ಅನುಮಾನಾಸ್ಪದ ನಂಬರ್ ನಿಂದ ಕರೆ ಬಂದ ಬಗ್ಗೆ ದೂರು ನೀಡಿದ ಯು.ಟಿ.ಖಾದರ್
ನನಗೆ ನಕಲಿ ನಂಬರ್ ನಲ್ಲಿ ಕಾಲ್ ಮತ್ತು ಮೆಸೇಜ್ ಬಂದಿರುವ ಬಗ್ಗೆ ತನಿಖೆ ನಡೆಸುವಂತೆ ಮಂಗಳೂರು ಕ್ಷೇತ್ರದ ಶಾಸಕ ಯು ಟಿ ಖಾದರ್ ಅವರು ಮಂಗಳೂರು ನಗರ ಪೊಲೀಸ್ ಕಮಿಷನರ್ ಅವರಿಗೆ ದೂರು ನೀಡಿದ್ದಾರೆ.
ತಾನು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಂದರ್ಭದಲ್ಲಿ ಮಧ್ಯಾಹ್ನ 1.33ರ ಸುಮಾರಿಗೆ 7996664000 ಸಂಖ್ಯೆಯ ಮೊಬೈಲ್‌ನಿಂದ ಎರಡು ಬಾರಿ ಕರೆ ಬಂದಿದೆ. ಆದರೆ ಕರೆ ಸ್ವೀಕರಿಸಿರಲಿಲ್ಲ.
ಬಳಿಕ ಸಭೆ ಮುಗಿಸಿ ಮೊಬೈಲ್ ನೋಡಿದಾಗ ಇದರಲ್ಲಿ ಅದರಲ್ಲಿ ಕಾಲ್ ಮಿ ಎಂದು ಬರೆದಿತ್ತು. ಈ ಮೊಬೈಲ್ ಸಂಖ್ಯೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಹೆಸರಿನಲ್ಲಿ ಸೇವ್ ಮಾಡಲಾಗಿತ್ತು. ಟ್ರೂಕಾಲರ್‌ನಲ್ಲಿ ವೀಕ್ಷಿಸಿದಾಗ ಇದು ನಕಲಿ ಹೆಸರಿನಲ್ಲಿ ಬಂದ ಕರೆ ಎಂದು ಗೊತ್ತಾಗಿದೆ. ಆದರಿಂದ ಈ ಬಗ್ಗೆ ಕಾಲ್ ಮಾಡಿದವರು ಯಾರು ಮತ್ತು ಯಾಕಾಗಿ ಮಾಡಿದರು ಎಂದು ತಿಳಿಯಲು ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ಯು ಟಿ ಖಾದರ್ ಅವರು ಕಮಿಷನರ್ ಅವರಿಗೆ ದೂರು ನೀಡಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw