Uthra murder case: ಪತ್ನಿಯನ್ನು ಹಾವಿನಿಂದ ಕಚ್ಚಿಸಿ ಕೊಂದವನಿಗೆ ಜೀವಾವಧಿ ಶಿಕ್ಷೆ
ತಿರುವನಂತಪುರಂ: ಪತ್ನಿಯನ್ನು ಹಾವಿನಿಂದ ಕಚ್ಚಿಸಿ ಹತ್ಯೆ ಮಾಡಿದ ಪ್ರಕರಣ(Uthra murder case)ಕ್ಕೆ ಸಂಬಂಧಿಸಿದಂತೆ ಪತಿಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಕೇರಳದ ಉತ್ತರ ಹತ್ಯೆ ಪ್ರಕರಣ ಪೊಲೀಸರ ನಿಷ್ಪಕ್ಷಪಾತ ತನಿಖೆಯ ಬಳಿಕ ಇದೀಗ ಅಪರಾಧಿಗೆ ಶಿಕ್ಷೆ ವಿಧಿಸಲಾಗಿದೆ.
ಭಾರತೀಯ ದಂಡ ಸಂಹಿತೆ ಸೆಕ್ಷನ್ 302(ಕೊಲೆ), 307(ಕೊಲೆ ಯತ್ನ), 328(ವಿಷ ವಸ್ತುಗಳಿಂದ ಕೊಲೆ) ಮತ್ತು 201 (ಸಾಕ್ಷ್ಯ ನಾಶ) ಅಡಿಯಲ್ಲಿ, ವೈಜ್ಞಾನಿಕ ಸಾಕ್ಷಿಗಳನ್ನು ಆಧಾರವಾಗಿಟ್ಟುಕೊಂಡು ಕೋರ್ಟ್ ನಿನ್ನೆ ಆರೋಪಿಯನ್ನು ದೋಷಿ ಎಂದು ತೀರ್ಪು ನೀಡಿತ್ತು. ಇಂದು ಉತ್ತರ ಪತ್ನಿ ಸೂರಜ್ ಗೆ ಜೀವಾವಧಿ ಶಿಕ್ಷೆಯನ್ನು ಪ್ರಕಟಿಸಲಾಗಿದೆ.
ಪತಿ ಸೂರಜ್ ತನ್ನ ಪತ್ನಿಯನ್ನು ಹಾವಿನಿಂದ ಕಚ್ಚಿಸಿ ಹತ್ಯೆ ಮಾಡಲು ಎರಡು ಬಾರಿ ಯತ್ನಿಸಿದ್ದ. ಆದರೆ, ಮೂರನೇ ಪ್ರಯತ್ನ ಯಶಸ್ವಿಯಾಗಿತ್ತು. 2020ರ ಫೆಬ್ರವರಿ 29ರಂದು ಮೊದಲ ಬಾರಿಗೆ ಪತ್ನಿಗೆ ಹಾವಿನಿಂದ ಕಚ್ಚಿಸಿದ್ದ. ಆದರೆ, ಆಕೆ ಬದುಕುಳಿದಿದ್ದಳು. ಆ ಬಳಿಕ ಮಾರ್ಚ್ 2ರಂದು ಮತ್ತೆ ಆಕೆಗೆ ಹಾವಿನಿಂದ ಕಚ್ಚಿಸಿದ್ದ ಆ ವೇಳೆ ಹಾವು ಕಚ್ಚಿ ಮೂರೂವರೆ ಗಂಟೆಗಳ ಬಳಿಕ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದರಲ್ಲಿ 56 ದಿನಗಳ ವರೆಗೆ ಆಸ್ಪತ್ರೆಯಲ್ಲಿ ಉತ್ತರಾ ನರಳಾಡಿದ ಬಳಿಕ ಪ್ರಾಣಾಪಾಯದಿಂದ ಪಾರಾಗಿದ್ದರು. ಆ ಬಳಿಕ ಮೇ 6, 2020ರ ರಾತ್ರಿ ನಾಗರ ಹಾವನ್ನು ಉತ್ತರಳ ಬೆಡ್ ರೂಮ್ ಗೆ ಬಿಟ್ಟಿದ್ದ ಈ ಸಂದರ್ಭದಲ್ಲಿ ಆಸ್ಪತ್ರೆಗೆ ಸಾಗಿಸದೇ ಸುಮ್ಮನಾಗಿದ್ದಾನೆ. ಪರಿಣಾಮವಾಗಿ ಪತ್ನಿ ವಿಷ ಏರಿ ಸಾವನ್ನಪ್ಪಿದ್ದಳು.
ಈ ಪ್ರಕರಣದಲ್ಲಿ ವೈಜ್ಞಾನಿಕ ಸಾಕ್ಷಿಗಳೇ ಪ್ರಮುಖವಾಗಿ ಕೆಲಸ ಮಾಡಿದವು. ಈ ಹತ್ಯೆಯನ್ನು ಯಾರೂ ನೋಡಿದವರಿಲ್ಲ. ಜೊತೆಗೆ ಪದೇ ಪದೇ ಒಬ್ಬರಿಗೇ ಹಾವು ಕಚ್ಚುತ್ತಿರುವುದು ಸ್ವಾಭಾವಿಕವಾದ ಘಟನೆ ಎಂದು ನಂಬಲು ಸಾಧ್ಯವಿಲ್ಲ. ಈ ಜಾಡನ್ನು ಹಿಡಿದು ತನಿಖೆ ನಡೆಸಿದಾಗ ಪತಿ ಸೂರಜ್ ನ ಕ್ರೂರತೆ ಬಯಲಾಗಿತ್ತು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಇನ್ನಷ್ಟು ಸುದ್ದಿಗಳು…
ನಿರಂತರ ಮಳೆಗೆ ವಾಲಿ ನಿಂತ ಕಟ್ಟಡ: ಯಾವುದೇ ಸಮಯದಲ್ಲಿ ಕಟ್ಟಡ ಕುಸಿಯುವ ಭೀತಿ
ಬಿಜೆಪಿ ಅಭ್ಯರ್ಥಿಗೆ ಸಿಕ್ಕಿದ್ದು ಕೇವಲ ಒಂದೇ ಮತ | ತನ್ನ ಕುಟುಂಬದ 5 ಮಂದಿಯೂ ಬಿಜೆಪಿಗೆ ವೋಟ್ ಹಾಕಲಿಲ್ಲ!
SSLC ಪರೀಕ್ಷೆ ಪಾಸ್ ಆದ ವಿದ್ಯಾರ್ಥಿಗಳಿಗೆ 15 ಸಾವಿರ ರೂ. ಪ್ರೋತ್ಸಾಹ ಧನ
ಮದುವೆ ಆದರೂ ‘ಸಿಂಗಲ್’ ಆಗಿರುವ ಮೋದಿ ಬಗ್ಗೆ ಮಾತನಾಡುವ ಧೈರ್ಯ ನಿಮಗಿದೆಯೇ? | ಸುಧಾಕರ್ ಗೆ ಕುಟುಕಿದ ಕಾಂಗ್ರೆಸ್