ಭಾರತೀಯರ ಮೇಲೆ ಅಮೆರಿಕ ಕ್ರೌರ್ಯ: ಪೇಟ ತೊಡಲು ಹೋದ ಸಿಖ್ ವ್ಯಕ್ತಿಗೆ ಅಮೆರಿಕದ ಯೋಧ ತಡೆ

ಪ್ರಧಾನಿ ನರೇಂದ್ರ ಮೋದಿಯವರು ಅಮೆರಿಕಕ್ಕೆ ಭೇಟಿ ಕೊಟ್ಟು ಅಧ್ಯಕ್ಷ ಟ್ರಂಪ್ ಅವರ ಜೊತೆ ಮಾತುಕತೆ ನಡೆಸಿದ ಬಳಿಕವೂ ಅಕ್ರಮ ವಲಸಿಗರನ್ನು ಕೈಕೋಳ ತೊಡಿಸಿ ಕಾಲಿಗೆ ಸಂಕೋಲೆಯಿಂದ ಬಿಗಿದು ಕಳಿಸುವುದು ಮಾತ್ರ ನಿಂತಿಲ್ಲ. ಇದೀಗ ಅಮೃತಸರ ವಿಮಾನ ನಿಲ್ದಾಣಕ್ಕೆ ಬಂದಿರುವ ನೂರಕ್ಕಿಂತಲೂ ಅಧಿಕ ವಲಸಿಗರನ್ನು ಅಮೆರಿಕ ಇದೇ ರೀತಿಯಲ್ಲಿ ಕಳುಹಿಸಿಕೊಟ್ಟಿದೆ ಮತ್ತು ಇದರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಹಾಗೆಯೇ ಸಿಖ್ ವ್ಯಕ್ತಿ ತನ್ನ ಪೇಟ ತೊಡುವುದಕ್ಕೆ ಪ್ರಯತ್ನಿಸಿದಾಗ ಅಮೆರಿಕನ್ ಯೋಧ ಅದನ್ನು ತಡೆದ ಘಟನೆಯೂ ನಡೆದಿದೆ.
ಪೇಟ ಇಲ್ಲದೆ ಕುಳಿತಿರುವ ಸಿಖ್ ಯಾತ್ರಿಕನ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಗುರುದ್ವಾರ ಪ್ರಬಂಧಕ್ ಸಮಿತಿ ತೀವ್ರವಾಗಿ ವಿರೋಧಿಸಿದೆ.
ಅಮೆರಿಕಾದಿಂದ ಬಂದ ಮೂರನೇ ವಿಮಾನದಲ್ಲಿ ಈ ಘಟನೆ ನಡೆದಿದೆ. 112 ಮಂದಿ ವಲಸಿಗರು ಈ ವಿಮಾನದಲ್ಲಿ ಬಂದು ಅಮೃತಸರದಲ್ಲಿ ಇಳಿದಿದ್ದಾರೆ. ಇದರಲ್ಲಿ 44 ಮಂದಿ ಹರಿಯಾಣದವರು. 33 ಮಂದಿ ಗುಜರಾತಿನವರು ಮತ್ತು 31 ಮಂದಿ ಪಂಜಾಬಿನವರು. ಇಬ್ಬರು ಉತ್ತರಪ್ರದೇಶದವರಾಗಿದ್ದಾರೆ. ಹಿಮಾಚಲ ಪ್ರದೇಶ ಮತ್ತು ಉತ್ತರಖಂಡದಿಂದ ಒಬ್ಬೊಬ್ಬರು ಈ ವಲಸಿಗರಲ್ಲಿ ಸೇರಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj