ಸಚಿವ ಸ್ಥಾನ ಎಲ್ಲರಿಗೆ ಸಿಗುತ್ತದೆ. ಆದ್ರೆ ಸಭಾಧ್ಯಕ್ಷ ಸ್ಥಾನ ಎಲ್ಲರಿಗೂ ಸಿಗಲ್ಲ: ಸ್ಪೀಕರ್ ಖಾದರ್
ರಾಜ್ಯ ವಿಧಾನಸಭೆಯ ನೂತನ ಸ್ಪೀಕರ್ ಆಗಿ ಆಯ್ಕೆಗೊಂಡ ಯು.ಟಿ.ಖಾದರ್ ಅವರು ಇಂದು ಮಂಗಳೂರಿಗೆ ಆಗಮಿಸಿದರು. ಸ್ಪೀಕರ್ ಆಗಿ ಅಧಿಕಾರ ಸ್ವೀಕರಿಸಿದ ಬಳಿಕ ತವರು ಜಿಲ್ಲೆಗೆ ಪ್ರಥಮ ಬಾರಿಗೆ ಭೇಟಿ ನೀಡಿದ ಯು.ಟಿ.ಖಾದರ್ ಕದ್ರಿ ಸರ್ಕ್ಯೂಟ್ ಹೌಸ್ ನಲ್ಲಿ ಸಾರ್ವಜನಿಕರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ಇದೇ ವೇಳೆ ಅನೇಕ ಗಣ್ಯರು ನೂತನ ಸ್ಪೀಕರ್ ಗೆ ಶುಭಾಶಯ ಕೋರಿದರು. ಇದೆ ವೇಳೆ ಮಾತನಾಡಿದ ಅವರು, ಸ್ಪೀಕರ್ ಸ್ಥಾನದಲ್ಲಿದ್ರೂ ಜನರ ಜೊತೆಗೆ ಎಂದಿಗೂ ನಿಕಟ ಸಂಪರ್ಕದಲ್ಲಿರುತ್ತೇನೆ. ಉಳ್ಳಾಲ ಕ್ಷೇತ್ರದ ಸೇವೆ ಮಾಡ್ತೇನೆ. ನನ್ನ ಕ್ಷೇತ್ರ ಸೇವೆಗೆ ಸ್ಪೀಕರ್ ಸ್ಥಾನ ಎಂದೂ ಅಡ್ಡಿಬರಲ್ಲ ಎಂದು ಹೇಳಿದ್ರು.
ಸ್ಪೀಕರ್ ಸ್ಥಾನದ ಬಗ್ಗೆ ಹೆಚ್ಚಿನವರಿಗೆ ತಿಳುವಳಿಕೆ ಇಲ್ಲ. ಸ್ಪೀಕರ್ ಆದ್ರೆ ನಾನು ಜನರ ಕೈಗೆ ಸಿಗಲ್ಲ ಎಂಬ ಪ್ರೀತಿಯ ಆತಂಕ ಜನರಿಗಿದೆ. ಇದ್ರ ಬಗ್ಗೆ ಕೆಲವೇ ದಿನಗಳಲ್ಲಿ ಜನರಿಗೆ ತಿಳಿಯಲಿದೆ. ನಾನು ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆ ಎಂದ ಅವರು, ಸಚಿವ ಸ್ಥಾನ ಎಲ್ಲರಿಗೆ ಸಿಗುತ್ತದೆ. ಆದ್ರೆ ಸಭಾಧ್ಯಕ್ಷ ಸ್ಥಾನ ಎಲ್ಲರಿಗೂ ಸಿಗಲ್ಲ ಅಂದ್ರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw