16 ಸಾವಿರ ಅಡಿ ಎತ್ತರದಲ್ಲಿ ಏಕಾಏಕಿ ತೆರೆದುಕೊಂಡ ವಿಮಾನದ ಎಮರ್ಜೆನ್ಸಿ ಎಕ್ಸಿಟ್ ಬಾಗಿಲು

alaska airlines flight 1282
06/01/2024

ಕ್ಯಾಲಿಫೋರ್ನಿಯಾ: ಅಮೇರಿಕದ ಕ್ಯಾಲಿಫೋರ್ನಿಯಾದಲ್ಲಿ ಸಂಭವಿಸಬಹುದಾಗಿದ್ದ ಭಾರೀ ವಿಮಾನ ದುರಂತವೊಂದು ತಪ್ಪಿದ್ದು, 16 ಸಾವಿರ ಅಡಿ ಎತ್ತರದಲ್ಲಿ ಹಾರುತ್ತಿದ್ದ ವೇಳೆ ವಿಮಾನದ ಡೋರ್ ತೆರೆದುಕೊಂಡಿದ್ದು, ಸ್ವಲ್ಪದರಲ್ಲೇ ವಿಮಾನದಲ್ಲಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಅಲಾಸ್ಕಾ ಏರ್ ಲೈನ್ಸ್ ಫ್ಲೈಟ್- 1282 ಇಂದು 171 ಪ್ರಯಾಣಿಕರು ಮತ್ತು 6 ಸಿಬ್ಬಂದಿಗಳನ್ನು ಹೊತ್ತು ಕ್ಯಾಲಿಫೋರ್ನಿಯಾದ ಒಂಟಾರಿಯೊ ಸಿಟಿಗೆ ಒರೆಗಾನ್ ನ ಪೋರ್ಟ್ಲ್ಯಾಂಡ್ ಸಿಟಿಯಿಂದ ಹೊರಟಿತ್ತು. ವಿಮಾನ ಟೇಕ್ ಆಫ್ ಆಗಿ ಕೇವಲ 20 ನಿಮಿಷಗಳಲ್ಲಿ ಸುಮಾರು 16 ಸಾವಿರ ಅಡಿ ಎತ್ತರದಲ್ಲಿ ವಿಮಾನದ ತುರ್ತು ಬಾಗಿಲು ತೆರೆದುಕೊಂಡಿದೆ.

ವಿಮಾನದ ಬಾಗಿಲು ತೆರೆದುಕೊಂಡ ಪರಿಣಾಮ ವಿಮಾನದೊಳಗೆ ಪ್ರಯಾಣಿಕರು ಗಾಳಿಯ ಒತ್ತಡಕ್ಕೆ ಸಿಲುಕಿ, ಕಂಗಾಲಾಗಿದ್ದಾರೆ. ವಿಮಾನ ಸಿಬ್ಬಂದಿ ತಕ್ಷಣವೇ ಆಮ್ಲಜನಕದ ಮಾಸ್ಕ್ ಗಳನ್ನು ಪ್ರಯಾಣಿಕರಿಗೆ ನೀಡಿದ್ದಾರೆ. ಏಕಾಏಕಿ ವಿಮಾನದೊಳಗೆ ಉಂಟಾದ ಗೊಂದಲದಿಂದಾಗಿ ಕೆಲವು ಪ್ರಯಾಣಿಕರ ಮೊಬೈಲ್ ಗಳು ತುರ್ತು ಬಾಗಿಲಿನ ಮೂಲಕ ಹೊರಗೆಸೆಯಲ್ಪಟ್ಟವು. ಅದೃಷ್ಟವಶಾತ್ ಯಾರಿಗೂ ಯಾವುದೇ ಅಪಾಯ ಸಂಭವಿಸಿಲ್ಲ.

ಬೋಯಿಂಗ್ 737 ಮ್ಯಾಕ್ಸ್ 9 ವಿಮಾನವು ಕೇವಲ 2 ತಿಂಗಳ ಹಿಂದೆಯಷ್ಟೇ ಸಿದ್ಧವಾಗಿದ್ದು, ಇದೀಗ ಬಳಕೆಗೆ ಆರಂಭಿಸಲಾಗಿತ್ತು. ವಿಮಾನ ಸಂಸ್ಥೆಯ ನಿರ್ಲಕ್ಷ್ಯದಿಂದಾಗಿ ಈ ಘಟನೆ ನಡೆದಿದೆ ಅನ್ನೋ ಆಕ್ರೋಶಗಳು ಇದೀಗ ವ್ಯಾಪಕವಾಗಿ ಕೇಳಿ ಬಂದಿದೆ.


 

ಇತ್ತೀಚಿನ ಸುದ್ದಿ

Exit mobile version