ಚೀಟಿ ಹಣದ ವಿಚಾರಕ್ಕೆ ಗಲಾಟೆ: ಯುವಕನ ಬರ್ಬರ ಹತ್ಯೆಯಲ್ಲಿ ಅಂತ್ಯ

ಚಿಕ್ಕಮಗಳೂರು: ಚೀಟಿ ಹಣದ ವಿಚಾರವಾಗಿ ನಡೆದ ಗಲಾಟೆ ಯುವಕನೊಬ್ಬನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ತರೀಕೆರೆ ತಾಲೂಕಿನ ಅಮೃತಾಪುರ ಗ್ರಾಮದಲ್ಲಿ ನಡೆದಿದೆ.
ಸಂಜುನಾಯ್ಕ (26) ಮೃತ ದುರ್ದೈವಿಯಾಗಿದ್ದು, ರುದ್ರೇಶ್ ನಾಯ್ಕ (26) ಕೊಲೆ ಆರೋಪಿಯಾಗಿದ್ದಾನೆ. ಕೊಲೆ ತಪ್ಪಿಸಲು ಬಂದ ಅವಿನಾಶ್ ಎಂಬವರಿಗೂ ಆರೋಪಿ ರುದ್ರೇಶ್ ಹಲ್ಲಿನಿಂದ ಗಂಭೀರ ಗಾಯವಾಗುವಂತೆ ಕಚ್ಚಿರುವ ಘಟನೆ ನಡೆದಿದೆ.
ಅಮೃತಾಪುರ ಸೇವಾಲಾಲ್ ಸಂಘದಲ್ಲಿನ ಚೀಟಿ ವ್ಯವಹಾರ ನಡೆಯುತ್ತಿದ್ದು, ಚೀಟಿ ಸರಿಯಾಗಿ ಕಟ್ಟದೇ ಸಂಜು ನಾಯ್ಕ ಗಲಾಟೆ ಮಾಡುತ್ತಿದ್ದ. ಗ್ರಾಮಸ್ಥರು ನೀನು ಚೀಟಿಗೆ ಬೇಡ ಎಂದು ವಾಪಸ್ ಕಳಿಸಿದ್ದರು ಎನ್ನಲಾಗಿದೆ.
ಮನೆಗೆ ಬಂದ ಮೇಲೆ ಸಂಜುನಾಯ್ಕ ಚೀಟಿ ಸದಸ್ಯರ ಜೊತೆ ಫೋನಿನಲ್ಲಿ ಜಗಳ ಮಾಡಿದ್ದಾನೆ. ಬಳಿಕ ನೇರವಾಗಿ ಹೋಗಿ ಮತ್ತೆ ಜಗಳ ಮಾಡುವಾಗ ಚೀಟಿ ಸದಸ್ಯ ರುದ್ರೇಶ್ ದೊಣ್ಣೆಯಲ್ಲಿ ಬಲವಾಗಿ ಹೊಡೆದಿದ್ದು, ಪರಿಣಾಮವಾಗಿ ತೀವ್ರ ರಕ್ತಸ್ರಾವದಿಂದ ಸಂಜು ನಾಯ್ಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಕೊಲೆ ಆರೋಪಿ ರುದ್ರೇಶ್ ನಾಯ್ಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD