ಬಾತ್ ರೂಮ್ ನಲ್ಲೇ ತಾಯಿ, ಮಗು ದಾರುಣ ಸಾವು | ಸ್ನಾನದ ಕೋಣೆಯಲ್ಲಿ ದುರಂತ ಸಾವು - Mahanayaka

ಬಾತ್ ರೂಮ್ ನಲ್ಲೇ ತಾಯಿ, ಮಗು ದಾರುಣ ಸಾವು | ಸ್ನಾನದ ಕೋಣೆಯಲ್ಲಿ ದುರಂತ ಸಾವು

bangalore
16/01/2022

ಬೆಂಗಳೂರು: ಸ್ನಾನಕ್ಕೆ ಮಾಡಲೆಂದು ಬಾತ್ ರೂಮ್ ಹೋಗಿದ್ದ ತಾಯಿ ಮಗಳು, ಉಸಿರುಗಟ್ಟಿ ಬಾತ್ ರೂಮ್ ನಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ  ಬೆಂಗಳೂರಿನಲ್ಲಿ ನಡೆದಿದೆ.

ನಗರದ ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, 35 ವರ್ಷ ವಯಸ್ಸಿನ ಮಂಗಳ ಹಾಗೂ ಅವರ 7 ವರ್ಷ ವಯಸ್ಸಿನ ಪುತ್ರಿ ಗೌತಮಿ ಮೃತಪಟ್ಟವರು ಎಂದು ಗುರುತಿಸಲಾಗಿದೆ.

ಬೆಂಗಳೂರು ಉತ್ತರ ತಾಲೂಕಿನ ಚಿಕ್ಕಬಾಣಾವರದಲ್ಲಿ ಈ ದುರಂತ ಘಟನೆ ನಡೆದಿದೆ. ಪತಿ ಪತಿ ನರಸಿಂಹಮೂರ್ತಿ ಕೆಲಸಕ್ಕೆಂದು ಹೊರಗೆ ಹೋಗಿದ್ದ ವೇಳೆ ತಾಯಿ ಮಗಳು ಸ್ನಾನಕ್ಕೆ ಬಾತ್ ರೂಮ್ ಗೆ ಹೋಗಿದ್ದಾರೆ. ಈ ವೇಳೆ ಗೀಸರ್ ಆನ್ ಮಾಡಿ ಸ್ನಾನಕ್ಕೆ ಇಳಿದಿದ್ದಾರೆ ಎನ್ನಲಾಗಿದೆ.

ಗೀಸರ್ ನಿಂದ ಅನಿಲ ಸೋರಿಕೆಯಾಗಿದ್ದು, ಪರಿಣಾಮವಾಗಿ ತಾಯಿಮಗಳು ಇಬ್ಬರು ಕೂಡ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಮಾಲಿಕರ ಮನೆಯ ಮಹಿಳೆ ಮನೆಯ ಬಳಿಗೆ ಬಂದ ವೇಳೆ ತಾಯಿ ಮಗಳು ಮೃತಪಟ್ಟಿರುವ ವಿಚಾರ ಬೆಳಕಿಗೆ ಬಂದಿದೆ.

ಗೀಸರ್ ಬಳಕೆಯ ವೇಳೆ ಜನರು ಜಾಗೃತರಾಗಿರಬೇಕು. ಸ್ನಾನ ಮಾಡುವ ವೇಳೆ ಯಾವುದೇ ಕಾರಣಕ್ಕೂ ಗೀಸರ್ ಆನ್ ಮಾಡಿರಬಾರದು. ಸ್ನಾನಕ್ಕೂ ಮೊದಲೇ ನೀರು ಬಿಸಿಯಾಗಲು ಬಿಟ್ಟು ಆ ಬಳಿಕ ಸ್ನಾನಕ್ಕೆ ಇಳಿಯಬೇಕು. ಗೀಸರ್ ನಿಂದ ಹೊರ ಸೂಸುವ ಅನಿಲ ವಿಷಕಾರಿಯಾಗಿದ್ದು, ಇದಕ್ಕೆ ಇತ್ತೀಚೆಗೆ ಸಾಕಷ್ಟು ಜನರು ಬಲಿಯಾಗುತ್ತಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಹಾಡಹಗಲೇ ಮನೆಗೆ ನುಗ್ಗಿ ಮಹಿಳೆಗೆ ಗುಂಡು ಹಾರಿಸಿ ಬರ್ಬರ ಹತ್ಯೆ

ಭಾರತದ ಕೃಷಿ ಅಪಾಯಕಾರಿ ಭವಿಷ್ಯದತ್ತ: ಕೇಂದ್ರ ಗೃಹ ಸಚಿವ ಅಮಿತ್ ಶಾ

ಪಾಕ್‌ ಸಹಕಾರ ಪಡೆದುಕೊಳ್ಳುವ ಪರಿಸ್ಥಿತಿ ಅಫ್ಗಾನ್‌ ಗೆ ಬಂದಿಲ್ಲ: ಹಮೀದ್ ಕರ್ಜೈ

ಲಂಚ ಪ್ರಕರಣ: ಸಿಬಿಐನಿಂದ ಗೇಲ್‌ ನಿರ್ದೇಶಕನ ಇ.ಎಸ್.ರಂಗನಾಥನ್ ಬಂಧನ

ಬೆಳಗಾವಿಯಲ್ಲಿ ಮತ್ತೆ ಕನ್ನಡ ನಾಮಫಲಕಕ್ಕೆ ಮಸಿ ಬಳಿದ ಕಿಡಿಗೇಡಿಗಳು

ಇತ್ತೀಚಿನ ಸುದ್ದಿ