ಉಕ್ರೇನ್ ಮೇಲೆ ರಷ್ಯಾ ಆಕ್ರಮಣ: ಸುರಕ್ಷಿತವಾಗಿ ಕೀವ್ ತೊರೆದ ಭಾರತೀಯರು; ಕಾರ್ಯಾಚರಣೆಗೆ 26 ವಿಮಾನ ಬಳಕೆ - Mahanayaka
7:30 AM Thursday 19 - September 2024

ಉಕ್ರೇನ್ ಮೇಲೆ ರಷ್ಯಾ ಆಕ್ರಮಣ: ಸುರಕ್ಷಿತವಾಗಿ ಕೀವ್ ತೊರೆದ ಭಾರತೀಯರು; ಕಾರ್ಯಾಚರಣೆಗೆ 26 ವಿಮಾನ ಬಳಕೆ

kewi
02/03/2022

ನವದೆಹಲಿ: ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಮುಂದುವರಿದಿದ್ದು, ಯುದ್ಧ ಪೀಡಿತ ಉಕ್ರೇನ್‌ ನ ಕೀವ್‌ ನಲ್ಲಿ ಸಿಲುಕಿರುವ ಎಲ್ಲಾ ಭಾರತೀಯರು ಸುರಕ್ಷಿತವಾಗಿ ರಾಜಧಾನಿಯನ್ನು ತೊರೆದಿದ್ದಾರೆ ಎಂದು ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ ಹರ್ಷ ವರ್ಧನ್ ಶೃಂಗ್ಲಾ ಮಾಹಿತಿ ನೀಡಿದ್ದಾರೆ.

ಮುಂದಿನ ಮೂರು ದಿನಗಳಲ್ಲಿ ಭಾರತೀಯರ ತೆರವು ಕಾರ್ಯಾಚರಣೆ ನಡೆಯಲಿದ್ದು, ಇದಕ್ಕಾಗಿ 26 ವಿಮಾನಗಳ ಹಾರಾಟ ನಡೆಯಲಿದೆ. ಅಲ್ಲದೆ, ತೆರವು ಕಾರ್ಯಾಚರಣೆಗೆ ನೆರವಾಗುವಂತೆ ಭಾರತೀಯ ವಾಯುಸೇನೆಗೆ ಈಗಾಗಲೇ ಪ್ರಧಾನಿ ನರೇಂದ್ರ ಮೋದಿಯವರು ಮನವಿ ಮಾಡಿದ್ದು, ವಾಯುಸೇನೆಯ ಸಿ-17 ವಿಮಾನಗಳನ್ನು ಬಳಸಿಕೊಳ್ಳುವ ಸಾಧ್ಯತೆಯೂ ಇದೆ ಎಂದು ಅವರು ತಿಳಿಸಿದ್ಧಾರೆ.

ಈಗಾಗಲೇ ಉಕ್ರೇನ್‌ ನಲ್ಲಿ ಕರ್ನಾಟಕ ಮೂಲದ ವಿದ್ಯಾರ್ಥಿ ನವೀನ್ ಶೇಖರಪ್ಪ ಗ್ಯಾನಗೌಡರ್ ಮೃತಪಟ್ಟಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ. ಅಲ್ಲದೆ, ವಿದ್ಯಾರ್ಥಿಗಳು ಸೇರಿದಂತೆ ಯಾವುದೇ ಭಾರತೀಯರಿಗೆ ಮುಂದೆ ತೊಂದರೆ ಉಂಟಾಗಬಾರದು ಎಂಬ ನಿಟ್ಟಿನಲ್ಲಿ ‘ಆಪರೇಷನ್ ಗಂಗಾ’ ಕಾರ್ಯಾಚರಣೆಯನ್ನು ಕೇಂದ್ರ ಸರಕಾರ ಮತ್ತಷ್ಟು ತ್ವರಿತಗೊಳಿಸಲಿದೆ.


Provided by

ಹಾರ್ಕಿವ್ ಮತ್ತು ಇತರ ಸೂಕ್ಷ್ಮ ಪ್ರದೇಶಗಳಲ್ಲಿ ಸಿಲುಕಿರುವ ಎಲ್ಲಾ ಭಾರತೀಯರ ತುರ್ತು ತೆರವಿಗೆ ರಷ್ಯಾ ಮತ್ತು ಉಕ್ರೇನ್ ರಾಯಭಾರಿಗಳನ್ನು ಆಗ್ರಹಿಸಲಾಗುವುದು. ಈಗಾಗಲೇ ಫ್ರಾನ್ಸ್ ಮತ್ತು ಪೋಲೆಂಡ್ ಅಧ್ಯಕ್ಷರ ಜೊತೆಗೆ ಪ್ರಧಾನಿ ನರೇಂದ್ರ ಮೋದಿಯವರು ಮಾತುಕತೆ ನಡೆಸಿದ್ದಾರೆ ಎಂದು ಹರ್ಷ ವರ್ಧನ್ ಶೃಂಗ್ಲಾ ಮಾಹಿತಿ ನೀಡಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ನ್ಯಾಯಾಧೀಶರಿಗೆ ಚಾಕುವಿನಿಂದ ಇರಿತ: ಕಚೇರಿ ಸಹಾಯಕ ಸಿಬ್ಬಂದಿಯ ಬಂಧನ

ಚೂರಿಯೊಂದಿಗೆ ಮಸೀದಿಗೆ ನುಗ್ಗಲು ಯತ್ನ: ಆರೋಪಿ ವಶಕ್ಕೆ

ಅಪರೂಪದ ಬರ್ಕ ಜಿಂಕೆ ಬೇಟೆ: ಹಾಸನದಲ್ಲಿ ಮೂವರ ಬಂಧನ

ಯುದ್ದಪೀಡಿತ ರಷ್ಯಾ ವಿರುದ್ಧ ಸಂಘರ್ಷಕ್ಕೆ ಇಳಿಯುವುದಿಲ್ಲ: ಜೋ ಬೈಡನ್‌

ಉಕ್ರೇನ್ ಮೇಲೆ ರಷ್ಯಾ ದಾಳಿ: ಕನ್ನಡಿಗ ನವೀನ್ ಮೃತದೇಹ ಪತ್ತೆ

 

ಇತ್ತೀಚಿನ ಸುದ್ದಿ