ವಾಟ್ಸಾಪ್ ಸಂದೇಶ ನಂಬಿ 4 ದಿನ ಮೂತ್ರ ಕುಡಿದ ತಾಯಿ-ಮಕ್ಕಳು
16/02/2021
ಲಂಡನ್: ಸತ್ಯವನ್ನು ಜನರು ನಂಬುವುದಕ್ಕಿಂತಲೂ ಸುಳ್ಳನ್ನು ವದಂತಿಗಳನ್ನು ಹೆಚ್ಚು ನಂಬುತ್ತಾರೆ. ಸದ್ಯ ಭಾರತದಲ್ಲಿ “ವಾಟ್ಸಾಪ್ ಯೂನಿವರ್ಸಿಟಿ” ಎಂದು ಈ ವದಂತಿಗಳನ್ನು ನಂಬುವವರನ್ನು ವ್ಯಂಗ್ಯ ಮಾಡಲು ಪದ ಬಳಕೆ ಮಾಡುತ್ತಾರೆ. ವದಂತಿಗಳನ್ನು ನಂಬುವುದರಲ್ಲಿ ವಿದೇಶಿಯರೇನೂ ಕಡಿಮೆ ಇಲ್ಲ ಎನ್ನುವ ಘಟನೆಗೆ ಸಾಕ್ಷಿ ಎಂಬಂತೆ ಇಲ್ಲೊಂದು ಘಟನೆ ನಡೆದಿದೆ.
ಲಂಡನ್ ನಲ್ಲಿ ಓರ್ವಳು ತಾಯಿ ಹಾಗೂ ಆಕೆಯ ಮಕ್ಕಳು ಸುಳ್ಳು ಸುದ್ದಿಯನ್ನು ನಂಬಿ ನಾಲ್ಕು ದಿನಗಳ ಕಾಲ ಮೂತ್ರ ಕುಡಿದ ಪ್ರಸಂಗ ನಡೆದಿದೆ. ಮೂತ್ರ ಕುಡಿದರೆ ಕೊರೊನಾ ವೈರಸ್ ಬರುವುದಿಲ್ಲ ಎಂದು ಸಂಬಂಧಿಕರೊಬ್ಬರು ವಾಟ್ಸಾಪ್ ನಲ್ಲಿ ಸಂದೇಶ ಕಳುಹಿಸಿದ್ದರು. ಇದನ್ನು ನಂಬಿದ ಕುಟುಂಬ ಬೆಸ್ತು ಬಿದ್ದಿದೆ.
ನಮ್ಮ ಮೂತ್ರವನ್ನು ನಾವೇ ಕುಡಿಯುವುದರಿಂದ ಕೊರೊನಾ ವೈರಸ್ ನಮ್ಮ ಸಮೀಪವೂ ಸುಳಿಯುವುದಿಲ್ಲ ಎಂದು ಸಂದೇಶದಲ್ಲಿ ಹೇಳಲಾಗಿತ್ತು. ಇದನ್ನು ನಂಬಿದ ಕುಟುಂಬ ತಮ್ಮ ಮೂತ್ರವನ್ನು ತಾವೇ ಕುಡಿದಿದ್ದಾರೆ. ಇದಾದ ಬಳಿಕ ಇದು ಸುಳ್ಳು ಸುದ್ದಿ ಎಂದು ತಿಳಿದು ಬಂದಿದೆ.