ಉಕ್ರೇನ್ ನಲ್ಲಿ ಇನ್ನೂ ಸಿಲುಕಿರುವ 50 ಭಾರತೀಯರು - Mahanayaka
9:50 AM Thursday 14 - November 2024

ಉಕ್ರೇನ್ ನಲ್ಲಿ ಇನ್ನೂ ಸಿಲುಕಿರುವ 50 ಭಾರತೀಯರು

indian studens
18/03/2022

ನವದೆಹಲಿ: ಉಕ್ರೇನ್‌ ನಲ್ಲಿ ಇನ್ನೂ 50 ಮಂದಿ ಭಾರತೀಯರು ಇದ್ದು, ಈ ಪೈಕಿ 15ರಿಂದ 20 ಮಂದಿ ತವರಿಗೆ ಮರಳಲು ಬಯಸಿದ್ದಾರೆ. ಅವರಿಗೆ ಎಲ್ಲ ರೀತಿಯ ನೆರವು ನೀಡಿ ಅವರನ್ನು ಕರೆತರಲಾಗುವುದು ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.

ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಈ ಬಗ್ಗೆ ಮಾಹಿತಿ ನೀಡಿ, ಆಪರೇಷನ್ ಗಂಗಾ ಇನ್ನೂ ಚಾಲ್ತಿಯಲ್ಲಿದೆ. ಸ್ವದೇಶಕ್ಕೆ ಮರಳಲು ಇಚ್ಛಿಸುವವರನ್ನು ಕರೆತರಲು ನಾವೇನು ಮಾಡಬಹುದೋ ಅದನ್ನು ಮಾಡಲಿದ್ದೇವೆ ಎಂದು ತಿಳಿಸಿದ್ದಾರೆ.

ಮೂರು ದಿನಗಳ ಹಿಂದಿನ ಲೆಕ್ಕಾಚಾರದ ಪ್ರಕಾರ ಇನ್ನೂ 50 ಮಂದಿ ಭಾರತೀಯರು ಉಕ್ರೇನ್‌ನಲ್ಲಿದ್ದಾರೆ. ಇವರಲ್ಲಿ 15ರಿಂದ 20 ಮಂದಿ ವಾಪಸಾಗಲು ಬಯಸುತ್ತಿದ್ದರೆ ಉಳಿದವರು ಸದ್ಯದ ಸ್ಥಿತಿಯಲ್ಲಿ ಹಿಂತಿರುಗುವ ಮನಸು ಮಾಡುತ್ತಿಲ್ಲ. ಉಕ್ರೇನ್‌ನಲ್ಲಿರುವ ಎಲ್ಲ ಭಾರತೀಯರ ಜತೆ ಸಂಪರ್ಕದಲ್ಲಿದ್ದೇವೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಈವರೆಗೆ ‘ಆಪರೇಷನ್ ಗಂಗಾ’ ಕಾರ್ಯಾಚರಣೆ ಮೂಲಕ 22,500 ಮಂದಿಯನ್ನು ಸ್ವದೇಶಕ್ಕೆ ಕರೆಸಿಕೊಳ್ಳಲಾಗಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ತಿಳಿಸಿದ್ದಾರೆ.




ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಆದಿಚುಂಚನಗಿರಿ ಮಹಾರಥೋತ್ಸದಲ್ಲಿ ಕಾಲ್ತುಳಿತ: ವೃದ್ಧೆ ಬಲಿ

ಪೇರಳೆ ಹಣ್ಣಿನಾಸೆ: ಮರ ಹತ್ತಲು ಹೋಗಿ ಪ್ರಾಣವನ್ನೇ ಕಳಕೊಂಡ ಬಾಲಕ

ಎಲ್ಲ ಹಿಂದೂಗಳೂ, ಎಲ್ಲ ಮುಸಲ್ಮಾನರೂ ಕೆಟ್ಟವರಲ್ಲ: ವಿ.ಸೋಮಣ್ಣ

ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಉಕ್ರೇನ್‌ ಅಧ್ಯಕ್ಷ ವೊಲೋಡಿಮಿರ್ ಝೆಲೆನ್ಸ್ಕಿ

ಭದ್ರತಾ ಪಡೆಗಳ ಮೇಲೆ ಕಲ್ಲು ತೂರಾಟ: ಆರೋಪಿಗಳ ಬಂಧನ

 

ಇತ್ತೀಚಿನ ಸುದ್ದಿ