ಉಕ್ರೇನ್ ಗೆ ನ್ಯಾಟೋ ಸದಸ್ಯತ್ವ ನೀಡುವಂತೆ ಇನ್ನು ಮುಂದೆ ಒತ್ತಾಯಿಸುವುದಿಲ್ಲ; ಝೆಲೆನ್ಸ್ಕಿ ನಿರ್ಧಾರ
ಕೀವ್: ಉಕ್ರೇನ್ ಗೆ ನ್ಯಾಟೋ ಸದಸ್ಯತ್ವ ನೀಡುವಂತೆ ಇನ್ನು ಮುಂದೆ ನಾನು ಒತ್ತಾಯಿಸುವುದಿಲ್ಲ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ.
ರಷ್ಯಾದ ಪರವಾಗಿರುವ ಪೂರ್ವ ಉಕ್ರೇನ್ ನ ಎರಡು ಪ್ರದೇಶಗಳಾದ ಡೊನೆಟ್ಸ್ಕ್ ಮತ್ತು ಲುಗಾನ್ಸ್ಕ್ ಸ್ಥಿತಿ ಬಗ್ಗೆ ಸಂಧಾನ ಮಾಡಿಕೊಳ್ಳಲು ಸಿದ್ಧರಿರುವುದಾಗಿಯೂ ತಿಳಿಸಿದ್ದಾರೆ. ಉಕ್ರೇನ್ ನ ಡೊನೆಟ್ಸ್ಕ್ ಮತ್ತು ಲುಗಾನ್ಸ್ಕ್ ಈ ಎರಡೂ ಪ್ರದೇಶಗಳು ಉಕ್ರೇನ್ ನಲ್ಲಿದ್ದರೂ ಕೂಡ ಇಲ್ಲಿರುವ ಬಂಡುಕೋರರು ರಷ್ಯಾ ಪರವಾಗಿಯೇ ಇದ್ದಾರೆ. 2014ರಿಂದಲೂ ಕೀವ್ ವಿರುದ್ಧವೇ ಬಡಿದಾಡಿಕೊಂಡು ಬಂದಿದ್ದಾರೆ. ಅಲ್ಲದೆ, ಫೆ.24ರಂದು ಉಕ್ರೇನ್ ಮೇಲೆ ರಷ್ಯಾ ಸೇನಾ ಕಾರ್ಯಾಚರಣೆ ಘೋಷಿಸುವುದಕ್ಕೂ ಮೊದಲು ಇವೆರಡೂ ಭೂಪ್ರದೇಶಗಳು ಸ್ವತಂತ್ರ ಎಂದು ಪುಟಿನ್ ಘೋಷಿಸಿದ್ದಾರೆ. ಇದೀಗ ಈ ಭೂಪ್ರದೇಶಗಳ ಕುರಿತಂತೆ ರಷ್ಯಾದ ಜತೆ ಹೊಂದಾಣಿಕೆ ಮಾಡಿಕೊಳ್ಳಲು ಸಿದ್ಧನಿದ್ದೇನೆ ಎಂದು ಹೇಳುವ ಮೂಲಕ ಝೆಲೆನ್ಸ್ಕಿ ಮಾಸ್ಕೋವನ್ನು ಸಮಾಧಾನಪಡಿಸುವ ಮಾತುಗಳನ್ನಾಡಿದ್ದಾರೆ.
ರಷ್ಯಾ ಉಕ್ರೇನ್ ವಿರುದ್ಧ ಸಮರ ಸಾರಲು ಹಲವು ಕಾರಣಗಳಿದ್ದರೂ, ಉಕ್ರೇನ್ಗೆ ನ್ಯಾಟೋ ಸದಸ್ಯತ್ವ ಕೊಡಲು ಮುಂದಾಗಿದ್ದು ಬಹುಮುಖ್ಯ ಕಾರಣ. ನ್ಯಾಟೋ ಕೂಡ ರಷ್ಯಾದ ಮನವಿಯನ್ನು ತಿರಸ್ಕರಿಸುತ್ತಲೇ ಬಂತು. ಹೀಗಾಗಿ ರಷ್ಯಾ, ಉಕ್ರೇನ್ ವಿರುದ್ಧ ಸಮರವನ್ನೇ ಸಾರಿತು. ಆದರೆ ರಷ್ಯಾ ಸೇನೆ ಆಕ್ರಮಣ ಮಾಡುತ್ತಿದ್ದಂತೆ ನ್ಯಾಟೋ ಅಂತರ ಕಾಯ್ದುಕೊಂಡಿದೆ. ಝೆಲೆನ್ಸ್ಕಿ ಬಹಿರಂಗವಾಗಿಯೇ ಸಹಾಯ ಕೇಳಿದರೂ ನ್ಯಾಟೋ ಅದಕ್ಕೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಇದರ ಬಗ್ಗೆಯೇ ಝೆಲೆನ್ಸ್ಕಿ ಮಾತನಾಡಿದ್ದಾರೆ.
ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಸುದ್ದಿವಾಹಿನಿಯೊಂದಕ್ಕೆ ಸಂದರ್ಶನ ನೀಡಿ, ಉಕ್ರೇನ್ಗೆ ನ್ಯಾಟೋ ಸದಸ್ಯತ್ವ ಕೊಡಿ ಎಂದು ಕೇಳುವ ವಿಚಾರದಲ್ಲಿ ನಾನಿನ್ನು ಮೌನ ವಹಿಸುತ್ತೇನೆ. ಉಕ್ರೇನ್ಗೆ ಸದಸ್ಯತ್ವ ನೀಡಲು ನ್ಯಾಟೋ ಸಿದ್ಧತೆ ಮಾಡಿಕೊಂಡಿರಲಿಲ್ಲ. ಬಾಯಿ ಮಾತಲ್ಲಿ ಕೊಡುತ್ತೇವೆ ಎಂದು ಹೇಳುತ್ತಿತ್ತು. ಈ ನ್ಯಾಟೋ ಒಕ್ಕೂಟಕ್ಕೆ ರಷ್ಯಾ ವಿರುದ್ಧ ಹೋರಾಡಲು, ಆ ದೇಶವನ್ನು ಎದುರು ಹಾಕಿಕೊಳ್ಳಲು ಭಯ ಎಂದು ಉಕ್ರೇನ್ ಅಧ್ಯಕ್ಷರು ಹೇಳಿದ್ದಾರೆ. ನಾನೊಂದು ದೇಶದ ಅಧ್ಯಕ್ಷನಾಗಿ ಯಾವುದೇ ವಿಚಾರಕ್ಕೂ ಇನ್ನೊಬ್ಬರ ಎದುರು ಮೊಣಕಾಲೂರಿಗೆ ಕುಳಿತು ಬೇಡಿಕೊಳ್ಳಲಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ಉಕ್ರೇನ್ಗೆ ನ್ಯಾಟೋ ಸದಸ್ಯತ್ವ ಕೊಡುವ ವಿಚಾರದಲ್ಲಿ ತನ್ನದು ಸ್ಪಷ್ಟ ವಿರೋಧ ಎಂದು ರಷ್ಯಾ ಈಗಾಗಲೇ ಸ್ಪಷ್ಟಪಡಿಸಿದೆ. ಯುರೋಪ್ನಲ್ಲಿ ಶೀತಲ ಸಮರ ಎದ್ದಾಗ, ಸೋವಿಯತ್ ಒಕ್ಕೂಟದಿಂದ ಯುರೋಪ್ನ್ನು ರಕ್ಷಣೆ ಮಾಡುವ ಸಲುವಾಗಿ ಈ ನ್ಯಾಟೋ ರಚಿಸಲಾಗಿತ್ತು. ಈ ಹಿಂದೆ ಸೋವಿಯತ್ ಒಕ್ಕೂಟದಲ್ಲಿದ್ದು ಬೇರ್ಪಟ್ಟ ದೇಶಗಳಿಗೆ ಸದಸ್ಯತ್ವ ನೀಡುವ ಮೂಲಕ ನ್ಯಾಟೋ ಪೂರ್ವ ಯುರೋಪ್ನಲ್ಲಿ ಮತ್ತಷ್ಟು ಪ್ರಾಬಲ್ಯ ವಿಸ್ತರಿಸುತ್ತಿದೆ. ಇದು ಸಹಜವಾಗಿಯೇ ರಷ್ಯಾವನ್ನು ಕೆರಳಿಸಿದೆ. ಇಷ್ಟು ದಿನ ನ್ಯಾಟೋವನ್ನು ನಂಬಿಕೊಂಡಿದ್ದ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು, ಈಗ ನ್ಯಾಟೋ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಬಿಜೆಪಿಯನ್ನು ಬೇರು ಸಮೇತ ಕಿತ್ತೆಸೆಯಬೇಕು: ಮಮತಾ ಬ್ಯಾನರ್ಜಿ
ಉಕ್ರೇನ್ ನಲ್ಲಿ ಶೆಲ್ ದಾಳಿ ನಿಂತ ಬಳಿಕ ನವೀನ್ ಮೃತದೇಹ ತರುವ ಪ್ರಯತ್ನ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಪೊಲೀಸರಿಗೆ ಹೆದರಿ ಟಿಡಿಪಿ ಕಾರ್ಯಕರ್ತ ಆತ್ಮಹತ್ಯೆ
ರಷ್ಯಾ ಭಯೋತ್ಪಾದಕ ದೇಶ ಎಂದು ಘೋಷಿಸಿ: ಬ್ರಿಟನ್ ಸಂಸತ್ತಿಗೆ ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ ಮನವಿ
ಪ್ರಧಾನಿ ನರೇಂದ್ರ ಮೋದಿಗೆ ಧನ್ಯವಾದ ಅರ್ಪಿಸಿದ ಪಾಕ್ ಯುವತಿ