ಉಂಡು ಮಲಗಿದರೂ ಮುಗಿಯಲಿಲ್ಲ ಗಂಡ ಹೆಂಡಿರ ಜಗಳ: ಪೊಲೀಸ್ ಠಾಣೆ ಎದುರು ಹಿಗ್ಗಾಮುಗ್ಗಾ ಥಳಿತ! - Mahanayaka
9:09 PM Wednesday 10 - September 2025

ಉಂಡು ಮಲಗಿದರೂ ಮುಗಿಯಲಿಲ್ಲ ಗಂಡ ಹೆಂಡಿರ ಜಗಳ: ಪೊಲೀಸ್ ಠಾಣೆ ಎದುರು ಹಿಗ್ಗಾಮುಗ್ಗಾ ಥಳಿತ!

police
22/09/2021

ಕೋಲಾರ: ಗಂಡ ಹೆಂಡಿರ ಜಗಳ ಉಂಟು ಮಲಗುವ ತನಕ ಅನ್ನೋ ಗಾದೆ ತುಂಬಾ ಫೇಮಸ್. ಆದರೆ, ಇಲ್ಲಿಬ್ಬರು ದಂಪತಿಯ  ಜಗಳ ಉಂಡು ಮಲಗಿದರೂ ನಿಲ್ಲಲಿಲ್ಲ, ಕೊನೆಗೆ ಪೊಲೀಸ್ ಸ್ಟೇಷನ್ ವರೆಗೂ ಜಗಳ ವ್ಯಾಪಿಸಿದ ಘಟನೆ ನಡೆದಿದೆ.


Provided by

ಬೆಂಗಳೂರು ವೈಟ್ ಫೀಲ್ಡ್ ಬಳಿಯ ವಿಜಯನಗರ ನಿವಾಸಿಯಾಗಿರುವ ಪತಿ, ಕೋಲಾರದ ಇದ್ರಿಸ್ ಶಾ ನಗರ ನಿವಾರಿಯನ್ನು ಮದುವೆಯಾಗಿದ್ದರು.ಇವರಿಬ್ಬರ ನಡುವೆ ಬೇರೆ ಮನೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ತೀವ್ರ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಇದೇ ಸಂದರ್ಭ ಈ ಗಂಡ ಹೆಂಡತಿಯ ಜಗಳಕ್ಕೆ ಕುಟುಂಬಸ್ಥರು ಕೂಡ ಸಾಥ್ ನೀಡುತ್ತಿರುವುದರಿಂದಾಗಿ ಈ ಸಮಸ್ಯೆ ಇನ್ನಷ್ಟು ಗಟ್ಟಿಯಾಗಿದೆ.

ಇದೇ ಜಗಳಕ್ಕೆ ಸಂಬಂಧಿಸಿದಂತೆ ಗಂಡ, ಹೆಂಡತಿ ಇಬ್ಬರೂ ಪರಸ್ಪರ ದೂರು ಪ್ರತಿ ದೂರು ನೀಡಲು ಠಾಣೆಗೆ ಆಗಮಿಸಿದ್ದು,  ಈ ವೇಳೆ ಇಬ್ಬರ ಕುಟುಂಬಸ್ಥರು, ಸಂಬಂಧಿಕರು ಕೂಡ ಸೇರಿಕೊಂಡು ಪೊಲೀಸ್ ಠಾಣೆಗೆ ಬಂದಿದ್ದಾರೆ. ಈ ವೇಳೆ ಪರಸ್ಪರ ಬೈದಾಡಿಕೊಂಡು ಪರಸ್ಪರ ಹಲ್ಲೆ ನಡೆಸಿಕೊಂಡಿದ್ದಾರೆ. ಈ ವೇಳೆ ಪೊಲೀಸರು ಎಲ್ಲರ ಜಗಳವನ್ನು ತಡೆದು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/HpGUvPNd4TWBQJG8MXH5on

ಇನ್ನಷ್ಟು ಸುದ್ದಿಗಳು…

ರೇಣುಕಾಚಾರ್ಯ, ಕಾರಜೋಳ ಚಿರತೆ ಹಿಡಿಯುವುದರಲ್ಲಿ ಎಕ್ಸಪರ್ಟ್ ಗಳು | ಸದನದಲ್ಲಿ ಸ್ವಾರಸ್ಯಕರ ಚರ್ಚೆ

“ನನ್ನ ಪಂಚೆ ಕಳಚ್ಕೊಂಡಿದೆ, ಈಶ್ವರಪ್ಪ…” | ಇಡೀ ಸದನವನ್ನು ನಗೆಗಡಲಲ್ಲಿ ತೇಲಿಸಿದ ಸಿದ್ದರಾಮಯ್ಯ

ಬೆಂಗಳೂರು: ಅಪಾರ್ಟ್​ಮೆಂಟ್ ಅಗ್ನಿ ಅವಘಡ ಪ್ರಕರಣಕ್ಕೆ ಹೊಸ ತಿರುವು: ಗ್ಯಾಸ್ ಸಿಲಿಂಡರ್ ಬ್ಲಾಸ್ಟ್ ಆಗಿಲ್ಲ!

ಯುವತಿಯೊಂದಿಗಿನ ಫೋಟೋ ಲೀಕ್ ಆಗುವ ಭೀತಿಯಿಂದ ಸ್ವಾಮೀಜಿ ಆತ್ಮಹತ್ಯೆ? | ಡೆತ್ ನೋಟ್ ನಲ್ಲಿ ಏನಿತ್ತು ಗೊತ್ತಾ?

ಸೆಲ್ಫಿ ತೆಗೆದುಕೊಳ್ಳುತ್ತಿದ್ದ ವೇಳೆ ಕಾಲು ಜಾರಿ ನದಿಗೆ ಬಿದ್ದ ತಾಯಿ, ಮಗ ದಾರುಣ ಸಾವು

ಯುವತಿಯೊಂದಿಗಿನ ಫೋಟೋ ಲೀಕ್ ಆಗುವ ಭೀತಿಯಿಂದ ಸ್ವಾಮೀಜಿ ಆತ್ಮಹತ್ಯೆ? | ಡೆತ್ ನೋಟ್ ನಲ್ಲಿ ಏನಿತ್ತು ಗೊತ್ತಾ?

ಇತ್ತೀಚಿನ ಸುದ್ದಿ