ವಿವಾದದ ಬೆನ್ನಲ್ಲೇ ಯುಪಿಎಸ್ಸಿ ಅಧ್ಯಕ್ಷ ಸ್ಥಾನಕ್ಕೆ ಮೋದಿ ಆಪ್ತ ಮನೋಜ್ ಸೋನಿ ರಾಜೀನಾಮೆ - Mahanayaka
4:13 AM Thursday 19 - September 2024

ವಿವಾದದ ಬೆನ್ನಲ್ಲೇ ಯುಪಿಎಸ್ಸಿ ಅಧ್ಯಕ್ಷ ಸ್ಥಾನಕ್ಕೆ ಮೋದಿ ಆಪ್ತ ಮನೋಜ್ ಸೋನಿ ರಾಜೀನಾಮೆ

20/07/2024

ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್ಸಿ) ಅಧ್ಯಕ್ಷ ಮನೋಜ್ ಸೋನಿ ಅವರು ವೈಯಕ್ತಿಕ ಕಾರಣಗಳನ್ನು ನೀಡಿ ರಾಜೀನಾಮೆ ನೀಡಿದ್ದಾರೆ. ನಾಗರಿಕ ಸೇವೆಗಳಿಗೆ ಆಯ್ಕೆಗಾಗಿ ತಮ್ಮ ಜಾತಿ, ಆದಾಯ ಮತ್ತು ದೈಹಿಕ ಅಂಗವೈಕಲ್ಯ ಕೋಟಾಗಳನ್ನು ತಪ್ಪಾಗಿ ನಿರೂಪಿಸಿದ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಲ್ಲಿ ನಿರ್ಲಕ್ಷ್ಯ ತೋರಿದ್ದಕ್ಕಾಗಿ ಪರೀಕ್ಷಾ ಆಯೋಗವು ಗಂಭೀರ ಟೀಕೆಗಳನ್ನು ಎದುರಿಸುತ್ತಿರುವ ಮಧ್ಯೆ ಸೋನಿ ಇವರ ರಾಜೀನಾಮೆ ಸುದ್ದಿ ಬಂದಿದೆ. ಸೋನಿ ಅವರ ಅಧಿಕಾರಾವಧಿ 2029 ರಲ್ಲಿ ಕೊನೆಗೊಳ್ಳಬೇಕಿತ್ತು. ಆದರೆ ಅವರು ಗಡುವಿನ ಐದು ವರ್ಷಗಳ ಮೊದಲೇ ರಾಜೀನಾಮೆ ನೀಡಿದ್ದಾರೆ.

ಯುಪಿಎಸ್ಸಿ ಅಧ್ಯಕ್ಷ ಮನೋಜ್ ಸೋನಿ ಅವರು ವೈಯಕ್ತಿಕ ಕಾರಣಗಳಿಂದಾಗಿ ರಾಜೀನಾಮೆ ನೀಡಿದ್ದಾರೆ. ಅವರ ರಾಜೀನಾಮೆಯನ್ನು ಇನ್ನೂ ಸ್ವೀಕರಿಸಲಾಗಿಲ್ಲ ಎಂದು ಸಿಬ್ಬಂದಿ ಮತ್ತು ತರಬೇತಿ ಇಲಾಖೆ (ಡಿಒಪಿಟಿ) ಮೂಲಗಳನ್ನು ಉಲ್ಲೇಖಿಸಿ ಎಎನ್ಐ ವರದಿ ಮಾಡಿದೆ. ಮನೋಜ್ ಸೋನಿ 2023 ರಲ್ಲಿ ಯುಪಿಎಸ್ಸಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ಅವರು ೨೦೧೭ ರಲ್ಲಿ ಯುಪಿಎಸ್ಸಿ ಸದಸ್ಯರಾಗಿ ಸೇರಿದ್ದರು.

ವರದಿಗಳ ಪ್ರಕಾರ, 2020 ರಲ್ಲಿ ಸ್ವಾಮಿನಾರಾಯಣ ಅವರಿಂದ ದೀಕ್ಷೆ ಪಡೆದಿರೋ ಸೋನಿ, ಗುಜರಾತ್ ನ ಅನುಪಮ್ ಮಿಷನ್ ಗೆ ಹೆಚ್ಚಿನ ಸಮಯವನ್ನು ಮೀಸಲಿಡಲು ಬಯಸಿದ್ದಾರೆ. ಮನೋಜ್ ಸೋನಿ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರ ಆಪ್ತರೆಂದು ಪರಿಗಣಿಸಲಾಗಿದೆ. 2005ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಮೋದಿ ಅವರು ಸೋನಿ ಅವರನ್ನು ವಡೋದರಾದ ಎಂಎಸ್ ವಿಶ್ವವಿದ್ಯಾಲಯದ ಉಪಕುಲಪತಿಯಾಗಿ ನೇಮಿಸಿದ್ದರು.


Provided by

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ