ಅಮೆರಿಕದಿಂದ ಗಡೀಪಾರು: ವಲಸಿಗರ ಕೈಗೆ ಕೈಕೋಳ ಹಾಕಿದ್ದಕ್ಕೆ ತೀವ್ರ ಆಕ್ರೋಶ

27/01/2025

ಅಮೆರಿಕದಿಂದ ಗಡೀಪಾರು ಮಾಡಲಾದ ಹಲವಾರು ವಲಸಿಗರನ್ನು ಹೊತ್ತ ವಿಮಾನವು ಬ್ರೆಝಿಲ್‌ನ ಉತ್ತರ ನಗರವಾದ ಮನೌಸ್‌ನಲ್ಲಿ ಇಳಿದಿದೆ. ಈ ವೇಳೆ ಪ್ರಯಾಣಿಕರಿಗೆ ಕೈಕೋಳಗಳನ್ನು ಹಾಕಿ ಕಳುಹಿಸಲಾಗಿದ್ದು, ಈ ಬಗ್ಗೆ ಬ್ರೆಝಿಲ್ ಸರ್ಕಾರ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಅಮೆರಿಕದ ಈ ನಡೆಯು ಮಾನವ ಹಕ್ಕುಗಳ “ಸ್ಪಷ್ಟ ನಿರ್ಲಕ್ಷ್ಯ” ಎಂದು ಕರೆದಿದೆ.

ಬ್ರೆಝಿಲ್ ವಿದೇಶಾಂಗ ಸಚಿವಾಲಯವು ಘಟನೆಯನ್ನು ಖಂಡಿಸಿದ್ದು, ಪ್ರಯಾಣಿಕರನ್ನು “ಅವಮಾನಕರವಾಗಿ ನಡೆಸಿಕೊಂಡಿರುವ” ಬಗ್ಗೆ ಅಮೆರಿಕದಿಂದ ವಿವರಣೆಯನ್ನು ಕೋರುವುದಾಗಿ ಹೇಳಿದೆ. ವಿಮಾನ ಬಂದ ನಂತರ ಬ್ರೆಝಿಲ್‌ನ ನ್ಯಾಯ ಸಚಿವಾಲಯವು ಅಮೆರಿಕದ ಅಧಿಕಾರಿಗಳಿಗೆ “ತಕ್ಷಣವೆ ಕೈಕೋಳವನ್ನು ತೆಗೆದುಹಾಕುವಂತೆ” ಆದೇಶಿಸಿದೆ.

ವಲಸಿಗರನ್ನು
ಲ್ಯಾಟಿನ್ ಅಮೇರಿಕನ್ ದೇಶಗಳು ಮತ್ತು ಭಾರತ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರ ಕಠಿಣ ವಲಸೆ ವಿರೋಧಿ ನಿಲುವನ್ನು ಎದುರಿಸುತ್ತಿವೆ. ಅದೇ ಸಮಯದಲ್ಲಿ ಈ ಘಟನೆ ಸಂಭವಿಸಿದೆ. ನೂತನ ಅಧ್ಯಕ್ಷ ಟ್ರಂಪ್‌ ಅನಿಯಮಿತ ವಲಸೆ ಮೇಲೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದು, ದೊಡ್ಡ ಪ್ರಮಾಣದ ಗಡೀಪಾರುಗಳನ್ನು ಮಾಡುವುದಾಗಿ ಘೋಷಿಸಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ

Exit mobile version