ಸ್ನಾತಕೋತ್ತರ ಪದವಿ ಮುಗಿದರೂ ಸಿಗದ ಉದ್ಯೋಗ:  ಯುವತಿ ಸಾವಿಗೆ ಶರಣು - Mahanayaka

ಸ್ನಾತಕೋತ್ತರ ಪದವಿ ಮುಗಿದರೂ ಸಿಗದ ಉದ್ಯೋಗ:  ಯುವತಿ ಸಾವಿಗೆ ಶರಣು

gowthami
29/05/2023

ಕುಂದಾಪುರ: ಸ್ನಾತಕೋತ್ತರ ಪದವಿ ಮುಗಿದರೂ ಉದ್ಯೋಗ ಸಿಗದ ಕಾರಣ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಯುವತಿಯೊಬ್ಬಳು ಸಾವಿಗೆ ಶರಣಾದ ಘಟನೆ ಕಾಲ್ತೋಡು ಗ್ರಾಮದ ಸೀಗೇಡಿ ಎಂಬಲ್ಲಿ ನಡೆದಿದೆ.

ಮೃತರನ್ನು ಸೀಗೇಡಿ ನಿವಾಸಿ ಪ್ರಮೋದ ಶೆಟ್ಟಿ ಎಂಬವರ ಮಗಳು ಗೌತಮಿ (22) ಎಂದು ಗುರುತಿಸಲಾಗಿದೆ. ಉಡುಪಿಯ ಖಾಸಗಿ ಕಾಲೇಜಿನಲ್ಲಿ ಎಂಕಾಂ ಮುಗಿಸಿ ಬ್ಯಾಂಕ್ ನೇಮಕಾತಿ ಪರೀಕ್ಷೆ ಹಾಗೂ ಇತರೆ ಕಂಪನಿ ನೇಮಕಾತಿಗೆ ಪರೀಕ್ಷೆ ಬರೆದಿದ್ದರೂ ಇವರಿಗೆ ಕೆಲಸ ಸಿಕ್ಕಿರಲಿಲ್ಲ ಎನ್ನಲಾಗಿದೆ.

ಇದೇ  ಚಿಂತೆಯಲ್ಲಿ ಡೆತ್ ನೋಟ್  ಬರೆದಿಟ್ಟು ಮನೆಯ ಮೊದಲ ಮಹಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ