ನ್ಯೂ ಮೆಕ್ಸಿಕೋದಲ್ಲಿ ಗುಂಡಿನ ದಾಳಿ: 3 ಸಾವು, 15 ಮಂದಿಗೆ ಗಾಯ

ನ್ಯೂ ಮೆಕ್ಸಿಕೋದ ಲಾಸ್ ಕ್ರೂಸೆಸ್ ನ ಉದ್ಯಾನವನದಲ್ಲಿ ಶುಕ್ರವಾರ ರಾತ್ರಿ (ಸ್ಥಳೀಯ ಸಮಯ) ನಡೆದ ಗುಂಡಿನ ದಾಳಿಯಲ್ಲಿ ಮೂವರು ಸಾವನ್ನಪ್ಪಿದ್ದಾರೆ ಮತ್ತು 15 ಜನರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಪೊಲೀಸರನ್ನು ಉಲ್ಲೇಖಿಸಿ ಸಿಎನ್ಎನ್ ವರದಿ ಮಾಡಿದೆ.
ಲಾಸ್ ಕ್ರೂಸಸ್ ಪೊಲೀಸರ ಫೇಸ್ಬುಕ್ ಪೋಸ್ಟ್ ಪ್ರಕಾರ, ಸ್ಥಳೀಯ ಸಮಯ ರಾತ್ರಿ 10 ಗಂಟೆ ಸುಮಾರಿಗೆ ನಡೆದ ಗುಂಡಿನ ದಾಳಿಯಲ್ಲಿ 19 ವರ್ಷದ ಇಬ್ಬರು ಮತ್ತು 16 ವರ್ಷದ ಯುವಕ ಸಾವನ್ನಪ್ಪಿದ್ದಾರೆ. ಬಲಿಪಶುಗಳ ಗುರುತುಗಳು ಇನ್ನೂ ತಿಳಿದುಬಂದಿಲ್ಲ.
ಗಾಯಗೊಂಡವರು 16 ರಿಂದ 36 ವರ್ಷ ವಯಸ್ಸಿನವರು ಎಂದು ಪೊಲೀಸರು ತಿಳಿಸಿದ್ದಾರೆ. ಗುಂಡಿನ ದಾಳಿಗೆ ಸಂಬಂಧಿಸಿದಂತೆ ಇನ್ನೂ ಯಾರನ್ನೂ ಬಂಧಿಸಲಾಗಿಲ್ಲ, ಆದರೆ ಪೊಲೀಸರು “ಅನೇಕ ಸುಳಿವುಗಳನ್ನು ಆಧಾರಿಸಿ ತನಿಖೆ ನಡೆಸುತ್ತಿದ್ದಾರೆ” ಎಂದು ಹೇಳಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj