ಉಲ್ಟಾ: ಯತಿ ನರಸಿಂಗಾನಂದರ ಧಾರ್ಮಿಕ ಸಮ್ಮೇಳನದ ವಿರುದ್ಧ ತಿರುಗಿಬಿದ್ದ ಹಿಂದೂ ಧಾರ್ಮಿಕ ಮುಖಂಡರು - Mahanayaka
8:53 PM Wednesday 18 - December 2024

ಉಲ್ಟಾ: ಯತಿ ನರಸಿಂಗಾನಂದರ ಧಾರ್ಮಿಕ ಸಮ್ಮೇಳನದ ವಿರುದ್ಧ ತಿರುಗಿಬಿದ್ದ ಹಿಂದೂ ಧಾರ್ಮಿಕ ಮುಖಂಡರು

18/12/2024

ದ್ವೇಷ ಭಾಷಣಕ್ಕಾಗಿಯೇ ಗುರುತಿಸಿಕೊಂಡಿರುವ ಯತಿ ನರಸಿಂಗಾನಂದ ಅವರ ಧಾರ್ಮಿಕ ಸಮ್ಮೇಳನದ ವಿರುದ್ಧ ಹಿಂದೂ ಧಾರ್ಮಿಕ ಮುಖಂಡರೇ ರಂಗಕ್ಕಿಳಿದಿದ್ದಾರೆ. ನರಸಿಂಗಾನಂದ ನಡೆಸುತ್ತಿರುವ ಧರ್ಮ ಸಂಸದ್ ನ ವಿರುದ್ಧ ಪ್ರಮುಖ 62 ಹಿಂದೂ ಧಾರ್ಮಿಕ ಮುಖಂಡರು ಹೇಳಿಕೆ ಬಿಡುಗಡೆಗೊಳಿಸಿದ್ದಾರೆ.

ಡಿಸೆಂಬರ್ 17ರಿಂದ 21ರವರೆಗೆ ನಡೆಯುತ್ತಿರುವ ಧರ್ಮ ಸಂಸದ್ ಪ್ರಚೋದನಕಾರಿ ಭಾಷಣಗಳಿಂದ ಕೂಡಿದೆ. ನಿರ್ದಿಷ್ಟ ಧರ್ಮವನ್ನು ಗುರಿಯಾಗಿಸಿ ಇಲ್ಲಿ ದ್ವೇಷ ಭಾಷಣ ಮಾಡಲಾಗುತ್ತಿದೆ. ಇದು ಸನಾತನ ಧರ್ಮದ ನೈಜ ಚೈತನ್ಯಕ್ಕೆ ವಿರುದ್ಧವಾದದ್ದು. ಇಂಥ ಚಟುವಟಿಕೆಯು ಹಿಂದೂ ಧರ್ಮದ ಧಾರ್ಮಿಕ ಪಾವಿತ್ರ್ಯಕ್ಕೆ ಕೇಡುಂಟು ಮಾಡುವುದಷ್ಟೇ ಅಲ್ಲ ದೇಶದ ಶಾಂತಿ ಮತ್ತು ಸೌಹಾರ್ದಕ್ಕೂ ಧಕ್ಕೆ ತರುತ್ತಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಲಿಂಗಾಯತ್ ಕಮ್ಯುನಿಟಿ, ವರ್ಕರಿ ಸಂಪ್ರದಾಯಿ, ದಿ ಪರ್ಪಲ್ ಪಂಡಿತ್ ಪ್ರಾಜೆಕ್ಟ್, ವಿಶ್ವನಾಥ್ ಮಂದಿರ್, ಸ್ಕೂಲ್ ಆಫ್ ಭಗವತ್ ಗೀತಾ, ಬಲಕ್ರಮ್ ಮಂದಿರ್ ಮುಂತಾದ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಈ ಹೇಳಿಕೆಗೆ ಸಹಿ ಹಾಕಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ