ಉತ್ತರ ಪ್ರದೇಶ: ಗುಂಡಿಟ್ಟು ಬಿಜೆಪಿ ನಾಯಕನ ಹತ್ಯೆ - Mahanayaka
1:11 AM Wednesday 11 - December 2024

ಉತ್ತರ ಪ್ರದೇಶ: ಗುಂಡಿಟ್ಟು ಬಿಜೆಪಿ ನಾಯಕನ ಹತ್ಯೆ

shoot
23/03/2022

ಲಕ್ನೋ: ಬಿಜೆಪಿ ಯುವ ಘಟಕದ ಮಾಜಿ ಕಾರ್ಯದರ್ಶಿಯವರನ್ನು ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದ ಮಹಾರಾಜ್‌ಗಂಜ್ ಜಿಲ್ಲೆಯಲ್ಲಿ ನಡೆದಿದೆ.

ಮಹಾರಾಜ್‌ಗಂಜ್ ನಗರ ಪಾಲಿಕೆಯ ಅಧ್ಯಕ್ಷ ಕೃಷ್ಣ ಗೋಪಾಲ್ ಜೈಸ್ವಾಲ್ ಅವರ ಅಳಿಯನಾಗಿದ್ದ ಗೌರವ್ ಜೈಸ್ವಾಲ್ (35) ಹತ್ಯೆಯಾದ ಬಿಜೆಪಿ ಯುವ ಘಟಕದ ಮಾಜಿ ಕಾರ್ಯದರ್ಶಿ. ಇವರು ಸಕ್ರಿಯ ಬಿಜೆಪಿ ಕಾರ್ಯಕರ್ತರಾಗಿದ್ದರು ಮತ್ತು ಪಕ್ಷದ ಸ್ವಚ್ಛತಾ ಅಭಿಯಾನದ ಸಹ ಸಂಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದರು.

ಸದರ್ ಪೊಲೀಸ್ ವೃತ್ತದ ಅಡಿಯಲ್ಲಿ ಚಿಯುರಾಹಾ ಕ್ರಾಸಿಂಗ್ ಬಳಿಯಿರುವ ಬಿರಿಯಾನಿ ಶಾಪ್ ಬಳಿ ಜೈಸ್ವಾಲ್ ಕುಳಿತಿದ್ದಾಗ ಘಟನೆ ನಡೆದಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಜೈಸ್ವಾಲ್ ಅವರೊಂದಿಗೆ ದುಷ್ಕರ್ಮಿಗಳು ವಾಗ್ವಾದ ನಡೆಸಿದ್ದಾರೆ ಬಳಿಕ ಏಕಾಏಕಿ ಗುಂಡು ಹಾರಿಸಿದ್ದಾರೆ. ಕೂಡಲೇ ಜೈಸ್ವಾಲ್ ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ, ಆ ವೇಳೆಗಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ ಎಂದು ಮಹಾರಾಜ್‌ಗಂಜ್ ಎಸ್‌ಪಿ ಪ್ರದೀಪ್ ಗುಪ್ತಾ ತಿಳಿಸಿದ್ದಾರೆ.

ಪ್ರಾಥಮಿಕ ಮಾಹಿತಿ ಪ್ರಕಾರ, ಮನೆಯಲ್ಲಿದ್ದ ಜೈಸ್ವಾಲ್ ಅವರಿಗೆ ಅಪರಿಚಿತ ನಂಬರ್‌ನಿಂದ ಕರೆ ಬಂದಿದೆ. ಆಗ ಅವರು ಮನೆಯಿಂದ ಹೊರ ನಡೆದಿದ್ದಾರೆ. ಜೈಸ್ವಾಲ್ ಅವರಿಗೆ ಯಾರೊಬ್ಬರು ಶತ್ರುಗಳು ಇರಲಿಲ್ಲ ಮತ್ತು ಯಾರೊಂದಿಗೂ ಯಾವುದೇ ಧ್ವೇಷವಿರಲಿಲ್ಲ ಎಂದು ಕುಟುಂಬಸ್ಥರು ತಿಳಿಸಿರುವುದಾಗಿ ಎಸ್‌ಪಿ ಮಾಹಿತಿ ನೀಡಿದ್ದಾರೆ.

ಜೈಸ್ವಾಲ್ ಅವರ ಸಾವಿನ ಸುದ್ದಿ ಹರಡುತ್ತಿದ್ದಂತೆ ಆ ಪ್ರದೇಶದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಆರೋಪಿಗಳ ಪತ್ತೆಗೆ ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

ಪೊಲೀಸರ ಪ್ರಕಾರ, ದುಷ್ಕರ್ಮಿಗಳು ಜೈಸ್ವಾಲ್ ಅವರ ಹಣೆಗೆ ಶೂಟ್ ಮಾಡಿ, ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಸಂಬಂಧ ಎಫ್‌ಐಆರ್ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ವಿಶ್ವದ ನಂಬರ್ 1 ಟೆನಿಸ್‌ ಆಟಗಾರ್ತಿ ಆಶ್ಲೆ ಬಾರ್ಟಿ ನಿವೃತ್ತಿ

‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಮೂಲಕ ಜನರನ್ನು ಸಂಘ ಪರಿವಾರ ಬೇರ್ಪಡಿಸುತ್ತಿದೆ: ಬೃಂದಾ ಕಾರಟ್ ಆರೋಪ

ಮುಸ್ಲಿಮ್ ವ್ಯಾಪಾರಿಗಳಿಗೆ ಬಹಿಷ್ಕಾರ: ಪಾಪ್ಯುಲರ್ ಫ್ರಂಟ್ ಪ್ರತಿಕ್ರಿಯೆ ಏನು?

ಬರೋಬ್ಬರಿ 6 ಆಟೋಗಳನ್ನು ಕಳವು ಮಾಡಿದ್ದ 16 ವರ್ಷದ ಬಾಲಕನ ಸೆರೆ

ಇತ್ತೀಚಿನ ಸುದ್ದಿ