ಪೊಲೀಸರು ನಾಯಿ ಥರ ಮರಳು ದಂಧೆಕೋರರ ಹಿಂದೆ ಹೋಗ್ತಾರಲ್ವಾ, ನಾಚಿಕೆ ಆಗೋಲ್ವಾ?: ಯು.ಟಿ.ಖಾದರ್ ಗರಂ
ಅಕ್ರಮ ಮರಳು ದಂಧೆಕೋರರನ್ನು ಬೆಂಬಲಿಸುವ ಪೊಲೀಸರ ವಿರುದ್ಧ ಗರಂ ಆದ ಶಾಸಕ ಯು.ಟಿ.ಖಾದರ್ ಅವರನ್ನು ತರಾಟೆಗೆ ತೆಗೆದುಕೊಂಡ ಘಟನೆ ಮಂಗಳೂರಲ್ಲಿ ನಡೆಯಿತು.
ಮಂಗಳೂರು ಹೊರವಲಯದ ಅಂಬ್ಲಮೊಗರು, ಮುನ್ನೂರು ಭಾಗದಲ್ಲಿ ವ್ಯಾಪಕವಾಗಿ ಮರಳು ದಂಧೆ ನಡೆಯುತ್ತಿದೆ. ಉಳಿಯ ನದಿ ಪಾತ್ರಗಳಲ್ಲೂ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ. ಉಳ್ಳಾಲ ಪೊಲೀಸರಿಂದ ಮರಳು ದಂಧೆಗೆ ಸಾಥ್ ನೀಡುತ್ತಿದ್ದಾರೆಂಬ ಆರೋಪ ಕೇಳಿ ಬಂದಿತ್ತು. ಇದೀಗ ಅಕ್ರಮ ಮರಳು ದಂಧೆಯಿಂದ ತನ್ನ ಮನೆ ಹಾನಿಗೊಳಗಾಗುತ್ತಿದೆ ಎಂದು ಉಳ್ಳಾಲದ ರಾಣಿಪುರ ನಿವಾಸಿಯೊಬ್ಬರು ಕದ್ರಿ ಸರ್ಕ್ಯೂಟ್ ಹೌಸ್ ಗೆ ಬಂದು ಶಾಸಕ ಖಾದರ್ ಹಾಗೂ ವರದಿಗಾರರ ಮುಂಭಾಗ ಕಣ್ಣೀರಿಟ್ರು.
ಇದ್ರಿಂದ ಗರಂ ಆದ ಅವರು ತಕ್ಷಣ ಉಳ್ಳಾಲ ಇನ್ ಸ್ಪೆಕ್ಟರ್ ಸಂದೀಪ್ ಹಾಗೂ ಎಸಿಪಿಯವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಪೊಲೀಸರು ನಾಯಿ ಥರ ಮರಳು ದಂಧೆಕೋರರ ಹಿಂದೆ ಹೋಗ್ತಾರಲ್ವಾ, ನಾಚಿಕೆ ಆಗೋಲ್ವಾ?. ರಾಣಿಪುರ ಮೂಲಕವೇ ಅಕ್ರಮವಾಗಿ ಮರಳು ಸಾಗುತ್ತಿದೆ.ನಿಮ್ಮ ಚೆಕ್ಕಿಂಗ್ ಎಲ್ಲಾ ನಮಗೆ ಗೊತ್ತಿದೆ. ತಕ್ಷಣ ರೈಡ್ ಮಾಡಿ ಸೀಝ್ ಮಾಡಿ. ಪೊಲೀಸರನ್ನು ಮರಳಿನವರು ಕಂಟ್ರೋಲ್ ಮಾಡ್ತಿದ್ದಾರಾ? ನಿಮಗೇಕೆ ಅವರ ಹೆದರಿಕೆ..?
ಒಂದು ವಾರದಿಂದ ಊರಿನವರು ಇಲ್ಲಿ ಬಂದು ಕೂಗುತ್ತಿದ್ದಾರೆ. ನಿಮಗೆ ಅದನ್ನು ತಡೆಯಲು ಆಗಲ್ವಾ? ಪೊಲೀಸರು ಸರಿ ಇದ್ದಲ್ಲಿ ಇದೆಲ್ಲಾ ಆಗುತ್ತಾ? ನೀವೇ ಖುದ್ದು ಹೋಗಿ ನಿಲ್ಲಿಸಿ ಎಂದು ಪೊಲೀಸ್ ಅಧಿಕಾರಿಗೆ ಶಾಸಕ ಖಾದರ್ ಖಡಕ್ಕಾಗಿ ವಾರ್ನಿಂಗ್ ನೀಡಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw