ಇಸ್ರೇಲ್ ಗೆ ಕೋಟ್ಯಾಂತರ ರೂಪಾಯಿ ಆಯುಧವನ್ನು ಮಾರಾಟ ಮಾಡಲು ಅಮೇರಿಕ ನಿರ್ಧಾರ - Mahanayaka

ಇಸ್ರೇಲ್ ಗೆ ಕೋಟ್ಯಾಂತರ ರೂಪಾಯಿ ಆಯುಧವನ್ನು ಮಾರಾಟ ಮಾಡಲು ಅಮೇರಿಕ ನಿರ್ಧಾರ

28/11/2024

ಗಾಝಾದಲ್ಲಿ ಕದನ ವಿರಾಮ ಏರ್ಪಡಿಸುವ ಬಗ್ಗೆ ಜಾಗತಿಕವಾಗಿ ಕೂಗು ಕೇಳಿ ಬರುತ್ತಿರುವುದರ ನಡುವೆಯೂ ಇಸ್ರೇಲ್ ಗೆ ಕೋಟ್ಯಾಂತರ ರೂಪಾಯಿ ಆಯುಧವನ್ನು ಮಾರಾಟ ಮಾಡಲು ಅಮೇರಿಕ ನಿರ್ಧರಿಸಿದೆ. 680 ಮಿಲಿಯನ್ ಡಾಲರ್ ಮೊತ್ತದ ಆಯುಧವನ್ನು ಇಸ್ರೇಲ್ ಗೆ ಮಾರಾಟ ಮಾಡಲು ಅಧ್ಯಕ್ಷ ಜೋ ಬೈಡನ್ ಅವರು ಅಂಗೀಕಾರ ನೀಡಿದ್ದಾರೆ ಎಂದು ವರದಿಯಾಗಿದೆ.

ಲೆಬನಾನ್ ಜೊತೆಗಿನ ಇಸ್ರೇಲ್ ನ ಕದನ ವಿರಾಮವನ್ನುಇದೇ ಬೈಡೆನ್ ಘೋಷಿಸಿದ್ದರು. ಅದರ ಬೆನ್ನಿಗೆ ಈ ಶಸ್ತ್ರಾಸ್ತ್ರ ಮಾರಾಟಕ್ಕೆ ಅಂಗೀಕಾರವನ್ನು ನೀಡಿದ್ದಾರೆ. ಈ ಶಸ್ತ್ರಾಸ್ತ್ರಗಳಲ್ಲಿ ಬಾಂಬುಗಳು ಕೂಡ ಸೇರಿವೆ. ಒಂದು ಕಡೆ ಶಾಂತಿಗಾಗಿ ಪ್ರಯತ್ನ ನಡೆಯುತ್ತಿರುವಂತೆಯೇ ಇನ್ನೊಂದು ಕಡೆ ಗಾಝಾದಲ್ಲಿ ಮಕ್ಕಳು ಮತ್ತು ಮಹಿಳೆಯರನ್ನು ಹತ್ಯೆ ಮಾಡುವುದಕ್ಕೆ ಪ್ರೇರಣೆ ಕೊಡಬಹುದಾದ ರೀತಿಯಲ್ಲಿ ಶಸ್ತ್ರಾಸ್ತ್ರಗಳನ್ನು ಅಮೆರಿಕ ಇಸ್ರೇಲ್ ಗೆ ಮಾರಾಟ ಮಾಡುತ್ತಿರುವುದು ವಿಡಂಬನೆಯಾಗಿದೆ.

ಗಾಝಾದಲ್ಲಿ ಈಗಾಗಲೇ ಇಸ್ರೇಲ್ 44,000 ಕ್ಕಿಂತಲೂ ಅಧಿಕ ಮಂದಿಯ ಹತ್ಯೆ ನಡೆಸಿದೆ. ಸಿರಿಯಾದಲ್ಲಿ ಮತ್ತು ಲೆಬನಾನ್ ನಲ್ಲಿ ಕೂಡ ಹತ್ಯೆ ನಡೆಸಿದೆ. ಇಂತಹ ಸಂದರ್ಭಗಳಲ್ಲಿ ಇಸ್ರೇಲ್ ಗೆ ಅಮೆರಿಕ ಶಸ್ತ್ರಾಸ್ತ್ರ ಮಾರಾಟ ಮಾಡುವುದು ಅದರ ದ್ವಂದ್ವವನ್ನು ತೋರಿಸುತ್ತದೆ ಎಂದು ಹೇಳಲಾಗಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ