ಕಾರಿನ ಡೋರ್ ಲಾಕ್: ಉಸಿರುಗಟ್ಟಿ ಸಾವನ್ನಪ್ಪಿದ ಮೂವರು ಮಕ್ಕಳು - Mahanayaka
11:57 AM Friday 20 - September 2024

ಕಾರಿನ ಡೋರ್ ಲಾಕ್: ಉಸಿರುಗಟ್ಟಿ ಸಾವನ್ನಪ್ಪಿದ ಮೂವರು ಮಕ್ಕಳು

car
05/06/2022

ಚೆನ್ನೈ: ಕಾರಿನೊಳಗೆ ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಡೋರ್ ಲಾಕ್​ ​ಆಗಿ ಓರ್ವ ಬಾಲಕಿ ಸೇರಿ ಮೂವರು ಮಕ್ಕಳು ಉಸಿರುಗಟ್ಟಿ ಸಾವನ್ನಪ್ಪಿದ ಘಟನೆ ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯಲ್ಲಿ ನಡೆದಿದೆ.

ಕಬಿಶಾಂತ್(4)ನಿತೀಶಾ (7)ನಿತೀಶ್ (5 ಮೃತಪಟ್ಟ ಮಕ್ಕಳಾಗಿದ್ದು, ಪನಂಗುಡಿ ಸಮೀಪದ ಲೆಪ್ಪಾಯಿ ಅಪಾರ್ಟ್‌ಮೆಂಟ್‌ ಬಳಿ ಈ ಘಟನೆ ಜರುಗಿದ್ದು,ಮೃತ ನಿತೀಶ್ ಹಾಗೂ ನಿತೀಶಾ ಇಬ್ಬರೂ ನಾಗರಾಜ ಎಂಬುವರ ಮಕ್ಕಳಾಗಿದ್ದಾರೆ. ಕಬಿಶಾಂತ್ ಸುಧಾಕರ್ ಎಂಬುವರ ಮಗನಾಗಿದ್ದಾನೆ.

ನಾಗರಾಜನ ಸಹೋದರ ಮಣಿಕಂದನ್​​ಗೆ ಸೇರಿದ ಕಾರಿನಲ್ಲಿ ಮೂವರು ಮಕ್ಕಳು ಆಟವಾಡುತ್ತಿದ್ದರು. ಆದರೆ ಕಾರಿನ ಡೋರ್ ಲಾಕ್ ಆಗಿದ್ದ ಮಕ್ಕಳು ಉಸಿರಾಟದ ಸಮಸ್ಯೆ ಎದುರಿಸಿ ಕಾರಿನ ಡೋರ್​ ತೆರೆಯಲು ಸಾಧ್ಯವಾಗದೆ ಮೃತಪಟ್ಟಿದ್ದಾರೆ.  ಮಾಹಿತಿ ಬಗ್ಗೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.


Provided by

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಇತ್ತೀಚಿನ ಸುದ್ದಿ