UPSC ಯಿಂದ ಅಸಿಸ್ಟಂಟ್ ಕಮಾಂಡೆಂಟ್ ನೇಮಕಾತಿಗೆ ಅರ್ಜಿ ಅಹ್ವಾನ : ದೇಶ ಸೇವೆ ಮಾಡಬಯಸುವವರಿಗೆ ಸುವರ್ಣವಕಾಶ - Mahanayaka

UPSC ಯಿಂದ ಅಸಿಸ್ಟಂಟ್ ಕಮಾಂಡೆಂಟ್ ನೇಮಕಾತಿಗೆ ಅರ್ಜಿ ಅಹ್ವಾನ : ದೇಶ ಸೇವೆ ಮಾಡಬಯಸುವವರಿಗೆ ಸುವರ್ಣವಕಾಶ

upsc capf recruitment
06/03/2025

UPSC CAPF Recruitment 2025 : ಕೇಂದ್ರ ಲೋಕಸೇವಾ ಆಯೋಗವು, ವಿವಿಧ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ ಇಲಾಖೆಗಳಲ್ಲಿ ಖಾಲಿ ಇರುವ ಅಸಿಸ್ಟೆಂಟ್ ಕಮಾಂಡೆಂಟ್ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲು ನಿನ್ನೆ ಅಧಿಕೃತ ಅಧಿಸೂಚನೆ ಹೊರಡಿಸಿ ಅರ್ಜಿ ಆಹ್ವಾನಿಸಿದೆ.

ದೇಶಾದ್ಯಂತ ಒಟ್ಟಾರೆ 5 ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ ಇಲಾಖೆಗಳಲ್ಲಿ ಒಟ್ಟು 357 ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲು ಈ ಅಧಿಸೂಚನೆ ಹೊರಡಿಸಲಾಗಿದೆ.
ಇಲಾಕೆವಾರು ಹುದ್ದೆಗಳ ವಿವರ ಹಾಗೂ ನೇಮಕಾತಿಯ ಇದ್ದರೆ ವಿವಿಧ ಮಾಹಿತಿಗಳನ್ನು ಇಲ್ಲಿ ನೀಡಲಾಗಿದ್ದು ಅರ್ಹ ಅಭ್ಯರ್ಥಿಗಳು ಈ ಸುವರ್ಣ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.

ಇಲಾಖೆವಾರು ಖಾಲಿ ಇರುವ ಅಸಿಸ್ಟೆಂಟ್ ಕಮಾಂಡೆಂಟ್ ಹುದ್ದೆಗಳ ವಿವರ :

* BSF – 24 ಹುದ್ದೆಗಳು
* CRPF – 204 ಹುದ್ದೆಗಳು
* CISF – 92 ಹುದ್ದೆಗಳು
* ITBP – 04 ಹುದ್ದೆಗಳು
* SSB – 33 ಹುದ್ದೆಗಳು

ಈ ನೇಮಕಾತಿಗಾಗಿ ಯಾವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ?

20 ರಿಂದ 25 ವರ್ಷದ ಒಳಗಿನ ಯಾವುದಾದರೂ ಒಂದು ವಿಷಯದಲ್ಲಿ ಪದವಿ ಮುಗಿಸಿರುವಂತಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹತೆ ಹೊಂದಿರುತ್ತಾರೆ.

ಅಸಿಸ್ಟೆಂಟ್ ಕಮಾಂಡೆಂಟ್ ಹುದ್ದೆಗಳಿಗೆ ಹೇಗೆ ನೇಮಕಾತಿ ಮಾಡಿಕೊಳ್ಳಲಾಗುವುದು?

ಈ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲು 2 ಹಂತದಲ್ಲಿ ಲಿಖಿತ ಪರೀಕ್ಷೆಯನ್ನು ನಡೆಸಿ ನಂತರದಲ್ಲಿ ನೇರ ಸಂದರ್ಶನ ನಡೆಸಲಾಗುತ್ತದೆ. ತದನಂತರ ಫಿಸಿಕಲ್ ಟೆಸ್ಟ್ ಹಾಗೂ ಮೆಡಿಕಲ್ ಟೆಸ್ಟ್ ನಡೆಸಿ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳಲಾಗುವುದು

CAPF ನೇಮಕಾತಿಯ ಪ್ರಮುಖ ದಿನಾಂಕಗಳು :

* ಅರ್ಜಿ ಸಲ್ಲಿಕೆ ಪ್ರಾರಂಭವಾದ ದಿನಾಂಕ -ಮಾರ್ಚ್ 05, 2025
* ಅರ್ಜಿ ಸಲ್ಲಿಕೆ ಮುಕ್ತಾಯಗೊಳ್ಳುವ ದಿನಾಂಕ – 25 ಮಾರ್ಚ್ 2025
* ಲಿಖಿತ ಪರೀಕ್ಷಾ ದಿನಾಂಕ – 03 ಆಗಸ್ಟ್ 2025

ಅರ್ಜಿ ಶುಲ್ಕ – ಈ ನೇಮಕಾತಿಗೆ ಅರ್ಜಿ ಸಲ್ಲಿಸುವ ಎಲ್ಲಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವು 200ರೂಪಾಯಿ ಇದೆ.

ಅರ್ಜಿ ಸಲ್ಲಿಸಲು UPSC ಯ ಅಧಿಕೃತ ಜಾಲತಾಣ : www.upsc.gov.in


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BR3b3qhWZWaCzpD1m6N5uu

ಇತ್ತೀಚಿನ ಸುದ್ದಿ