ಪ್ರಧಾನಿ ಬಂದು ಹೋಗುವವರೆಗೂ ಎಲ್ಲಾ ಭದ್ರತೆ ಮಾಡಲಾಗಿದೆ: ಸಚಿವ ಅರಗ ಜ್ಞಾನೇಂದ್ರ
ಮಂಗಳೂರು: ಶುಕ್ರವಾರ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮಂಗಳೂರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಕಾರ್ಯಕ್ರಮ ನಡೆಯುವ ಮಂಗಳೂರು ನಗರದ ಕೂಳೂರಿನಲ್ಲಿರೋ ಗೋಲ್ಡ್ ಫಿಂಚ್ ಸಿಟಿಗೆ ಆರಗ ಜ್ಞಾನೇಂದ್ರ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.
ಸಚಿವರಿಗೆ ಸಂಸದ ನಳೀನ್ ಕುಮಾರ್ ಕಟೀಲ್, ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್ ಕುಮಾರ್, ಶಾಸಕರು ಸಾಥ್ ನೀಡಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿಯವರು ಬಂದು ವಾಪಾಸ್ ಹೋಗುವವರೆಗೆ ಎಲ್ಲಾ ಭದ್ರತೆ ಮಾಡಲಾಗಿದೆ. ಡಿಜಿಪಿ ಮತ್ತು ಎಡಿಜಿಪಿಯವರ ಸಂಪೂರ್ಣ ಭದ್ರತೆ ನೋಡಿಕೊಳ್ತಾರೆ ಮಂಗಳೂರು ಕಮಿಷನರ್ ನೇತೃತ್ವದಲ್ಲಿ ಸಂಪೂರ್ಣ ಭದ್ರತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
100 ಜನ ಉನ್ನತ ಪೊಲೀಸ್ ಅಧಿಕಾರಿಗಳು ಇಲ್ಲಿ ಇರ್ತಾರೆ. ಸುಮಾರು 2,000 ಸಾವಿರ ಸಿವಿಲ್ ಪೊಲೀಸರು ಭದ್ರತೆಗೆ ನೇಮಿಸಲಾಗಿದೆ. ಕೆಎಸ್ಸಾರ್ಪಿ, ಸಿಎಆರ್, ಎಎನ್ ಎಫ್, ಆರ್ ಎಎಫ್, ಕೋಸ್ಟಲ್ ಸೆಕ್ಯೂರಿಟಿ, ಐಎಸ್ ಡಿ ಹಾಗೂ ಗರುಡ ಪಡೆ ಇರುತ್ತೆ. ಒಟ್ಟಾರೆ ಮೂರು ಸಾವಿರ ಪೊಲೀಸ್ ಭದ್ರತೆ ಇರಲಿದೆ. ಸಂಸದ ನಳಿನ್ ಕುಮಾರ್, ಉಸ್ತುವಾರಿ ಸುನೀಲ್ ಉಸ್ತುವಾರಿ ನೋಡ್ತಾ ಇದ್ದಾರೆ ಎಂದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka