ಶಿಕ್ಷಕಿಯ ಮೇಲೆ ವೈದ್ಯ ಹಾಗೂ ಆತನ ಸಹೋದ್ಯೋಗಿಗಳಿಂದ ಸಾಮೂಹಿಕ ಅತ್ಯಾಚಾರ! - Mahanayaka

ಶಿಕ್ಷಕಿಯ ಮೇಲೆ ವೈದ್ಯ ಹಾಗೂ ಆತನ ಸಹೋದ್ಯೋಗಿಗಳಿಂದ ಸಾಮೂಹಿಕ ಅತ್ಯಾಚಾರ!

up repist doctor
04/10/2022

ಬಸ್ತಿ:  ಉತ್ತರ ಪ್ರದೇಶ ಅಕ್ಷರಶಃ ಅತ್ಯಾಚಾರಿಗಳ ಪ್ರದೇಶ ಎಂಬಂತಾಗಿದ್ದು, ಯಾವುದೇ ಭಯವಿಲ್ಲದೇ ಮಹಿಳೆಯರ ಮೇಲೆ ಅತ್ಯಾಚಾರ ನಡೆಸಲಾಗುತ್ತಿದೆ. ಇದೀಗ ಮತ್ತೊಂದು ಪ್ರಕರಣ ಬಯಲಿಗೆ ಬಂದಿದ್ದು, ಶಿಕ್ಷಕಿಯೊಬ್ಬರ ಮೇಲೆ ವೈದ್ಯ ಹಾಗೂ ಇಬ್ಬರು ಸಹೋದ್ಯೋಗಿಗಳು ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ನಡೆದಿದೆ.


Provided by

ಬಸ್ತಿ ಸದರ್ ಕೊಟ್ವಾಲಿ ಪ್ರದೇಶದ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೈದ್ಯ,  ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಶಿಕ್ಷಕಿಯನ್ನು ಫೇಸ್ ಬುಕ್ ಮೂಲಕ ಸ್ನೇಹ ಬೆಳೆಸಿದ್ದ. ಬಳಿಕ ತನ್ನನ್ನು ಭೇಟಿಯಾಗುವಂತೆ ಮನವಿ ಮಾಡಿಕೊಂಡಿದ್ದ.

ವೈದ್ಯನ ಮನವಿಯಂತೆ ಆಸ್ಪತ್ರೆಗೆ ಶಿಕ್ಷಕಿ ಬಂದಿದ್ದು, ಈ ವೇಳೆ ಆತ್ಮೀಯತೆಯಿಂದ ಮಾತನಾಡಿ, ತನ್ನ ಹಾಸ್ಟೇಲ್ ಗೆ ಕರೆದೊಯ್ದಿದ್ದು, ತನ್ನಿಬ್ಬರು ಸಹೋದ್ಯೋಗಿಗಳ ಜೊತೆಗೆ ಸೇರಿ ಸಾಮೂಹಿಕ ಅತ್ಯಾಚಾರ ನಡೆಸಿದ್ದಾನೆ ಎಂದು ಶಿಕ್ಷಕಿ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.


Provided by

ಘಟನೆ ಸಂಬಂಧ ಸೆಪ್ಟಂಬರ್ 27ರಂದು ಶಿಕ್ಷಕಿ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪ್ರಮುಖ ಆರೋಪಿ ವೈದ್ಯನನ್ನು ಬಂಧಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ