ಅವಿದ್ಯಾವಂತರು ದೇಶಕ್ಕೆ ಹೊರೆ, ಅವರು ಉತ್ತಮ ನಾಗರಿಕನಾಗಲು ಹೇಗೆ ಸಾಧ್ಯ? | ಅಮಿತ್ ಶಾ - Mahanayaka
8:44 AM Tuesday 9 - September 2025

ಅವಿದ್ಯಾವಂತರು ದೇಶಕ್ಕೆ ಹೊರೆ, ಅವರು ಉತ್ತಮ ನಾಗರಿಕನಾಗಲು ಹೇಗೆ ಸಾಧ್ಯ? | ಅಮಿತ್ ಶಾ

amit shah
11/10/2021

ನವದೆಹಲಿ: ಅವಿದ್ಯಾವಂತ ಜನರು ಈ ದೇಶಕ್ಕೆ ಹೊರೆಯಾಗಿದ್ದಾರೆ. ಅವಿದ್ಯಾವಂತರಿಂದ ಯಾವತ್ತೂ ಭಾರತದ ಉತ್ತಮ ನಾಗರಿಕರಾಗಿರಲು ಸಾಧ್ಯವಿಲ್ಲ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದು,  ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಅಮಿತ್ ಶಾ ಈ ಹೇಳಿಕೆ ನೀಡಿದ್ದಾರೆ.


Provided by

ಗುಜರಾತ್ ಸಿಎಂ ಆಗಿ ಹಾಗೂ ಬಳಿಕ ಪ್ರಧಾನಿಯಾಗಿ ನರೇಂದ್ರ ಮೋದಿ ಅವರು 20 ವರ್ಷ ಪೂರೈಸಿದ ಸಂದರ್ಭದಲ್ಲಿ ಸಂಸತ್ ಟಿವಿ ಜೊತೆಗೆ ನಡೆಸಿದ ಸಂದರ್ಶನದಲ್ಲಿ ಅಮಿತ್ ಶಾ  ಈ ಹೇಳಿಕೆ ನೀಡಿದ್ದಾರೆ ಎಂದು ಕೆಲವೇ ಕೆಲವು ಮಾಧ್ಯಮಗಳು ವರದಿ ಮಾಡಿವೆ.

ಶಾಲೆಗಳಲ್ಲಿ ದಾಖಲಾತಿ ಹೆಚ್ಚಿಸಲು ಹಾಲಿ ಸರ್ಕಾರ ಹೇಗೆ ಶ್ರಮಿಸುತ್ತಿದೆ ಎನ್ನುವುದನ್ನು ವಿವರಿಸುವ ಸಂದರ್ಭದಲ್ಲಿ ಈ ಹೇಳಿಕೆ ನೀಡಿದ ಗೃಹ ಸಚಿವರು,  ಒಬ್ಬ ಅಶಿಕ್ಷಿತ ವ್ಯಕ್ತಿ ದೇಶಕ್ಕೆ ಹೊರೆ. ಆತನಿಗೆ ಸಂವಿಧಾನ ಪ್ರದತ್ತವಾದ ಹಕ್ಕುಗಳ ಬಗ್ಗೆ ನಿರೀಕ್ಷಿತ ಕರ್ತವ್ಯಗಳ ಬಗ್ಗೆ  ಆತನಿಗೆ ತಿಳಿದಿಲ್ಲ. ಇಂತಹ ವ್ಯಕ್ತಿ ಹೇಗೆ ಉತ್ತಮ ನಾಗರಿಕನಾಗಲು ಸಾಧ್ಯ? ಎಂದು ಪ್ರಶ್ನಿಸಿದ್ದಾರೆ ಎಂದು ವರದಿಯಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಒಬ್ಬ ಸರ್ವಾಧಿಕಾರಿ ನಾಯಕ ಎಂಬ ಆರೋಪಗಳಿಗೆ ಪ್ರತಿಕ್ರಿಯಿಸಿದ ಅವರು, ನಾನು ಮೋದಿ ಅವರ ಜೊತೆಗೆ ನಿಕಟವಾಗಿ ಕೆಲಸ ಮಾಡಿದ್ದೇನೆ ಹಾಗೂ ಅವರ ಕಾರ್ಯಶೈಲಿ ಬಗ್ಗೆ ತಿಳಿಸಿದ್ದೇನೆ. ಅವರು ಅತ್ಯಂತ ಸಹನೆಯಿಂದ ಆಲಿಸುತ್ತಾರೆ. ಯಾವುದೇ ವಿಚಾರಗಳಿರಲಿ, ಎಲ್ಲರ ಮಾತು ಆಲಿಸುತ್ತಾರೆ. ಆದರೆ ಕಡಿಮೆ ಮಾತನಾಡುತ್ತಾರೆ. ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಅವರು ಹೇಳಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಇನ್ನಷ್ಟು ಸುದ್ದಿಗಳು…

ರಾಜಕೀಯ ಅಂದ್ರೆ, ಜನರ ಮೇಲೆ ಫಾರ್ಚುನರ್‌ ಕಾರು ಹರಿಸುವುದಲ್ಲ | ತನ್ನ ಪಕ್ಷದ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ ಮುಖಂಡ!

ತುಳುನಾಡಿನ ಅಪ್ರತಿಮ ಅವಳಿ ವೀರರು ಕಾನದ ಕಟದರು | ಸಂಚಿಕೆ-01

500ಕ್ಕೂ ಅಧಿಕ ಚಿತ್ರದಲ್ಲಿ ನಟಿಸಿದ್ದ ಹಿರಿಯ ನಟ ನೆಡುಮುಡಿ ವೇಣು ನಿಧನ

ಲಾಕಪ್ ನ ಚಿಲಕ ತೆಗೆದು ಪರಾರಿಯಾದ ಅತ್ಯಾಚಾರ ಆರೋಪಿ!

KSRTC ಬಸ್  ಮತ್ತು ಆಟೋ ಡಿಕ್ಕಿ: ಮದುಮಗ ಸೇರಿದಂತೆ ಮೂವರ ದಾರುಣ ಸಾವು

ಅನ್ಯಜಾತಿಯ ಯುವತಿಯನ್ನು ಪ್ರೀತಿಸಿದ್ದಕ್ಕೆ ದಲಿತ ಯುವಕನ ಬರ್ಬರ ಹತ್ಯೆ!

ಜೋರು ಮಳೆಯ ವೇಳೆ ಮರದಡಿಯಲ್ಲಿ ನಿಂತಿದ್ದ ತಂದೆ ಮಗನಿಗೆ ಬಡಿದ ಸಿಡಿಲು | ತಂದೆಯ ದಾರುಣ ಸಾವು

ಟ್ಯೂಷನ್ ವೇಳೆ ವಿದ್ಯಾರ್ಥಿನಿಗೆ ಕಿರುಕುಳ ನೀಡಿದ ಶಿಕ್ಷಕ ಅರೆಸ್ಟ್

ರೈತರ ಮಾರಣಹೋಮ: ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರ ಪುತ್ರ ಪೊಲೀಸರ ಮುಂದೆ ಹಾಜರು

 

ಇತ್ತೀಚಿನ ಸುದ್ದಿ