ಮಾಜಿ ಸಚಿವ ಯು.ಟಿ.ಖಾದರ್ ಅವರ ಕಾರು ಕಂಟೈನರ್ ಗೆ ಡಿಕ್ಕಿ! - Mahanayaka

ಮಾಜಿ ಸಚಿವ ಯು.ಟಿ.ಖಾದರ್ ಅವರ ಕಾರು ಕಂಟೈನರ್ ಗೆ ಡಿಕ್ಕಿ!

ut kharar
14/04/2021

ದಾವಣಗೆರೆ:  ಮಾಜಿ ಸಚಿವ ಯು.ಟಿ.ಖಾದರ್ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿರುವ ಘಟನೆ ದಾವಣಗೆರೆಯಲ್ಲಿ ನಡೆದಿದ್ದು, ಖಾದರ್ ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

ದಾವಣಗೆರೆ ಜಿಲ್ಲೆ ಆನುಗೋಡು ಬಳಿಯಲ್ಲಿ ಚಲಿಸುತ್ತಿದ್ದ ಕಂಟೈನರ್ ಗೆ ಖಾದರ್ ಅವರು ಪ್ರಯಾಣಿಸುತ್ತಿದ್ದ ಕಾರು ಡಿಕ್ಕಿಯಾಗಿದೆ ಎಂದು ವರದಿಯಾಗಿದೆ.  ಪರಿಣಾಮವಾಗಿ ಕಾರು ನಜ್ಜುಗುಜ್ಜಾಗಿದೆ. ಈ ವೇಳೆ ಅದೃಷ್ಟವಶಾತ್ ಯು.ಟಿ.ಖಾದರ್ ಅವರು ಅಪಾಯದಿಂದ ಪರಾಗಿದ್ದಾರೆ.

ಇನ್ನೊಂದು ವರದಿಯ ಪ್ರಕಾರ ಖಾದರ್ ಅವರ ಕಾರು ಚಾಲಕನಿಗೆ ಗಂಭೀರವಾಗಿ ಗಾಯವಾಗಿದೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಎಸ್ ಪಿ ಹನುಮಂತರಾಯ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಯ ಬಳಿಕ ಖಾದರ್ ಮತ್ತೊಂದು ಕಾರಿನ ಮೂಲಕ ಸ್ಥಳದಿಂದ ಸುರಕ್ಷಿತವಾಗಿ ತೆರಳಿದ್ದಾರೆ ಎಂದು ತಿಳಿದು ಬಂದಿದೆ.

ಇತ್ತೀಚಿನ ಸುದ್ದಿ