ಬಸ್ ನಿಲ್ಲಿಸಿದ ವೇಳೆ ನಮಾಝ್ ಮಾಡಲು ಅವಕಾಶ ಕೊಟ್ಟ ಆರೋಪ: ಯುಪಿಯಲ್ಲಿ ಡ್ರೈವರ್, ಕಂಡಕ್ಟರ್ ಅಮಾನತು
ಬಸ್ ಪ್ರಯಾಣದ ನಡುವೆ ಇಬ್ಬರಿಗೆ ನಮಾಜ್ ಮಾಡುವುದಕ್ಕಾಗಿ ಬಸ್ಸನ್ನು ಐದು ನಿಮಿಷ ಹೆಚ್ಚುವರಿಯಾಗಿ ನಿಲ್ಲಿಸಲಾಗಿತ್ತು ಎಂಬ ಆರೋಪದ ಹಿನ್ನೆಲೆಯಲ್ಲಿ ಉತ್ತರಪ್ರದೇಶದ ಸರಕಾರಿ ಸಾರಿಗೆ ಸಂಸ್ಥೆಯು ಡ್ರೈವರ್ ಮತ್ತು ಕಂಡಕ್ಟರ್ ನನ್ನು ಅಮಾನತು ಮಾಡಿದ ಘಟನೆ ನಡೆದಿದೆ.
ತಾನು ನಮಾಜು ಮಾಡುವುದಕ್ಕಾಗಿ ಬಸ್ಸನ್ನು ನಿಲ್ಲಿಸಿಲ್ಲ. ಮೂತ್ರ ವಿಸರ್ಜನೆ ಮಾಡುವುದಕ್ಕಾಗಿ ಎಲ್ಲರಿಗೂ ಐದು ನಿಮಿಷ ಬಸ್ಸನ್ನು ನಿಲ್ಲಿಸಿದ್ದೆ. ಹಾಗೆ ಹೋದವರಲ್ಲಿ ಇಬ್ಬರು ನಮಾಜು ಮಾಡಿದ್ದಾರೆ ಎಂದು ಡ್ರೈವರ್ ಸ್ಪಷ್ಟನೆ ನೀಡಿದ್ದಾರೆ.
ಉತ್ತರ ಪ್ರದೇಶದಿಂದ ದೆಹಲಿಗೆ ಸಾಗುತ್ತಿದ್ದ ಈ ಎಸಿ ಬಸ್ಸನ್ನು ವಾಶ್ ರೂಮ್‌ಗೆ ಹೋಗುವುದಕ್ಕಾಗಿ ಸ್ವಲ್ಪ ಸಮಯ ನಿಲ್ಲಿಸಲಾಗಿತ್ತು. ಈ ಬಸ್ ನಲ್ಲಿ 14 ಮಂದಿ ಇದ್ದರು. ಅದರಲ್ಲಿ ಇಬ್ಬರು ನಮಾಜ್ ಮಾಡಿದ್ದಾರೆ. ಈ ನಮಾಜಿನ ವಿಡಿಯೋವನ್ನು ಆ ಬಸ್ಸಿನಲ್ಲಿದ್ದ ಬೇರೆ ಯಾರೋ ವಿಡಿಯೋ ಮಾಡಿ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ. ಇವರು ನೀಡಿದ ದೂರಿನಂತೆ ಡ್ರೈವರ್ ಮತ್ತು ಕಂಡಕ್ಟರ್ ನನ್ನು ಸಸ್ಪೆಂಡ್ ಮಾಡಲಾಗಿದೆ.
ಬಸ್ಸಿನಿಂದ ವಾಶ್ರೂಮ್ ಗೆ ಹೋಗುವವರ ನಡುವೆ ಇಬ್ಬರು ನಮಾಜ್ ಮಾಡುವ ಇಚ್ಛೆಯನ್ನು ವ್ಯಕ್ತಪಡಿಸಿದರು. ಅದಕ್ಕಾಗಿ ಐದು ನಿಮಿಷ ಹೆಚ್ಚುವರಿ ಬಸ್ಸನ್ನು ನಿಲ್ಲಿಸಿದೆ. ಅವರು ನಮಾಜ್ ಮಾಡುವ ಮೂಲಕ ತಪ್ಪು ಮಾಡಿದ್ದಾರೆ ಎಂದು ನನಗೆ ಅನಿಸುತ್ತಿಲ್ಲ ಎಂದಿರುವ ಡ್ರೈವರ್, ಇದರ ವಿರುದ್ಧ ಹೋರಾಡುವುದಾಗಿ ತಿಳಿಸಿದ್ದಾರೆ
ಇದೇ ವೇಳೆ ಇವರನ್ನು ವಜಾಗೊಳಿಸಿರುವುದರ ವಿರುದ್ಧ ಎಂಪ್ಲಾಯಿ ವೆಲ್ಫೇರ್ ಅಸೋಸಿಯೇಷನ್ ಮುಂದೆ ಬಂದಿದೆ. ಯಾವುದೇ ತನಿಖೆ ಇಲ್ಲದೆ ಮತ್ತು ಡ್ರೈವರ್ ಮತ್ತು ಕಂಡಕ್ಟರ್ ಗಳನ್ನು ಸರಿಯಾಗಿ ವಿಚಾರಿಸದೆ ಸಸ್ಪೆಂಡ್ ಮಾಡಲಾಗಿದೆ ಎಂದು ಅಸೋಸಿಯೇಷನ್ ಅಧ್ಯಕ್ಷ ಹರಿ ಮೋಹನ್ ಮಿಶ್ರ ಹೇಳಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw