ಉಳ್ಳವರಿಗೆ ಮಾತ್ರ ಸ್ಪೆಷಲ್ ಕಾನೂನು | ಸರ್ಕಾರದ ವಿರುದ್ಧ ಡಾಲಿ ಆಕ್ರೋಶ
ಹುಬ್ಬಳ್ಳಿ: ಏಪ್ರಿಲ್ 7ರಿಂದ ಮತ್ತೆಯೂ ಚಿತ್ರಮಂದಿರಗಳಲ್ಲಿ ಶೇ.50ರಷ್ಟು ಸೀಟು ಭರ್ತಿ ನಿಯಮ ಬೇಡ ಎಂದು ನಟ ಡಾಲಿ ಧನಂಜಯ್ ಹೇಳಿದ್ದು, ಕಾನೂನು ಕೆಳವರ್ಗದವನ್ನು ನೋಡಿ ಮಾಡಬೇಕು, ಈ ನಿಯಮದಿಂದ ಉಳ್ಳವರಿಗೆ ಸಮಸ್ಯೆ ಆಗಲ್ಲ, ನಮ್ಮಂಥವರಿಗೆ ಸಮಸ್ಯೆ ಆಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
‘ಏಪ್ರಿಲ್ 7 ರಿಂದ ಮತ್ತೆ ಚಿತ್ರಮಂದಿರಗಳಲ್ಲಿ ಶೇ.50 ರಷ್ಟು ಸೀಟು ಭರ್ತಿ ನಿಯಮ ಬೇಡ, ಇದರಿಂದ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿರುವ ಬಡ ಕಲಾವಿದರಿಗೆ ಸಮಸ್ಯೆ ಆಗುತ್ತದೆ. ಎಲ್ಲವೂ ಪೂರ್ಣ ಪ್ರಮಾಣದಲ್ಲಿ ನಡೆಯುತ್ತಿದೆ, ಆದರೆ ಈ ಸಿನಿಮಾಗ್ಯಾಕೆ ನಿರ್ಬಂಧ’..? ಎಂದು ಡಾಲಿ ಧನಂಜಯ್ ಪ್ರಶ್ನಿಸಿದ್ದಾರೆ.
ಕೊರೋನಾ 2ನೇ ಅಲೆಯ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಸೋಂಕು ಹೆಚ್ಚಿರುವಂತ ಬೆಂಗಳೂರು ನಗರ ಸೇರಿದಂತೆ 8 ಜಿಲ್ಲೆಗಳಲ್ಲಿ ಶೇ.50ರಷ್ಟು ಸಿನಿಮಾ ಮಂದಿರಗಳಲ್ಲಿನ ಸೀಟುಗಳ ಭರ್ತಿಗೆ ನಿರ್ಬಂಧ ಹೇರಿತ್ತು. ಇಂತಹ ನಿರ್ಬಂಧದ ವಿರುದ್ಧ ಸ್ಯಾಂಡಲ್ ವುಡ್ ಚಿತ್ರರಂಗದ ಗಣ್ಯರು ಸಿಡಿದೆದ್ದಿದ್ದರು.
ಸರ್ಕಾರವು ಶಾಲಾ ಕಾಲೇಜುಗಳನ್ನು ಕೂಡ ತೆರೆದಿದೆ, ರಾಜಕೀಯ ಕಾರ್ಯಕ್ರಮಗಳು ನಿರಾತಂಕವಾಗಿ ನಡೆಯುತ್ತಿದೆ. ಸಿನಿಮಾ ನೋಡಿದರೆ ಮಾತ್ರವೇ ಕೊರೊನಾ ಬರುತ್ತಾ? ಎಂದು ಸಾರ್ವಜನಿಕರು ಕೂಡ ಪ್ರಶ್ನಿಸುತ್ತಿದ್ದಾರೆ. ಕಳೆದ ಬಾರಿ ನೈಟ್ ಕರ್ಪ್ಯೂ ಹೇರುವ ಮೂಲಕ ಕಾಮಿಡಿ ಪೀಸ್ ಆಗಿದ್ದ ಸರ್ಕಾರ ಇದೀಗ ಸಿನಿಮಾಕ್ಕೆ ಮಾತ್ರವೇ ನಿರ್ಬಂಧ ಹೇರುವ ಮೂಲಕ ಪ್ರಬುದ್ಧ ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ.