ಖಿದ್ಮಾ ಫೌಂಡೇಶನ್ ಕರ್ನಾಟಕ: “ವ್ಯಾಕ್ಸಿನ್ ಮಾರಕವಲ್ಲ, ಪೂರಕ” ಅಂತರ್ಜಾಲ ಅಭಿಯಾನ
06/07/2021
ಮಂಗಳೂರು: ಕೊರೊನಾ ವೈರಸ್ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಖಿದ್ಮಾ ಫೌಂಡೇಶನ್ ಕರ್ನಾಟಕ ಆಯೋಜಿಸಲಾಗಿದ್ದ “ವ್ಯಾಕ್ಸಿನ್ ಮಾರಕವಲ್ಲ, ಪೂರಕ” ಎಂಬ ಜನ ಜಾಗೃತಿ ಅಂತರ್ಜಾಲ ಅಭಿಯಾನ ನಿನ್ನೆ ಸಮಾರೋಪಗೊಂಡಿದೆ.
ವ್ಯಾಪಕವಾಗಿ ಹರಡುತ್ತಿರುವ ಕೊರೊನ ವೈರಸನ್ನು ತಡಗಟ್ಟಲು ಸೂಕ್ತ ಪರಿಹಾರ ವ್ಯಾಕ್ಸಿನ್ ಆಗಿದೆ. ಆದರೆ ಇಂದು ಜನರು ಅದಕ್ಕೆ ಭಯ ಭೀತರಾಗಿ ವ್ಯಾಕ್ಸಿನ್ ಅನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ವ್ಯಾಕ್ಸಿನ್ ನ ಪ್ರಯೋಜನಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸಲು ಈ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.
ಜುಲೈ 1ರಂದು ಪ್ರಾರಂಭಗೊಂಡು ಜುಲೈ 5 ರಂದು ಸಮಾಪ್ತಿಗೊಂಡ ಈ ಅಭಿಯಾನಕ್ಕೆ ಹಲವಾರು ಮಂದಿ ಭಾಗವಹಿಸಿ ಅಭಿಯಾನವನ್ನು ಯಶಸ್ಸುಗೊಳಿಸಿದ್ದಾರೆ. ಖಿದ್ಮಾ ಫೌಂಡೇಶನ್ ರಾಜ್ಯಾಧ್ಯಕ್ಷ ಹಾಶಿಂ ಬನ್ನೂರು, ರಾಜ್ಯ ಪ್ರಧಾನ ಕಾರ್ಯದರ್ಶಿ ಅಮಿತಾ ಅಶೋಕ್ ಪ್ರಸಾದ್ ಇವರ ನೇತೃತ್ವದಲ್ಲಿ ಕಾರ್ಯಕ್ರಮ ಮೂಡಿ ಬಂದಿದೆ ಎಂದು ರಾಜ್ಯ ಸಂಚಾಲಕ ಆಮಿರ್ ಬನ್ನೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.