ಪಿಯುಸಿ ವಿದ್ಯಾರ್ಥಿನಿಯನ್ನು ಉಸಿರುಗಟ್ಟಿಸಿ ಹತ್ಯೆ!?

09/03/2021

ಕೋಲಾರ: ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯೋರ್ವಳು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಮುಳಬಾಗಿಲು ನಗರದ ಹೊಸಪಾಳ್ಯದಲ್ಲಿ ನಡೆದಿದ್ದು,  ಬಾಡಿಗೆ ಮನೆಯೊಂದರಲ್ಲಿ ಈ ಘಟನೆ ನಡೆದಿದೆ.

18 ವರ್ಷ ವಯಸ್ಸಿನ ಪ್ರಿಯಾಂಕ ಮೃತಪಟ್ಟ ಯುವತಿಯಾಗಿದ್ದಾಳೆ. ಶ್ರೀನಿವಾಸಪುರ ಮೂಲದ ಯುವತಿಯ ಕುಟುಂಬ ಮುಳಬಾಗಿಲು ನಗರದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಸೋಮವಾರ ಸಂಜೆ ಮನೆಯ ಬಳಿಯಲ್ಲಿ ಓಡಾಡಿಕೊಂಡಿದ್ದ ಯುವತಿ ತನ್ನ ಮನೆಯೊಳಗೆ ಮಲಗಿದ ಸ್ಥಿತಿಯಲ್ಲಿ ಸಾವನ್ನಪ್ಪಿದ್ದಾಳೆ.

ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಗೆ ನುಗ್ಗಿದ ಯಾರೋ ಯುವತಿಯನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾರೆ ಎಂಬ ಅನುಮಾನಗಳು ಸದ್ಯ ಕೇಳಿ ಬಂದಿವೆ.  ಈ ಸಂಬಂಧ ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇತ್ತೀಚಿನ ಸುದ್ದಿ

Exit mobile version