ಊಟ ನಿರಾಕರಣೆ, ಏಸಿ ಇಲ್ಲದೇ ಚಡಪಡಿಸಿದ ದಿವ್ಯಾ ಹಾಗರಗಿ!
ಕಲಬುರಗಿ: ಪಿಎಸ್ ಐ ನೇಮಕಾತಿ ಪರೀಕ್ಷೆ ಅಕ್ರಮದ ಕಿಂಗ್ ಪಿನ್ ಎನ್ನಲಾಗಿರುವ ದಿವ್ಯಾ ಹಾಗರಗಿಯನ್ನು ಶುಕ್ರವಾರ ಪೊಲೀಸರು ಬಂಧಿಸಿದ್ದು, ಅವರನ್ನು 11 ದಿನಗಳ ಕಾಲ ನ್ಯಾಯಾಲಯ ಸಿಐಡಿ ಕಸ್ಟಡಿಗೆ ನೀಡಿದೆ.
ಐಶಾರಾಮಿ ಜೀವನ ನಡೆಸಿದ್ದ ದಿವ್ಯಾ ಹಾಗರಗಿ ಅವರಿಗೆ ನಿನ್ನೆ ಹೊಸ ವಾತಾವರಣದಲ್ಲಿ ನಿದ್ದೆ ಬಾರದೇ ಕಂಗೆಟ್ಟಿದ್ದಾರೆ ಎಂದು ವರದಿಯಾಗಿದ್ದು, ನಿನ್ನೆ ರಾತ್ರಿ ಊಟವೂ ಸರಿಯಾಗಿ ಅವರು ಮಾಡಲಿಲ್ಲ ಎನ್ನಲಾಗಿದೆ.
ನಿನ್ನೆ ಊಟ ನೀಡಿದ ವೇಳೆ ಊಟ ಬೇಡ ಎಂದು ಅವರು ನಿರಾಕರಿಸಿದ್ದರು ಎನ್ನಲಾಗಿದೆ. ಆದರೆ ರಾತ್ರಿ ವೇಳೆ ಸ್ವಲ್ಪ ಊಟ ಮಾಡಿದ್ದಾರೆನ್ನಲಾಗಿದೆ. ಕೋಟಿ ಕೋಟಿ ಆಸ್ತಿಯ ಒಡತಿಯಾದರೂ, ಪಿಎಸ್ ಐ ಅಕ್ರಮಕ್ಕೆ ಕೈ ಇಟ್ಟು ಇದೀಗ ದಿವ್ಯಾ ಹಾಗರಗಿ ಪಶ್ಚಾತಾಪಪಡುವಂತಾಗಿದೆ.
ಪಿಎಸ್ ಐ ಅಕ್ರಮ ಪ್ರಕರಣದ ಪ್ರಮುಖ ಆರೋಪಿಯಾಗಿರುವ ದಿವ್ಯಾ ಹಾಗರಗಿ ಕಳೆದ 18 ದಿನಗಳಿಂದ ಮಹಾರಾಷ್ಟ್ರದ ಪುಣೆಯಲ್ಲಿ ತಲೆಮರೆಸಿಕೊಂಡಿದ್ದರು. ಸದ್ಯ ಪೊಲೀಸ್ ಕಸ್ಟಡಿಯಲ್ಲಿರುವ ದಿವ್ಯಾ ಹಾಗರಗಿ ರಾತ್ರಿ ಮಹಿಳಾ ನಿಲಯದಲ್ಲಿ ಕಾಲ ಕಳೆದಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1duNIQRfXnJcfQKWPzNqD
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಶಾಕಿಂಗ್ ನ್ಯೂಸ್: ಬಿಸಿಲಿನ ತಾಪಕ್ಕೆ ಸುಟ್ಟು ಹೋದ ಯುವಕನ ಬೆನ್ನು!
ಭಾರತ ಹಿಂದಿ ಭಾಷಿಗರದ್ದು, ಹಿಂದಿಯನ್ನು ಪ್ರೀತಿಸದವರು ಭಾರತ ಬಿಟ್ಟು ಹೋಗಿ: ಉತ್ತರ ಪ್ರದೇಶ ಸಚಿವ
ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ: ನಾಲ್ವರ ದಾರುಣ ಸಾವು
ಕೋಳಿಯನ್ನು ಜೀವಂತವಾಗಿ ಅಂಗಾಂಗ ಕಿತ್ತು ಕೊಂದ ಕೋಳಿ ಅಂಗಡಿ ಮಾಲಿಕ ಅರೆಸ್ಟ್!