ಉಯ್ಯಾಲೆಯೇ ಉರುಳಾಯ್ತು | ಆಟವಾಡುತ್ತಿದ್ದ ಇಬ್ಬರು ಮಕ್ಕಳ ದಾರುಣ ಸಾವು
01/07/2021
ಮಡಿಕೇರಿ: ಮಕ್ಕಳಿಬ್ಬರು ಸೀರೆಯನ್ನು ಮೇಲ್ಛಾವಣಿಗೆ ಜೋಕಾಲಿಯಾಗಿ ಆಟವಾಡುತ್ತಿದ್ದ ಸಂದರ್ಭದಲ್ಲಿ ಸಾವನ್ನಪ್ಪಿರುವ ದಾರುಣ ಘಟನೆ ಸೋಮವಾರ ಪೇಟೆ ತಾಲೂಕಿನ ಗಣಗೂರು ಉಂಜಿಗನಹಳ್ಳಿಯಲ್ಲಿ ನಡೆದಿದೆ.
ಉಂಜಿಗನಹಳ್ಳಿ ನಿವಾಸಿಗಳಾದ ರಾಜು ಹಾಗೂ ಜಯಂತಿ ದಂಪತಿಯ ಮಕ್ಕಳಾದ 14 ವರ್ಷ ವಯಸ್ಸಿನ ಪ್ರತಿಕ್ಷ ಹಾಗೂ 12 ವರ್ಷ ವಯಸ್ಸಿನ ಪೂರ್ಣೇಶ್ ಮೃತಪಟ್ಟ ಮಕ್ಕಳಾಗಿದ್ದಾರೆ. ಸೀರೆಯಿಂದ ಜೋಕಾಲಿ ಕಟ್ಟಿ ಆಟವಾಡುತ್ತಿರುವ ವೇಳೆ ಜೋಕಾಲಿ ಕೊರಳಿಗೆ ಸುತ್ತಿಕೊಂಡಿದ್ದು, ಪರಿಣಾಮವಾಗಿ ಇಬ್ಬರು ಮಕ್ಕಳು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.
ಘಟನೆಯ ಸಂದರ್ಭ ಮನೆಯಲ್ಲಿ ಯಾರೂ ಇರಲಿಲ್ಲ ಎಂದು ಹೇಳಲಾಗಿದೆ. ಹೀಗಾಗಿ ಈ ಅನಾಹುತ ಸಂಭವಿಸಿದೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಸೋಮವಾರಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.