ಒಳಗೆ ಬನ್ನಿ… ‘ಇದು ಅಸ್ಪೃಷ್ಯತೆ ಮುಕ್ತ ಮನೆ’ : ಅಸ್ಪೃಷ್ಯತೆ ವಿರುದ್ಧ ಹೊಸ ಅಭಿಯಾನ
ಕೋಲಾರ: ಅಸ್ಪೃಷ್ಯತೆ ಆಚರಣೆ ವಿರುದ್ಧ ಹೊಸ ಅಭಿಯಾನವೊಂದು ಆರಂಭವಾಗಿದೆ. ಈ ಅಭಿಯಾನದಲ್ಲಿ ‘ಇದು ಅಸ್ಪೃಷ್ಯತೆ ಮುಕ್ತ ಮನೆ’ ಎಂಬ ಪತ್ರವನ್ನು ಮನೆಯ ಮುಂದೆ ಸಾರ್ವಜನಿಕರು ಅಳವಡಿಸುತ್ತಿದ್ದು, ನಮ್ಮ ಹಳ್ಳಿಯ ದಲಿತರೂ ಸೇರಿದಂತೆ ಎಲ್ಲರಿಗೂ ಮನೆಗೆ ಮುಕ್ತ ಪ್ರವೇಶವಿದೆ, ಒಳಗೆ ಬನ್ನಿ ಎಂದು ಬರೆದು ಅಸ್ಪೃಷ್ಯತೆ ವಿರುದ್ಧ ಜಾಗೃತಿ ಮೂಡಿಸಲಾಗುತ್ತಿದೆ.
ಶಿವಪ್ಪ ಅರಿವು (Shivappa Arivu) ಎಂಬವರ ಖಾತೆಯಿಂದ ಈ ರೀತಿಯ ಹಲವು ವಿಡಿಯೋಗಳು ಪೋಸ್ಟ್ ಆಗಿದ್ದು, ಅಸ್ಪೃಷ್ಯತೆ ವಿರುದ್ಧ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಇದೊಂದು ಉತ್ತಮ ಪ್ರಯತ್ನ ಎನ್ನುವ ಅಭಿಪ್ರಾಯಗಳು ಕೇಳಿ ಬಂದಿವೆ.
ಅರಿವು ಭಾರತ ಎಂಬ ಹೆಸರಿನಲ್ಲಿ ಈ ಅಭಿಯಾನ ನಡೆಯುತ್ತಿದ್ದು, ‘ನಮ್ಮ ನಡೆ ಅಸ್ಪೃಷ್ಯತೆ ಮುಕ್ತ ಭಾರತದೆಡೆಗೆ’ ಎನ್ನುವ ವಾಕ್ಯಗಳು ಗಮನ ಸೆಳೆದಿವೆ.
ಗ್ರಾಮದ ಪ್ರಜ್ಞಾವಂತರ ಮನೆಗಳಲ್ಲಿ ಅಸ್ಪೃಷ್ಯತೆ ವಿರುದ್ಧ ಈ ರೀತಿಯ ಪೋಸ್ಟರ್ ಅಂಟಿಸಿ, ನಮ್ಮ ಮನೆಯಲ್ಲಿ ಯಾವುದೇ ಅಸ್ಪೃಷ್ಯತಾ ಆಚರಣೆಗಳು ಇಲ್ಲ, ಹಳ್ಳಿಯ ದಲಿತರು ಸೇರಿದಂತೆ ಎಲ್ಲ ಜನರೂ ನಮ್ಮ ಮನೆಗೆ ಬರಬಹುದು, ಎಲ್ಲರೂ ಸಮಾನರು ಎನ್ನುವ ಸಂದೇಶವನ್ನು ಸಾರಲಾಗಿದೆ.
ಕೋಲಾರ ಜಿಲ್ಲೆಯ ವಿವಿಧ ಗ್ರಾಮಗಳ ಮನೆಗಳ ಮುಂದೆ ಇಂತಹದ್ದೊಂದು ಪೋಸ್ಟರ್ ಕಾಣಸಿಗುತ್ತಿದೆ. ಇಂತಹ ಅಭಿಯಾನ ಇಡೀ ರಾಜ್ಯದಲ್ಲಿ ನಡೆಯಬೇಕಿದೆ. ಈ ಮೂಲಕ ಅಸ್ಪೃಷ್ಯತೆಯ ನಿವಾರಣೆ ಮುಂದಾಗಬೇಕಿದೆ ಎನ್ನುವ ಅಭಿಪ್ರಾಯಗಳು ಕೇಳಿ ಬಂದಿವೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth