಪ್ರತಿನಿಧಿಗಳಿಗೆ ಬಿಗ್ ಶಾಕ್ | 6 ವರ್ಷಗಳ ಕಾಲ ಅನರ್ಹರಾಗುವ ಸಾಧ್ಯತೆ
ಆಟೋ ಚಾಲಕನಿಗೆ ಪೊಲೀಸರ ಎದುರೇ ಚಪ್ಪಲಿಯಿಂದ ಹೊಡೆದ ಮಹಿಳೆ | ಆಟೋ ಚಾಲಕ ಮಾಡಿದ್ದೇನು ಗೊತ್ತಾ?
ಬೆಂಗಳೂರು-ಮೈಸೂರು 6 ಪಥದ ರಸ್ತೆ ನಿರ್ಮಾಣ ಪ್ರತಾಪ್ ಸಿಂಹ ಸಾಧನೆಯಲ್ಲ | ಹೆಚ್.ವಿಶ್ವನಾಥ್