ಉಪ್ಪಿನಂಗಡಿ ಬಸ್ ನಿಲ್ದಾಣದಲ್ಲಿ ಭೀಕರ ಅಪಘಾತ: ತಾಯಿ ಮಗುವಿಗೆ ಡಿಕ್ಕಿ ಹೊಡೆದ ಕೆಎಸ್ಸಾರ್ಟಿಸಿ ಬಸ್
ಉಪ್ಪಿನಂಗಡಿ: ಕೆಎಸ್ಸಾರ್ಟಿಸಿ ಬಸ್ಸೊಂದು ಡಿಕ್ಕಿ ಹೊಡೆದ ಪರಿಣಾಮ ತಾಯಿ ಹಾಗೂ ಮಗು ಮೃತಪಟ್ಟಿ ದಾರುಣ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಬಸ್ ನಿಲ್ದಾಣದಲ್ಲಿ ಮಂಗಳವಾರ ನಡೆದಿದ್ದು, ವೇಗದಿಂದ ಬಂದ ಬಸ್ ತಾಯಿ ಮಗುವಿಗೆ ಡಿಕ್ಕಿ ಹೊಡೆದಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಬೆಳ್ತಂಗಡಿ ತಾಲೂಕಿನ ಶಿರ್ಲಾಲು ಗ್ರಾಮದ ಸಿದ್ದೀಕ್ ಎಂಬವರ ಪತ್ನಿ 25 ವರ್ಷ ವಯಸ್ಸಿನ ಶಾಹಿದಾ ಹಾಗೂ ಅವರ ಒಂದು ವರ್ಷ ವಯಸ್ಸಿನ ಮಗು ಶಾಹಿಲ್ ಮೃತಪಟ್ಟವರು ಎಂದು ತಿಳಿದು ಬಂದಿದ್ದು, ತಾಯಿ ಮನೆಗೆ ಆಗಮಿಸಿದ್ದ ಶಾಹಿದಾ ಅವರು ಮಂಗಳವಾರ ಬೆಳಗ್ಗೆ ಪುತ್ತೂರಿಗೆ ವೈದ್ಯರ ಬಳಿಗೆ ತೆರಳುತ್ತಿದ್ದ ವೇಳೆ ಉಪ್ಪಿನಂಗಡಿ ಬಸ್ ನಿಲ್ದಾಣದಲ್ಲಿ ಈ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ.
ಅತೀ ವೇಗದಿಂದ ಬಸ್ ನಿಲ್ದಾಣಕ್ಕೆ ಬಂದ ಬಸ್ ಏಕಾಏಕಿ ತಾಯಿ ಮಗುವಿಗೆ ಡಿಕ್ಕಿ ಹೊಡೆದಿರುವುದು ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ. ಇಕ್ಕಟ್ಟಿನ ಪ್ರದೇಶವಾಗಿರುವ ಸಣ್ಣ ಉಪ್ಪಿನಂಗಡಿ ಬಸ್ ನಿಲ್ದಾಣ ಸಾರ್ವಜನಿಕರಿಗೆ ಅಪಾಯಕಾರಿಯಾಗಿ ಪರಿಣಮಿಸುತ್ತಿದೆ.
ಎಲ್ಲ ನಗರಗಳು ಅಭಿವೃದ್ಧಿಯಾಗುತ್ತಿದ್ದರೂ, ಉಪ್ಪಿನಂಗಡಿಗೆ ಈ ಭಾಗ್ಯ ಸಿಕ್ಕಿಲ್ಲ. ಈ ಸಣ್ಣ ಪ್ರದೇಶದಲ್ಲಿ ಅತಿಯಾದ ವೇಗದಿಂದ ವಾಹನಗಳು ಸಂಚರಿಸುತ್ತಿದ್ದು, ಸಾರ್ವಜನಿಕರು ಪ್ರಾಣ ಅಂಗೈಯಲ್ಲಿಟ್ಟುಕೊಂಡು ನಗರದಲ್ಲಿ ಹೋಗಬೇಕಾದ ಪರಿಸ್ಥಿತಿ ಬಂದಿದೆ ಎಂದು ಘಟನೆಯ ಬೆನ್ನಲ್ಲೇ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಇನ್ನಷ್ಟು ಸುದ್ದಿಗಳು…
ಬೆಂಗಳೂರಿನಿಂದ ನಾಪತ್ತೆಯಾಗಿದ್ದ ಮಕ್ಕಳು ಮಂಗಳೂರಿನಲ್ಲಿ ಪತ್ತೆ!
ತರಕಾರಿ ವ್ಯಾಪಾರಿಯ ಹನಿಟ್ರ್ಯಾಪ್: ಯುವತಿ ಸಹಿತ ಮೂವರು ಆರೋಪಿಗಳ ಅರೆಸ್ಟ್
ಬಿಜೆಪಿಗೆ ಬಿಗ್ ಶಾಕ್: ಬಿಜೆಪಿ ತೊರೆದು ಪುತ್ರನೊಂದಿಗೆ ಕಾಂಗ್ರೆಸ್ ಗೆ ಸೇರ್ಪಡೆಗೊಂಡ ಸಚಿವ!
ಬೊಮ್ಮಾಯಿ ಸಂಪುಟದ 4 ಹಾಲಿ ಸಚಿವರಿಗೆ ಕೋಕ್ ನೀಡುವ ಸಾಧ್ಯತೆ | 8 ಶಾಸಕರಿಗೆ ಶೀಘ್ರವೇ ಸಚಿವ ಸ್ಥಾನ!
ಜೋರು ಮಳೆಯ ವೇಳೆ ಮರದಡಿಯಲ್ಲಿ ನಿಂತಿದ್ದ ತಂದೆ ಮಗನಿಗೆ ಬಡಿದ ಸಿಡಿಲು | ತಂದೆಯ ದಾರುಣ ಸಾವು