ದ್ವೇಷ ಭಾಷಣದ ವಿರುದ್ಧ ಕ್ರಮಗಳನ್ನು ತೆಗೆದುಕೊಳ್ಳಿ: ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಒತ್ತಾಯ

ಜಗತ್ತಿನಾದ್ಯಂತ ಮುಸ್ಲಿಂ ವಿರೋಧಿ ಪೂರ್ವಾಗ್ರಹ ಹೆಚ್ಚಳವಾಗಿದೆ. ಇದು ಕಳವಳಕಾರಿ. ಸರ್ಕಾರಗಳು ಮತ್ತು ಡಿಜಿಟಲ್ ವೇದಿಕೆಗಳು ಈ ತಾರತಮ್ಯ, ದ್ವೇಷ ಭಾಷಣದ ವಿರುದ್ಧ ಕ್ರಮಗಳನ್ನು ತೆಗೆದುಕೊಳ್ಳುವಂತೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಒತ್ತಾಯಿಸಿದ್ದಾರೆ. ಮುಸ್ಲಿಂ ಮಹಿಳೆಯರನ್ನು ದಮನಿತರಂತೆ ಚಿತ್ರಿಸಲಾಗುತ್ತಿದೆ.. ಈ ಕಾರಣದಿಂದ ಅವರನ್ನು ಇಸ್ಲಾಮೋಫೋಬಿಯಾದ ದೃಷ್ಟಿಕೋನದಲ್ಲೇ ನೋಡಲಾಗುತ್ತದೆ ಎಂದು ಕೂಡ ಹೇಳಿದ್ದಾರೆ.
ಶನಿವಾರ ಅಂತರರಾಷ್ಟ್ರೀಯ ಇಸ್ಲಾಮೋಫೋಬಿಯಾ ವಿರೋಧಿ ದಿನದ ಆಚರಣೆಯ ಸಂದರ್ಭದಲ್ಲಿ ವೀಡಿಯೊ ಸಂದೇಶದಲ್ಲಿ ಮಾತನಾಡಿದ ಗುಟೆರೆಸ್, ಮುಸ್ಲಿಂ ಸಮುದಾಯಗಳು ಎದುರಿಸುತ್ತಿರುವ ಹೆಚ್ಚುತ್ತಿರುವ ಸವಾಲುಗಳನ್ನು ಉಲ್ಲೇಖಿಸಿದರು.
ಜನಾಂಗೀಯ ತಾರತಮ್ಯದಿಂದ ಹಿಡಿದು ಮಾನವ ಹಕ್ಕುಗಳು, ಧಾರ್ಮಿಕ ಪೂಜಾಸ್ಥಳಗಳಲ್ಲಿನ ಉಲ್ಲಂಘನೆಯವರೆಗೆ ಮುಸ್ಲಿಂ ವಿರೋಧಿ ಪೂರ್ವಾಗ್ರಹದಲ್ಲಿ ನಾವು ಆತಂಕಕಾರಿ ಹೆಚ್ಚಳವನ್ನು ಕಾಣುತ್ತಿದ್ದೇವೆ ಎಂದು ಅವರು ಅಭಿಪ್ರಾಯಪಟ್ಟರು.
ಎಲ್ಲರ ಒಳಗೊಳ್ಳುವಿಕೆಯನ್ನು ಪ್ರೋತಾಹಿಸಿ, ಧಾರ್ಮಿಕ ಸ್ವಾತಂತ್ರ್ಯಗಳನ್ನು ರಕ್ಷಿಸಲು ಸರ್ಕಾರಗಳು ಮುಂದಾಗಬೇಕು ಎಂದು ಒತ್ತಿ ಹೇಳಿದರು. ಆನ್ಲೈನ್ ಗಳ ಮೂಲಕ ನಡೆಯುತ್ತಿರುವ ದ್ವೇಷ ಭಾಷಣ ಮತ್ತು ಇಸ್ಲಾಮಿಫೋಬಿಯಾ ಹರಡುವಿಕೆಯನ್ನು ತಡೆಯಲು ಸಾಮಾಜಿಕ ಮಾಧ್ಯಮ ವೇದಿಕೆಗಳು ಕ್ರಮ ಕೈಗೊಳ್ಳಬೇಕು ಎಂದು ಅವರು ಕರೆ ನೀಡಿದರು.
“ಒಂದು ಸಮುದಾಯದ ಮೇಲೆ ದಾಳಿ ನಡೆದಾಗ, ಅದು ನಿರ್ಧಿಷ್ಟ ಸಮುದಾಯಕ್ಕೆ ಮಾತ್ರ ಸೀಮಿತವಲ್ಲ. ಎಲ್ಲ ಸಮುದಾಯದ ಹಕ್ಕುಗಳು ಮತ್ತು ಸ್ವಾತಂತ್ರ್ಯಗಳು ಅಪಾಯದಲ್ಲಿವೆ ಎಂದರ್ಥ. ಜಾಗತಿಕ ಸಮುದಾಯವಾಗಿ, ನಾವು ಧರ್ಮಾಂಧತೆಯನ್ನು ತಿರಸ್ಕರಿಸಬೇಕು ಮತ್ತು ನಿರ್ಮೂಲನೆ ಮಾಡಬೇಕು” ಎಂದು ವಿಶ್ವಸಂಸ್ಥೆಯ ಮುಖ್ಯಸ್ಥ ಗುಟೆರಸ್ ಆಗ್ರಹಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj