ಕೇಂದ್ರ ಸಚಿವ ನಾರಾಯಣರಾಣೆ ಅರೆಸ್ಟ್: ರಣರಂಗವಾದ ಮುಂಬೈ | ಶಿವಸೇನೆ, ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ - Mahanayaka
9:40 AM Wednesday 5 - February 2025

ಕೇಂದ್ರ ಸಚಿವ ನಾರಾಯಣರಾಣೆ ಅರೆಸ್ಟ್: ರಣರಂಗವಾದ ಮುಂಬೈ | ಶಿವಸೇನೆ, ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ

narayan rane
24/08/2021

ಮುಂಬೈ: ನಾನು ಅಲ್ಲಿದ್ದರೆ ಅವರ ಕೆನ್ನೆಗೆ ಭಾರಿಸುತ್ತಿದ್ದೆ ಎಂದು ಕೇಂದ್ರ ಸಚಿವ ನಾರಾಯಣರಾಣೆ ಜನಾಶೀರ್ವಾದ ರ್ಯಾಲಿಯಲ್ಲಿ ನೀಡಿದ ಹೇಳಿಕೆಗೆ ಸಂಬಂಧಿಸಿದಂತೆ ಅವರನ್ನು ನಾಸಿಕ್‍ ನ ಪೊಲೀಸರ ತಂಡ ಬಂಧಿಸಿದ್ದು ಇದರ ಪರಿಣಾಮ ಮುಂಬೈ ರಣರಂಗವಾಗಿ ಪರಿವರ್ತನೆಯಾಗಿದೆ.

 

ನಾರಾಯಣರಾಣೆಯನ್ನು ಚಿಪ್ಲೂನ್ ಮತ್ತು ಕೊಂಕಣ ವಲಯದ ಪೊಲೀಸರ ತಂಡ ಅವರ ಮನೆಯಲ್ಲಿಯೇ ಬಂಧಿಸಿದೆ. ವಿವಾದಾತ್ಮಕ ಹೇಳಿಕೆಗಾಗಿ ಕೇಂದ್ರ ಸಚಿವರ ವಿರುದ್ಧ ಪುಣೆ, ಔರಂಗಾಬಾದ್ ಸೇರಿದಂತೆ ಹಲವಾರು ಕಡೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ನಾರಾಯಣರಾಣೆ ಅವರ ಮನೆ ಬಳಿ ಜಮಾವಣೆಗೊಂಡಿದ್ದ ಬಿಜೆಪಿ ಹಾಗೂ ಶಿವಸೇನಾ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದೆ.

 

ಕಾರ್ಯಕರ್ತರು ಪರಸ್ಪರ ಕಲ್ಲು ತೂರಾಟ ಮಾಡಿಕೊಂಡು ದೊಣ್ಣೆಗಳಿಂದ ಹೊಡೆದಾಡಿಕೊಂಡಿದ್ದಾರೆ. ಪರಿಸ್ಥಿತಿ ನಿಭಾಯಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ. ಉದ್ರಿಕ್ತ ಪರಿಸ್ಥಿತಿ ನಿರ್ಮಾಣವಾಗಿದ್ದರಿಂದಾಗಿ ಹೆಚ್ಚಿನ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.

 

ಇನ್ನಷ್ಟು ಸುದ್ದಿಗಳು…

 

ರವಿಚಂದ್ರನ್ ಅವರ “ಯಮ್ಮೊ ಯಮ್ಮೋ  ನೋಡ್ಬಾರ್ದನ್ನು ನಾ ನೋಡ್ಡೆ” ಅನ್ನೋ ಹಾಡು ಇಷ್ಟ ಎಂದ ನಟಿ ನವ್ಯಾ

ಪ್ರೀತಿಸಿದವಳ ತಂದೆಯ ತಲೆ ಹೊಡೆದು ಹತ್ಯೆ ಮಾಡಿದ ಪಾಗಲ್ ಪ್ರೇಮಿ!

ಹಾವಿನ ಬಾಲಕ್ಕೆ ರಾಕಿ ಕಟ್ಟಲು ಹೋದಾತನಿಗೆ ಸಾವನ್ನೇ ಉಡುಗೊರೆ ನೀಡಿದ ಹಾವು! | ವಿಡಿಯೋ ನೋಡಿ…

ಉಕ್ರೇನ್ ವಿಮಾನ ಹೈಜಾಕ್ ಆಗಿಲ್ಲ | ಇರಾನ್ ನೀಡಿದ ಸ್ಪಷ್ಟನೆ ಏನು ಗೊತ್ತಾ?

ಬಾರ್ ಮುಂದೆ ವೀರವನಿತೆಯರ ಪಡೆ ಕಂಡು ಬೆಚ್ಚಿಬಿದ್ದ ಕುಡುಕರು | ಮುಂದೆ ನಡೆದದ್ದೇನು ಗೊತ್ತಾ?

ಸೊಸೆಯನ್ನು ಕೆಂಡದ ಮೇಲೆ ನಡೆಸಿದ ಅತ್ತೆ! | ಅತ್ತೆಯ ಅಮಾನವೀಯ ಕೃತ್ಯಕ್ಕೆ ಸೊಸೆ ಹೇಳಿದ್ದೇನು ಗೊತ್ತೇ?

ರಕ್ಷಾ ಬಂಧನ ಕಟ್ಟಿ ವಾಪಸ್ ಆಗುತ್ತಿದ್ದ ವೇಳೆ ಭೀಕರ ಅಪಘಾತ: ಪತಿ, ಪತ್ನಿ, ಮಗು ದಾರುಣ ಸಾವು

ಇತ್ತೀಚಿನ ಸುದ್ದಿ