ಕ್ರೂರ: ಗಾಯಗೊಂಡ ವ್ಯಕ್ತಿ ಮೇಲೆ ಮೂತ್ರ ಮಾಡಿದ ಯುವಕ: ಬಯಲಾಯಿತು ಮತ್ತೊಂದು ಅಮಾನವೀಯ ಕೃತ್ಯ - Mahanayaka

ಕ್ರೂರ: ಗಾಯಗೊಂಡ ವ್ಯಕ್ತಿ ಮೇಲೆ ಮೂತ್ರ ಮಾಡಿದ ಯುವಕ: ಬಯಲಾಯಿತು ಮತ್ತೊಂದು ಅಮಾನವೀಯ ಕೃತ್ಯ

25/07/2023

ಯುವಕನೋರ್ವ ಗಾಯಗೊಂಡ ವ್ಯಕ್ತಿಯ ಮೇಲೆ ಮೂತ್ರ ವಿಸರ್ಜನೆ ಮಾಡುತ್ತಿರುವ ಘಟನೆ ಆಗ್ರಾದಲ್ಲಿ ನಡೆದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವೀಡಿಯೋ ವೈರಲ್ ಆಗಿದೆ.

ಗಾಯಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ವ್ಯಕ್ತಿಯ ತಲೆ ಭಾಗದಲ್ಲಿ ಯುವಕ ಒದ್ದಿರುವುದು ವೀಡಿಯೋದಲ್ಲಿ ದಾಖಲಾಗಿದೆ. ಅಷ್ಟೇ ಅಲ್ಲದೇ ವ್ಯಕ್ತಿಯನ್ನು ಆ ಯುವಕ ಹಾಗೂ ಯುವಕನ ಸ್ನೇಹಿತರು ನಿಂದಿಸುತ್ತಿರುವುದೂ ಸಹ ಸ್ಪಷ್ಟವಾಗಿ ತಿಳಿಯುತ್ತದೆ.

ವೀಡಿಯೋ ವೈರಲ್ ಆಗುತ್ತಿದ್ದಂತೆಯೇ ಪೊಲೀಸರು ಕ್ರಮ ಕೈಗೊಂಡು ಯುವಕನನ್ನು ಬಂಧಿಸಿದ್ದಾರೆ. ಈ ವೀಡಿಯೋ ನಾಲ್ಕು ತಿಂಗಳ ಹಿಂದಿನದ್ದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇತರ ಆರೋಪಿಗಳಿಗಾಗಿ ಶೋಧಕಾರ್ಯ ನಡೆಯುತ್ತಿದೆ ಎಂದು ಡಿಸಿಪಿ ಸೂರಜ್ ಕುಮಾರ್ ರೈ ತಿಳಿಸಿದ್ದಾರೆ. ಆರೋಪಿ ಆದಿತ್ಯ ವಿರುದ್ಧ ಸೆಕ್ಷನ್ 307 ಅಡಿಯಲ್ಲಿ ಹತ್ಯೆ ಯತ್ನದ ಪ್ರಕರಣ ದಾಖಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BnbLYSQaXK1Hate4P0Bt3B

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ