ವಾರದೊಳಗೆ ಭಾರತದಲ್ಲಿ ಬಿಡುಗಡೆಯಾಗಲಿದೆ 6 ಹೊಸ ಸ್ಮಾರ್ಟ್‌ ಫೋನ್‌ ಗಳು: ಏನಿದರ ವೈಶಿಷ್ಠ್ಯ? - Mahanayaka

ವಾರದೊಳಗೆ ಭಾರತದಲ್ಲಿ ಬಿಡುಗಡೆಯಾಗಲಿದೆ 6 ಹೊಸ ಸ್ಮಾರ್ಟ್‌ ಫೋನ್‌ ಗಳು: ಏನಿದರ ವೈಶಿಷ್ಠ್ಯ?

upcoming smartphones
28/07/2024

ಇನ್ನೊಂದು ವಾರದೊಳಗೆ  ಭಾರತಕ್ಕೆ ಬರೋಬ್ಬರಿ 6 ಹೊಸ ಸ್ಮಾರ್ಟ್‌ಫೋನ್‌ ಗಳು ಆಗಮಿಸಲಿದ್ದು,(Upcoming Smartphones) ಈ ಸ್ಮಾರ್ಟ್ ಫೋನ್ ಗಳು ಯಾವ ದಿನಾಂಕದಂದು ಬಿಡುಗಡೆಯಾಗಲಿದೆ ಹಾಗೂ ಇದರಲ್ಲಿರುವ ವೈಶಿಷ್ಠ್ಯಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ…

ಹೆಚ್ ​ಎಮ್ ​ಡಿ ಕ್ರೆಸ್ಟ್ ಸರಣಿ

HMD ಕಂಪನಿಯ ಮೊಟ್ಟ ಮೊದಲ ಸ್ಮಾರ್ಟ್​ಫೋನ್ ಭಾರತದಲ್ಲಿ ಬಿಡುಗಡೆ ಆಗಲು ಸಜ್ಜಾಗಿದೆ. ಈ ಸರಣಿಯಲ್ಲಿ ಕಂಪನಿಯು ಕ್ರೆಸ್ಟ್ ಮತ್ತು ಕ್ರೆಸ್ಟ್ ಮ್ಯಾಕ್ಸ್ 5G ಸ್ಮಾರ್ಟ್‌ಫೋನ್‌ ಗಳು ಸೇರಿದೆ. ಅಧಿಕೃತ HMD ಇಂಡಿಯಾ ಖಾತೆಯು ಜುಲೈ 25 ರಂದು ಈ ಫೋನ್ ಅನಾವರಣಗೊಳ್ಳಲಿದೆ ಎಂದು ಹೇಳಿದೆ. ಕ್ರೆಸ್ಟ್ ಸರಣಿಯನ್ನು ಅಮೆಜಾನ್ ಮೂಲಕ ದೇಶದಲ್ಲಿ ಮಾರಾಟ ಮಾಡಲಾಗುವುದು. ಈ ಫೋನಿನ ಫೀಚರ್ಸ್ ಕುರಿತು ಕಂಪನಿ ಅಧಿಕೃತ ಮಾಹಿತಿ ಈವರೆಗೆ ನೀಡಿಲ್ಲ.

ಒಪ್ಪೋ K12x 5G:

ಒಪ್ಪೋ K12x 5G ಫೋನ್ ಭಾರತದಲ್ಲಿ ಮುಂದಿನ ವಾರ ಜುಲೈ 29 ರಂದು ಬಿಡುಗಡೆಯಾಗಲಿದೆ. ಇ–ಕಾಮರ್ಸ್ ಪ್ಲಾಟ್‌ ಫಾರ್ಮ್ ಫ್ಲಿಪ್‌ ಕಾರ್ಟ್‌ನಿಂದ ಖರೀದಿಸಬಹುದು. ಇದರಲ್ಲಿ 6.67–ಇಂಚಿನ HD+ ಸ್ಕ್ರೀನ್ ಜೊತೆಗೆ 120Hz ರಿಫ್ರೆಶ್ ದರ ಇರುತ್ತದೆ. ಸ್ಪ್ಲಾಶ್ ಟಚ್ ತಂತ್ರಜ್ಞಾನವನ್ನು ಸಹ ಬೆಂಬಲಿಸುತ್ತದೆ, ಒದ್ದೆ ಕೈಗಳಿಂದ ಕೂಡ ಈ ಮೊಬೈಲ್ ಬಳಸಲು ಸಾಧ್ಯವಿದೆ. ಇದರಲ್ಲಿ ಕ್ವಾಲ್ಕಂ ಸ್ನಾಪ್​ಡ್ರಾಗನ್ 695 ಪ್ರೊಸೆಸರ್ ​ ಇದೆ.

ರಿಯಲ್ ಮಿ 13 ಪ್ರೊ ಸರಣಿ 5G:

ರಿಯಲ್ ಮಿ 13 ಪ್ರೊ ಮತ್ತು ರಿಯಲ್ ಮಿ 13 ಪ್ರೊ ಪ್ಲಸ್ 5G ಮುಂದಿನ ವಾರ ಜುಲೈ 30 ರಂದು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಆಗಲಿದೆ. ಈ ಫೋನ್ ಫ್ಲಿಪ್‌ ಕಾರ್ಟ್‌ನಲ್ಲಿ ಲಭ್ಯವಿರುತ್ತದೆ. ರಿಯಲ್ ಮಿ 13 ಪ್ರೊ ಸರಣಿ ಸ್ಮಾರ್ಟ್‌ಫೋನ್‌ AI ಜೊತೆಗೆ ಅಲ್ಟ್ರಾ–ಕ್ಲಿಯರ್ ಕ್ಯಾಮೆರಾವನ್ನು ಹೊಂದಿರುತ್ತವೆ. ಕಂಪನಿಯ ಮೊದಲ AI– ಫೋಟೋಗ್ರಫಿ ಆರ್ಕಿಟೆಕ್ಚರ್, ಹೈಪರಿಮೇಜ್+ ನೊಂದಿಗೆ ಬರುತ್ತಿರುವ ಮೊದಲ ಸ್ಮಾರ್ಟ್‌ಫೋನ್‌ ಇದಾಗಿದೆ.

ರಿಯಲ್ ಮಿ 13 ಪ್ರೊ+ 5G OIS ಜೊತೆಗೆ 50MP Sony LYT 701 ಪ್ರಾಥಮಿಕ ಕ್ಯಾಮೆರಾ ಮತ್ತು 50MP Sony LYT 600 ಪೆರಿಸ್ಕೋಪ್ ಟೆಲಿಫೋಟೋ ಕ್ಯಾಮೆರಾ ಜೊತೆಗೆ 3x ಆಪ್ಟಿಕಲ್ ಜೂಮ್ ಅನ್ನು ಹೊಂದಿದೆ . ಮುಂಬರುವ ಸ್ಮಾರ್ಟ್‌ಫೋನ್‌ಗಳು ಟಿಯುವಿ ರೈನ್‌ಲ್ಯಾಂಡ್ ಹೈ-ರೆಸಲ್ಯೂಶನ್ ಕ್ಯಾಮೆರಾ ಪ್ರಮಾಣೀಕರಣವನ್ನು ಪಡೆದುಕೊಂಡಿವೆ.

ನಥಿಂಗ್ ಫೋನ್ 2ಎ ಪ್ಲಸ್:

ನಥಿಂಗ್ ಕಂಪನಿಯ ಹೊಸ ಫೋನ್ ಜುಲೈ 31 ರಂದು ಭಾರತೀಯ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಬಿಡುಗಡೆ ಆಗಲಿದೆ. ಅಧಿಕೃತ ಬಿಡುಗಡೆಯ ನಂತರ, ಈ ಹ್ಯಾಂಡ್‌ ಸೆಟ್ ಅನ್ನು ಫ್ಲಿಪ್‌ ಕಾರ್ಟ್‌ನಲ್ಲಿ ಮಾರಾಟ ಮಾಡಲಾಗುತ್ತದೆ. ನಥಿಂಗ್ ಫೋನ್ 2a ಪ್ಲಸ್ ಅನ್ನು ಫೋನ್ 2a ಮಾಡೆಲ್​ ನಲ್ಲಿರುವ ಮೀಡಿಯಾಟೆಕ್ ಡೈಮೆನ್ಸಿಟಿ 7200 ಪ್ರೊ ಗಿಂತ ಹೆಚ್ಚು ಶಕ್ತಿಯುತವಾದ ಚಿಪ್‌ ಸೆಟ್‌ನಿಂದ ಬೆಂಬಲಿತವಾಗಿದೆ. ಇದರ ಬೆಲೆ ಎಷ್ಟೆಂದು ಬಹಿರಂಗವಾಗಿಲ್ಲ.

ಪೋಕೋ F6 ಡೆಡ್‌ ಪೂಲ್ ಲಿಮಿಟೆಡ್:

ಈ ಸ್ಮಾರ್ಟ್​ಫೋನ್ ಈ ವಾರದ ಕೊನೆಯಲ್ಲಿ ಜುಲೈ 26 ರಂದು ಭಾರತದಲ್ಲಿ ಅನಾವರಣಗೊಳ್ಳಲಿದೆ. ಇದು ಕಳೆದ ಮೇ ತಿಂಗಳಲ್ಲಿ ದೇಶದಲ್ಲಿ ಬಿಡುಗಡೆಯಾದ ಪೋಕೋ F6 5G ಯಂತೆಯೇ ಅದೇ ಫೀಚರ್ಸ್ ಹೊಂದಿರುವ ನಿರೀಕ್ಷೆಯಿದೆ. ಆದಾಗ್ಯೂ, ಫೋನ್‌ ನ ವಿಶೇಷ ಡೆಡ್‌ ಪೂಲ್ ರೂಪಾಂತರವು ಮಾರ್ವೆಲ್‌ ಹೀರೋದ ಸ್ಫೂರ್ತಿ ಪಡೆದ ವಿನ್ಯಾಸದೊಂದಿಗೆ ಬರುವ ಸಾಧ್ಯತೆಯಿದೆ. ಈ ಫೋನಿನ ಬ್ಯಾಕ್ ಪ್ಯಾನೆಲ್ ಡೆಡ್‌ ಪೂಲ್‌ ನ ಸೂಟ್‌ ನ ಬಣ್ಣವನ್ನು ಹೋಲುವ ಕಡುಗೆಂಪು ಛಾಯೆಯಲ್ಲಿ ಕಾಣಿಸಿಕೊಳ್ಳುತ್ತದೆ. ಎರಡು ಹಿಂಬದಿಯ ಕ್ಯಾಮೆರಾ ಮಾಡ್ಯೂಲ್‌ ಗಳು ಕಪ್ಪು ಬಣ್ಣದಲ್ಲಿ ಇದೆ. ಎಲ್‌ ಇಡಿ ಫ್ಲ್ಯಾಷ್ ಘಟಕವು ಮೇಲ್ಭಾಗದಲ್ಲಿ ಡೆಡ್‌ ಪೂಲ್ ಲೋಗೋವನ್ನು ಹೊಂದಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ